Holenarasipura

ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಹೊಳೆನರಸೀಪುರದ ಈ ಯುವಕರು ಸಾವು

By Hassan News

May 23, 2023

ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಹೊಳೆನರಸೀಪುರದ ಈ ಯುವಕರು ಸಾವು

ಹಾಸನ ಜಿಲ್ಲೆಯ ಹೊಳೇನರಸೀಪುರ ಪಟ್ಟಣದ ಧನಂಜಯ(19) ಹಾಗೂ ದರ್ಶನ್ (19) ಎಂಬ ಸ್ನೇಹಿತರು ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಬಳಿಯ ಬಲಮುರಿ ಪ್ರಕೃತಿ ತಾಣದ ಬಳಿ ಕಾವೇರಿ ನದಿಯಲ್ಲಿ ಭಾನುವಾರ ಸಂಜೆ ಈಜಲು ತೆರಳಿದ್ದ ಸಂದರ್ಭದಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ ., ಪಟ್ಟಣದ ದೇವಾಂಗ ಬಡಾವಣೆಯ ನಿವಾಸಿ ಆಟೋ ಚಾಲಕ ಜಗದೀಶ್ ಎಂಬುವರ ಪುತ್ರ

ಧನಂಜಯ ಹಾಗೂ ಹೌಸಿಂಗ್ ಬೋರ್ಡ್ ನಿವಾಸಿ ಮಂಗಳವಾಧ್ಯ ನುಡಿಸುವ ವೃತ್ತಿಯ ಪ್ರಸನ್ನ ಎಂಬುವರ ಪುತ್ರ ದರ್ಶನ್ ಭಾನುವಾರ ಮದುವೆಗೆ ಎಂದು ತೆರಳಿದ್ದರು. ಮದುವೆ ಮುಗಿದ ನಂತರ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಪ್ರಕೃತಿ ತಾಣದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಸುಳಿಗೆ ಸಿಲುಕಿ ಇಬ್ಬರು ಸ್ನೇಹಿತರು

ಮೃತಪಟ್ಟಿದ್ದಾರೆ. ಧನಂಜಯನಿಗೆ ತಂದೆ, ತಾಯಿ, ಒಬ್ಬ ಸಹೋದರ ಇದ್ದಾರೆ ಮತ್ತು ದರ್ಶನ್‌ಗೆ ತಂದೆ, ತಾಯಿ ಇದ್ದಾರೆ. ಸೋಮವಾರ ಸಂಜೆ ಅಂತ್ಯಕ್ರಿಯೆ ಜರುಗಿತು.