ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಮ್ಮ ಹಾಸನ ಪುಟ್ಟ ಜ್ಞಾನ ಭಂಡಾರ

0

ಬೇಲೂರು: ವಿಶ್ವ ಪ್ರಸಿದ್ಧ ಶಿಲ್ಪಕಲಾ ನಾಡು ಬೇಲೂರಿನ ಈ ಮಲೆನಾಡು ಭಾಗದ ಅರೇಹಳ್ಳಿ ಗ್ರಾಮದ ಈ ಪುಟ್ಟ ಪೋರಿ ಸಾಧನೆ ಸಿ ಕೇಳಿದ್ರೆ ನೀವು ಅಬ್ಬಾ ಅಂತ ಬಾಯಿ ಮೇಲೆ ಬೆರಳು ಇಟ್ಕತ್ತೀರಾ.. 2 ವರ್ಷ 7 ತಿಂಗಳ ಬಾಲಕಿ ಚರಣ್ಯ, ಇಂಗ್ಲಿಷ್‌ನಲ್ಲಿ 1 ರಿಂದ 20 ನಂಬರ್ಸ್ ಕೇಳಿದ್ರೆ ಪಟಪಟ ಅಂತ ಹೇಳ್ತಾಳೆ. ಅಷ್ಟೇ ಯಾಕೆ.. ನಮ್ಮ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು ಹೇಳು ಅಂದ್ರೆ ಒಬ್ಬರ ಹೆಸರನ್ನೂ ಮಿಸ್ ಮಾಡೇ ಹೇಳ್ತಾಳೆ, ತನ್ನ ಈ ಅಗಾಧ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡುವ ಬೇಲೂರಿಗೆ ಕೀರ್ತಿ ತಂದಿರುವ ಬೇಲೂರು ಬಾಲೆಯ ಪ್ರತಿಭೆಗೆ ಪೋಷಕರು ಸೇರಿದಂತೆ ಕುಟುಂಬ ವರ್ಗವು ಸಂತಸ ವ್ಯಕ್ತಪಡಿಸುತ್ತಾರೆ.

ತಾಲೂಕಿನ ಅರೇಹಳ್ಳಿ ನಿವಾಸಿಗಳಾದ ನಿಶ್ಚಿತಾ ಸುಹಾಸ್ ದಂಪತಿಗಳ ಒಬ್ಬಳೇ ಮಗಳಾದ ಚರಣ್ಯ, ಈಕೆಗಿನ್ನೂ 3 ವರ್ಷ ಸಹ ತುಂಬಿಲ್ಲ. ಈಗಾಗಲೇ 1 ರಿಂದ 20 ನಂಬರ್ಸ್, 1 ಮತ್ತು 2 ಟೇಬಲ್ಸ್ ಮತ್ತು ತಿಂಗಳುಗಳನ್ನು ಹೇಳಿ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದಾಳೆ, ಇಂಗ್ಲಿಷ್ ವರ್ಣಮಾಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳು, ಐತಿಹಾಸಿಕ ಸ್ಥಳಗಳು, ರಾಷ್ಟ್ರಧ್ವಜ, ಚಿಹ್ನೆಗಳು, ಕನ್ನಡ – ಇಂಗ್ಲಿಷ್ ಪದಗಳ ಭಾಷಾಂತರ ಸೇರಿ ಅನೇಕ ವಿಷಯಗಳಲ್ಲಿ ವಯಸ್ಸಿಗೆ ಮೀರಿದ ಜ್ಞಾನ ಸಂಪಾದಿಸಿಕೊಂಡಿದ್ದಾಳೆ. ಹೀಗಾಗಿ, 2021ರ ಇಂಡಿಯನ್ ರ ಬುಕ್ ಆಫ್ ರೆಕಾರ್ಡ್‌ನಲ್ಲಿ ಈಕೆಯ ಹೆಸರು ದಾಖಲಾಗಿದೆ.

ಇತ್ತ ವಯಸ್ಸು ಮೂರು ಸಹ ದಾಟಿಲ್ಲ. ಇಷ್ಟು ಕಿರಿಯ ವಯಸ್ಸಿನಲ್ಲೇ ಈಕೆಯ ಈ ಜ್ಞಾನಶಕ್ತಿಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯಲ್ಲಿ ಈತನ ಹೆಸರು ಸೇರ್ಪಡೆಗೊಂಡಿರುವುದಕ್ಕೆ ತಂದೆ ಸುಹಾಸ್, ತಾಯಿ ನಿಶ್ಚಿತಾ ಹಾಗೂ ಆತನ ಕುಟುಂಬ ವರ್ಗದ ಗೀತಾ ಶಿವರಾಜ್ ಮೊಮ್ಮಗಳ ಅನನ್ಯ ಪ್ರತಿಭಾ ಶಕ್ತಿಗೆ ಸಂತಸಗೊಂಡಿದ್ದಾರೆ.

ವಾರಗಳು, ತಿಂಗಳು, ಇಂಗ್ಲಿಷ್ ವರ್ಣಮಾಲೆ, ಗಣಿತದ ಆಕಾರಗಳು, ಯೋಗಗಳು ಹತ್ತು, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು, 2) ಮಾಹನ್ ವ್ಯಕ್ತಿಗಳ ಹೆಸರು ಹೇಳುವುದು, ರಾಷ್ಟ್ರೀಯ ಲಾಂಛನಗಳ ಹೆಸರು, ತರಕಾರಿಗಳು, ಹಣ್ಣುಗಳು, ಒತ್ತಾ ಪ್ರಾಣಿಗಳು, ಪ್ರಾಣಿಗಳ ಮಿಮಿಕ್ರಿ, ಕರ್ನಾಟಕ ಜಿಲ್ಲೆ ಹೆಸರು. ಎಲ್ಲಾ ರಾಜ್ಯದ ರಾಜಧಾನಿಗಳು, 14 ಮಾನವ ದೇಹದ ಅಂಗಳು, ಸಂಗೀತಾ ವಾದ್ಯಗಳ ಪರಿಕರ ಹೆಸರು, ಮುಖ್ಯಮುಂತ್ರಿ ಹಾಗೂ ಪ್ರಧಾನ ಮಂತ್ರಿ ಹೆಸರು, ಐದು ದೇಶದ ಭಾವುಟಗಳು, ಸಾಗರ ಮತ್ತು ಸಮುದ್ರದ ಹೆಸರು. ಜಗತ್ತಿನ ಖಂಡಗಳು, ಶ್ಲೋಕ ಮತ್ತು ರೈಮ್ಸ್ ಹೀಗೆ ಹತ್ತಾರು ವಿಷಯಗಳಲ್ಲಿ ತನ್ನ ಪುಟ್ಟ ವಯಸ್ಸಿಗೆ ಮೀರಿದ ಅನನ್ಯ ಪ್ರತಿಭೆ ನಿಜಕ್ಕೂ ಶ್ಲಾಘನೀಯವೇ ಸರಿ!

-ಎಚ್ಚರವಾಣಿ ದಿನಪತ್ರಿಕೆ

LEAVE A REPLY

Please enter your comment!
Please enter your name here