ಹೊಳೆನರಸೀಪುರದಲ್ಲಿ ದೇಹದಾರ್ಡ್ಯ ಪ್ರದರ್ಶನ ಕಾಯಕ್ರಮದಲ್ಲಿ ‘ಮಿಸ್ಟರ್‌ ಇಂಡಿಯಾ’ ಪ್ರಶಸ್ತಿ ವಿಜೇತ ಬಾಡಿಬಿಲ್ಡರ್ಸ್

0

ಹೊಳೇನರಸೀಪುರ : ಭಾನುವಾರ(26june2022) ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಕೋಟೆ ಮುಖ್ಯರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ‘ ಪವರ್‌ ಜೋನ್‌ ‘ ಜಿಮ್‌ನಲ್ಲಿ ಆಯೋಜಿಸಿದ್ದ ದೇಹದಾರ್ಡ್ಯ ಪ್ರದರ್ಶನ ಕಾಯಕ್ರಮದಲ್ಲಿ ಮಿಸ್ಟರ್‌ ಇಂಡಿಯಾ’ ಪ್ರಶಸ್ತಿ ವಿಜೇತ ಬಾಡಿಬಿಲ್ಡರ್‌ ಪ್ರದೀಪ್‌ ಹಾಗೂ ಸದ್ದಾಂ ದೇಹದಾರ್ಢ್ಯ ಪ್ರದರ್ಶನ ನೀಡಿದರು

” ಜಿಮ್‌ ಮಾಡುವುದರಿಂದ ನಮ್ಮ ದೇಹ ಕಟ್ಟುಮಸ್ತಾಗಿ ಇರುತ್ತದೆ. ನಾನು ಶಕ್ತಿವಂತ ಎಂದು ಭಾವಿಸಿ ಯಾರೂ ಕೂಡ ಗಲಾಟೆಗಳಲ್ಲಿ ಭಾಗವಹಿಸುವುದು, ಕಾನೂನು ಉಲ್ಲಂಘನೆ ಮಾಡಬಾರದು. ನಮ್ಮಲ್ಲಿ ಎಷ್ಟೇ ಶಕ್ತಿ ಇದ್ದರೂ ನಮ್ಮ ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಗೌರವಿಸಿ ನಡೆಯಬೇಕು. ನಮ್ಮ ನಡತೆ ಇನ್ನೊಬ್ಬರಿಗೆ ಮಾದರಿ ಆಗುವಂತೆ ನಡೆದುಕೊಂಡಾಗ ನಮಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ” -ಅರುಣ್ ( ಹೊಳೆನರಸೀಪುರ SI )

” ನಿತ್ಯವ್ಯಾಯಾಮ ಮಾಡುವುದರಿಂದ ನಾವು ವೈದ್ಯರಿಂದ ದೂರ ಇರಬಹುದು. ಇಂದಿನ ಯುವಕರು ತಮ್ಮ ಆರೋಗ್ಯಕಾಪಾಡಿಕೊಳ್ಳಲು  ಪ್ರತಿದಿನ 1 ಗಂಟೆ ವ್ಯಾಯಾಮ ಮಾಡಲೇಬೇಕು. ಜಿಮ್‌ಗಳಲ್ಲಿ ವ್ಯಾಯಾಮ ಮಾಡುವಾಗ ತರಬೇತುದಾರರ ಮಾರ್ಗದರ್ಶನ ಇಲ್ಲದೆ ಜಿಮ್‌ನಲ್ಲಿನ ಉಪಕರಣಗಳನ್ನು ಬಳಸಬಾರದು. ಜಿಮ್‌ನಲ್ಲಿ ನಿಗದಿತ ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯ ಬಗ್ಗೆಯೂ ತರಬೇತಿ ನೀಡಲಾಗುತ್ತದೆ ” – ನೂರ್ ( ಜಿಮ್ ಟ್ರೈನರ್)

LEAVE A REPLY

Please enter your comment!
Please enter your name here