ಹಂಗರಹಳ್ಳಿ ಮೇಲ್ ಸೇತುವೆ ಕಾಮಗಾರಿ
ಪ್ರಾರಂಭ
ರಸ್ತೆ ಬದಲಾವಣೆ
ಹಾಸನದಿಂದ ಮೊಸಳೆ ಹೊಸಳ್ಳಿ ಮಾರ್ಗವಾಗಿ ಹೊಳೆನರಸೀಪುರಕ್ಕೆ ಹೋಗುವವರು ಮಾರ್ಗವಾಗಿ ಹೋಗಲು ಅವಕಾಶ ಕಲ್ಪಿಸಲಾಗಿದೆ
ಹೊಳೆನರಸೀಪುರದಿಂದ ಹಾಸನಕ್ಕೆ ಬರುವವರು
ಹಳೆಕೋಟೆ ಮತ್ತು ಕಬ್ಬಿನಹಳ್ಳಿ ಮಾರ್ಗವಾಗಿ ಮೊಸಳೆ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ಮುಂಭಾಗದಿಂದ ಹಾಸನಕ್ಕೆ ತೆರಳಬಹುದು
ಹಾಸನ : ಭಾರಿ ಮಳೆ ಸುರಿದ ಪರಿಣಾಮ ಫ್ಲೈ ಓವರ್ ಸ್ಲ್ಯಾಬ್‌ಗಳು ಹಾಗು ಮಣ್ಣು ಕುಸಿದಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಜುಲೈ 27 ಶುಕ್ರವಾರ ಬೆಳಿಗ್ಗೆ ನಡೆದಿತ್ತು.
ಹಾಸನದಿಂದ ಹೊಳೆನರಸೀಪುರಕ್ಕೆ ತೆರಳುವ ಮಾರ್ಗ ಮಧ್ಯೆ ಈ ಫ್ಲೈ ಓವರ್ ಇದ್ದು, ಪ್ರತಿನಿತ್ಯ
ಸಾವಿರಾರು ವಾಹನಗಳು ಸಂಚರಿಸುತ್ತವೆ.
ಬೃಹತ್ ವಾಹನಗಳು ಸಂಚರಿಸಿದರೆ ಫ್ಲೈಓವರ್ ಕುಸಿಯುವ ಭೀತಿ ಎದುರಾಗಿತ್ತು.
ನಿರ್ಮಾಣ ಹಂತದಲ್ಲಿರುವಾಗಲೇ ಎರಡು ಬಾರಿ ಫ್ಲೈಓವರ್ ಸ್ಲ್ಯಾಬ್‌ಗಳು ಕುಸಿದಿದ್ದರೂ, ಗುತ್ತಿಗೆದಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದರು .