Holenarasipura

ಈತನ ತಂದೆ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ , 7 ವರ್ಷದ ಪೋರ ಇನ್ನಿಲ್ಲ

By Hassan News

January 06, 2023

ಹಾಸನ / ಹೊಳೆನರಸೀಪುರ : ಹೊಳೆನರಸೀಪುರ ಪುರಸಭೆಯ ಈ ವಾಣಿಜ್ಯ ಸಂಕಿರ್ಣದ ನೆಲ ಅಂತಸ್ತಿನ ಹತ್ತಾರು ಮಳಿಗೆಗಳು ಅನುಪಯುಕ್ತವಾಗಿದ್ದು ಈ ಮಳಿಗೆಗಳಿಗೆ ಗಾಳಿ ಬೆಳಕಿನ ಸೌಲಭ್ಯ ಇಲ್ಲದೆ ಯಾರೂ ಬಾಡಿಗೆ ಬಂದಿರಲಿಲ್ಲ. ಮಳೆಗಾಲದಲ್ಲಿ ನೀರು ನಿಂತು ಕೊಚ್ಚೆಗುಂಡಿಯಂತಾಗಿತ್ತು , ದುರದೃಷ್ಟವಶಾತ್

ಗ್ರಾಫಿಕ್ ಅಂಗಡಿಗೆ ಆಧಾರ್ ಕಾರ್ಡ್ ಮಾಡಿಸಲು ಅಜ್ಜ ಅಜ್ಜಿ ಜೊತೆ ಬಂದಿದ್ದ ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಏಳುವರ್ಷದ ಗಗನ್ ವಾಣಿಜ್ಯ ಸಂಕಿರ್ಣದ ಒಳಗೆ ಆಟ ಆಡಲು ಹೋಗಿದ್ದು . ಆಗ ಕಾಲು ಜಾರಿ, ನೀರು ನಿಂತಿದ್ದ ಲಿಫ್ಟ್ ಗುಂಡಿಗೆ ಬಿದ್ದಿರುತ್ತಾನೆ . ಎಷ್ಟು ಹೊತ್ತಾದರೂ ಬಾರದ ಬಾಲಕನನ್ನು ಹುಡುಕುತ್ತಾ ಬಂದ ಅಜ್ಜ ಅಜ್ಜಿಗೆ

ಬಾಲಕ ಎಲ್ಲೂ ಕಂಡಿರಲಿಲ್ಲ ., ನೆಲ ಮಳಿಗೆಗಳಲ್ಲಿ ನಿಂತಿದ್ದ ನೀರನ್ನು ಅಗ್ನಿಶಾಮಕ ಸಿಬ್ಬಂದಿ ಕಾಲಿಮಾಡಿದಾಗ ಬಾಲಕ ಲಿಫ್ಟ್ ಗುಂಡಿಯಲ್ಲಿ ಬಿದ್ದಿದ್ದು ಪತ್ತೆ ಆಗಿದೆ . ತಕ್ಷಣ ಮೇಲೆತ್ತಿ ನೋಡುವ ವೇಳೆಗೆ ಬಾಲಕ ಅದಾಗಲೇ ಮೃತಪಟ್ಟಿದ್ದ., ಪಟ್ಟಣದ ಅರಕಲಗೂಡು ರಸ್ತೆ ಪುರಸಭೆ ವಾಣಿಜ್ಯ ಸಂಕಿರ್ಣದ ನೆಲಮಹಡಿ ಅನುಪಯುಕ್ತ ಮಳಿಗೆಯಲ್ಲಿ ನಿಂತಿದ್ದ ನೀರಿಗೆ ಗುರುವಾರ ಸಂಜೆ ಆಕಸ್ಮಿಕವಾಗಿ ಬಿದ್ದು ಬಾಲಕ ಮೃತ ಪಟ್ಟ ಘಟನೆ ನಡೆದೋಗಿದೆ . ಈತನ ತಂದೆ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಯಿ ಮೃತಪಟ್ಟಿದ್ದು ಅಜ್ಜ, ಅಜ್ಜಿ ಜೊತೆಯಲ್ಲಿದ್ದ., ಮಳಿಗೆಯ ಕೊಚ್ಚೆ ನೀರಿ ಬಾಲಕನನ್ನು ಬಲಿಪಡೆದಿದೆ. ಈ ಘಟನೆಗೆ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು