ಹೊಳೆನರಸೀಪುರ :ಬಿಎಸ್ಎನ್ಎಲ್ ಕಚೇರಿಯ ಟವರ್ ಗಳನ್ನು ಖಾಸಗಿಕರಣ ಮಾಡುತ್ತಿರುವ ಮತ್ತು 4g ವಿಳಂಬ ವಿರೋಧಿಸಿ ಬಿಎಸ್ಎನ್ಎಲ್ ಆಫೀಸ್ ಎದುರು ಪ್ರತಿಭಟನೆ ನಡೆಸಲಾಯಿತು.ಬಿಎಸ್ಎನ್ಎಲ್ ತಂತ್ರಜ್ಞಾನವನ್ನು ಇಂಪ್ರೂವ್ಮೆಂಟ್ ಮಾಡುವ ನೆಪ ಹೇಳಿ 19000 ನೌಕರರು ಮತ್ತು ಅಧಿಕಾರಿ ವರ್ಗದವರಿಗೆ ವಿ ಆರ್ ಎಸ್ ಸ್ಕೀಮ್ ಅನ್ನು ತಂದು ರಿಟೈರ್ಮೆಂಟ್ ಮಾಡಲಾಯಿತು. ಎರಡು ವರ್ಷಗಳಿಂದ ಯಾವುದೇ ರೀತಿಯ ಇಂಪ್ರೂಮೆಂಟ್ ಆಗಿಲ್ಲ, ಈಗಾಗಲೇ ಖಾಸಗಿ ಕಂಪನಿಗಳಿಗೆ 5g ನೆಟ್ವರ್ಕ್ ಅನ್ನು ಪ್ರಾರಂಭ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಆದರೆ ಸರ್ಕಾರ ಒಡೆತನದಲ್ಲಿರುವ ಬಿಎಸ್ಎನ್ಎಲ್ ಗೆ 4ಜಿಯನ್ನು ಪ್ರಾರಂಭಿಸಲು ಯಾವುದೇ ಅವಕಾಶವನ್ನು ನೀಡಿಲ್ಲ. ಹಾಗೂ ಸಾರ್ವಜನಿಕರಿಗೆ ಇದರ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು ಸರ್ಕಾರಿ ಸೇವೆ ಇರುವುದರಿಂದ ಇದಕ್ಕೆ ಹೆಚ್ಚಿನ ಭದ್ರತೆ ಇರುತ್ತದೆ 4g ಸೇವೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು. ಆದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ತೋರಿಸಿ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಬಿಎಸ್ಎನ್ಎಲ್ ನ್ನು ಮುಂದುವರೆಯಲು ಬಿಡುತ್ತಿಲ್ಲ ಅಷ್ಟೇ ಅಲ್ಲದೆ ಬಿಎಸ್ಎನ್ಎಲ್ ಒಡತನದಲ್ಲಿರುವ 15000 ಟವರ್ ಗಳನ್ನು ಖಾಸಗಿಕರಣ ಮಾಡಲು ಮುಂದಾಗಿದೆ ಅಷ್ಟೇ ಅಲ್ಲದೆ ಸದ್ಯದಲ್ಲೇ ಇದಕ್ಕೆ ಆರ್ಡರ್ ಸಹ ಬರುತ್ತಿದೆ, ಆದುದ್ದರಿಂದ ಇದನ್ನು ನಿಲ್ಲಿಸಬೇಕು ಮತ್ತು ಬಿಎಸ್ಎನ್ಎಲ್ ನಿರ್ವಹಣೆ ಬಿಎಸ್ಎನ್ಎಲ್ ಅವರಿಗೆ ಸಿಗಬೇಕು, ಅಷ್ಟೇ ಅಲ್ಲದೆ ಬಿಎಸ್ಎನ್ಎಲ್ ನೌಕರರಿಗೆ ಜನವರಿ 2017 ರಲ್ಲೆ ವೇತನ ಪರಿಷ್ಕರಣೆಯಾಗಬೇಕ್ಕಿತ್ತು ಆದರೆ ಇದುವರೆಗೂ ಯಾವುದೇ ವೇತನ ಪರಿಷ್ಕರಣೆಯಾಗಿಲ್ಲ. ಇದರ ಬಗ್ಗೆ ಖುದ್ದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪ್ರಧಾನ ಮಂತ್ರಿಗಳಿಗೆ ಮತ್ತು ಟೆಲಿಕಾಂ ಕಂಪನಿಯ ಸಚಿವರುಗಳಿಗೆ ಪತ್ರವನ್ನು ಬರೆದು ಒತ್ತಾಯ ಮಾಡಿದ್ದರು ಕೇಂದ್ರ ಸರ್ಕಾರವು ಕಿವುಡುತನವನ್ನುಪ್ರದರ್ಶನ ಮಾಡುತ್ತಿದೆ. ನೂರಾರು ಜನ ಪಾರ್ಲಿಮೆಂಟ್ ಸದಸ್ಯರು ಲೋಕಸಭಾ ಸದಸ್ಯರುಗಳು ರಾಜ್ಯಸಭಾ ಸದಸ್ಯರು ಆಡಳಿತ ಪಕ್ಷದವರು ಎಲ್ಲರೂ ಪತ್ರ ಬರೆದ್ದಿದ್ದರೂ ಸಹ ಕೇಂದ್ರ ಸರ್ಕಾರ ಇದರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಪರಿಷ್ಕರಣೆ ಮಾಡುತ್ತೇವೆ ಎಂದು ಬರಿ ಆಶ್ವಾಸನೆ ನೀಡುತ್ತಿದ್ದಾರೆ ಆದರೆ ಯಾವುದು ಜಾರಿಗೆ ಬರುತ್ತಿಲ್ಲ. ಇದು ಈಗಿನಿಂದ ನಡೆಯುತ್ತಿಲ್ಲ 2014 ರಿಂದಲು ಬಿಎಸ್ಎನ್ಎಲ್ ಗೆ ಯಾವುದೇ ಟೆಂಡರ್ ಗಳನ್ನು ಕೊಡದೆ ಟೆಲಿಫೋನ್ ಎಕ್ಸ್ಚೇಂಜ್ಗಳಿಗೂ ಅವಕಾಶವನ್ನು ನೀಡುತ್ತಿಲ ಈ ಎಲ್ಲ ಅಂಶಗಳ ಬಗ್ಗೆ ಗಮನ ಹರಿಸಬೇಕೆಂದು ಎ ಯು ಬಿ ಬಿಎಸ್ಎನ್ಎಲ್ ಹೊಳೆನರಸೀಪುರ ಇವರ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದೆ ಸಂದರ್ಭದಲ್ಲಿ ರುದ್ರಮೂರ್ತಿ, ರವಿಶಂಕರ್, ಕಲಾವತಿ, ರಕ್ಷಿತಾ ರುದ್ರೇಶ್,ಪರಮೇಶ್, ಶಾಮ್ ಪ್ರಸಾದ್, ಅಶೋಕ್, ಕೌಶಿಕ್ ಇದ್ದರು