ಎಲ್ಐಸಿ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ

0

ಹೊಳೆನರಸೀಪುರ: ಎಲ್ಐಸಿ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೀವವಿಮ ಪ್ರತಿನಿಧಿಗಳ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಮುಂಭಾಗ ತಾಲೂಕು ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಸಿಎ ರಮೇಶ್ ಮಾತನಾಡಿ ಪದಾಧಿಕಾರಿಗಳು ಹಾಗೂ ಪ್ರತಿನಿಧಿ ಮಿತ್ರರು ಶಾಂತಿಯುತ ಧರಣಿ ನಡೆಸುವ ಮೂಲಕ ಭಾರತೀಯ ಜೀವ ವಿಮಾನ ನಿಗಮ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ .
ನಮ್ಮ ಅನ್ನದಾತರಾದ ಪಾಲಿಸಿದಾರರ ಪಾಲಿಸಿಗಳಿಗೆ ಬೋನಸ್ ಅನ್ನು ಹೆಚ್ಚಿಸಬೇಕು. ಪಾಲಿಸಿದಾರರ ಸಾಲದ ಮೇಲಿನ ಬಡ್ಡಿ ಮತ್ತು ಪ್ರಿಮಿಯಂನ ವಿಳಂಬ ಶುಲ್ಕವನ್ನು ಕಡಿಮೆ ಮಾಡುವುದು. ಪಾಲಿಸಿದಾರರ ಪ್ರೀಮಿಯಂ ಮೇಲೆ ವಿದಿಸುತ್ತಿರುವ ಜಿಎಸ್‌ಟಿ ಶುಲ್ಕವನ್ನು ಸಂಪೂರ್ಣವಾಗಿ ತೆಗೆಯುವುದು. ಜೀವ ವಿಮಾ ಪ್ರತಿನಿಧಿಗಳ ಗ್ರಾಜುಟಿಯನ್ನು ಹೆಚ್ಚಿಸುವುದು. ಪ್ರತಿನಿಧಿಗಳ ಗುಂಪು ವಿಮೆಯ ವಯೋಮಿತಿಯನ್ನು ಹೆಚ್ಚಿಸುವುದು ಮೆಡಿ ಕ್ಲೈಮನ್ನು ಎಲ್ಲಾ ಪ್ರತಿನಿಧಿಗಳಿಗೆ ಕೊಡುವುದು, ಆನ್ ಲೈನ್ ಪಾಲಿಸಿಗಳನ್ನು ರದ್ದುಗೊಳಿಸುವುದು, ಕ್ಲಿಯಾ ಚಾಲನ್ ಅನ್ನು ಅಭಿವೃದ್ಧಿಗೊಳಿಸುವುದು. ಹೀಗೆ ವಿವಿಧ ರೀತಿಯ ಬೇಡಿಕೆಗಳನ್ನ ಈಡೇರಿಸಬೇಕೆಂದು ಭಾರತೀಯ ಜೀವ ವಿಮಾನ ನಿಗಮದ ಚೇರ್ಮನ್ಗೆ ಒತ್ತಾಯಿಸಿ ಸೆಪ್ಟೆಂಬರ್ 1ರಿಂದ 7ರ ತನಕ ಪ್ರತಿಭಟನೆ ನಡೆಯಲ್ಲಿದೆ ಎಂದು ತಿಳಿಸಿದರು.
ತಾಲೂಕು ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕಾರ್ಯದರ್ಶಿ ರಮೇಶ್ ಮಾತನಾಡಿ ಎಲ್ಐಸಿಯ ಅಡಿಪಾಯವೇ ಪ್ರತಿನಿಧಿಗಳು ಪಾಲಿಸಿದಾರರ ಯೋಗ ಕ್ಷೇಮವೇ ನಿಗಮದ ಹಿತ ಎಂಬ ಇತ್ಯಾದಿ ಭರವಸೆಗಳನ್ನು ನೀಡುತ್ತಾ ಭಾರತೀಯ ಜೀವ ವಿಮಾನ ನಿಗಮ ಮುಂದುವರೆದಿದೆ. ಆದರೆ ಪ್ರತಿನಿಧಿಗಳ ಹಾಗೂ ಪಾಲಿಸಿದಾರರ ಹಿತವನ್ನು ಕಡೆಗಣಿಸಿದ್ದಾರೆ .ಈ ಬೆಳವಣಿಗೆಯನ್ನು ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ ಖಂಡಿಸುತ್ತದೆ ಎಂದು ಹೇಳಿದರು. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಹೊಳೆನರಸೀಪುರ ಎಲ್ಐಸಿ ಶಾಖೆ ಹಾಗೂ ಅರಕಲಗೂಡು ಉಪಶಾಖೆಯ ನೂರಾರು ಪ್ರತಿನಿಧಿ ಮಿತ್ರರು ಶಾಂತಿಯುತ ಧರಣಿಯಲ್ಲಿ ಪಾಲ್ಗೊಂಡು ಬೆಳಿಗ್ಗೆ 10 ರಿಂದ ಸಂಜೆ 5ರವರಿಗೆ ಧರಣಿಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಪ್ರತಿಭಟನೆಯಲ್ಲಿ ಜೀವ ವಿಮಾ ಪ್ರತಿನಿಧಿ ಗಳ ಒಕ್ಕೂಟದ ಖಜಾಂಚಿ ಎಂ ಚಂದ್ರಶೇಖರ ಉಪಾಧ್ಯಕ್ಷರಾದ ರಮೇಶ್ ಸಂಘಟನಾ ಕಾರ್ಯದರ್ಶಿ ಬಿ ಬಿ ದೇವರಾಜೇಗೌಡ ಬಿ ವಿ ರುದ್ರಪ್ಪ, ಮರಿಗೌಡ ಪದಾಧಿಕಾರಿಗಳಾದ ಕೆ ಟಿ ಕೃಷ್ಣಕುಮಾರ್, ಕೆ ರಮೇಶ್, ಶಿವಪ್ಪ ,ಜಿ ಕೆ ರಮೇಶ್, ಕೆಟಿ ಕೃಷ್ಣಕುಮಾರ್, ರೇಣುಕೇಶ, ಪ್ರತಿನಿಧಿಗಳಾದ ಕೆ ಸುಜಾತ ಸಿಎ ಮಂಜುಳಾ ಶೋಭಾರಣಿ ರಾಘವೇಂದ್ರ ಗಣೇಶ್ ಎಂಪಿ ದಿಲೀಪ್ ಕುಮಾರ್ ನಟರಾಜ್ ಚಂದ್ರಶೇಖರ್ ಗೋಪಾಲಕೃಷ್ಣ ಕೃಷ್ಣೆಗೌಡ ಎಂ ಡಿ ದೇವರಾಜೇಗೌಡ ಗಣೇಶ್, ಬಸಪ್ಪ ,ಜಿಟಿ ರವೀಶ್, ಮತ್ತಿತರ ನೂರಾರು ಪ್ರತಿನಿಧಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here