ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲು ಇಲ್ಲಿದೆ ಮಾಹಿತಿ

0

ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲು ಹಾಗೂ ಅವುಗಳ ದುರ್ಬಳಕೆ ತಡೆಯಲು ಹಾಸನ ಜಿಲ್ಲಾ ಪೊಲೀಸ್ ವತಿಯಿಂದ ನೂತನ ಇ-ಪೋರ್ಟಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ನೂತನ ವ್ಯವಸ್ಥೆಗಾಗಿ ಹೊಸದಾಗಿ ವಾಟ್ಸಾಪ್ ಮೊಬೈಲ್ ನಂಬರ್ “82779 59500″ ಪ್ರಾರಂಭಿಸಲಾಗಿದೆ.


ಹಾಸನ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಲ್ಲಿ ಈ ಕೆಳಕಂಡಂತೆ ಕ್ರಮ ವಹಿಸಲು ತಿಳಿಸಿದೆ.
ಮೊಬೈಲ್ ಫೋನ್ ಕಳೆದು ಹೋದಲ್ಲಿ ಕೂಡಲೇ ವಾಟ್ಸ್‌ಅಪ್ ಮೊಬೈಲ್ ನಂಬರ್ “82779 59500″ ಗೆ ‘Hi” ಎಂದು Text Message ಕಳುಹಿಸುವುದು. ಸಂದೇಶ ಕಳುಹಿಸಿದ ಮೊಬೈಲ್‌ ನಂಬರ್‌ಗೆ ಒಂದು ಇ-ಪೋರ್ಟಲ್ ಲಿಂಕ್‌ನ ಸಂದೇಶ ಬರುತ್ತದೆ.
ಈ ಲಿಂಕ್ ಮೂಲಕ ತೆರೆದುಕೊಳ್ಳುವ ಇ-ಪೋರ್ಟಲ್‌ನಲ್ಲಿ

ಕೇಳಲಾಗಿರುವ ಎಲ್ಲಾ ಅವಶ್ಯಕ ಮಾಹಿತಿಗಳನ್ನು ಸಾರ್ವಜನಿಕರು ಭರ್ತಿ ಮಾಡಿ Submit ಮಾಡುವುದು. ನಂತರ ಕಳೆದು ಹೋದ ಮೊಬೈಲ್ ಫೋನ್ ಪತ್ತೆಗೆ ಹಾಸನ ಜಿಲ್ಲಾ ಪೊಲೀಸ್‌ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರ ಅನುಕೂಲಕ್ಕಾಗಿ ಹಾಸನ ಜಿಲ್ಲಾ ಪೊಲೀಸ್‌ ವತಿಯಿಂದ ಮೇಲ್ಕಂಡಂತೆ ಹೊಸ ವಾಟ್ಸ್‌ಅಪ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು,

ಹಾಸನ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಈ ನೂತನ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳುವುದು.

ಸೆಕೆಂಡ್ ಮೊಬೈಲ್ ಖರೀದಿ ಮಾಡುವ ಮುನ್ನ ಯೋಚಿಸಿ?
ಮೊಬೈಲ್ ಕಳೆದು ಹೋದ್ರೆ ಇನ್ನುಂದೆ ಹುಡುಕುವುದು ತೀರ ಸುಲಭ
ಹಾಸನ: ಮೊಬೈಲ್ ಪೋನ್ ಏನಾದರೂ ಕಳೆದು ಹೋಗಿದ್ದರೇ ಇನ್ಮುಂದೆ ಹುಡುಕುವುದು ತೀರ ಸುಲಭ. 8277959500 ಈ ಸಂಖ್ಯೆಗೆ ಹಾಯ್ ಎಂದು ಕಳುಹಿಸಿದ್ರೆ ನಿಮ್ಮ ವಾಟ್ಸಾಪ್ ಗೆ ಲಿಂಕ್ ಬರುತ್ತದೆ. ಅದರಲ್ಲಿ ನಿಮ್ಮ ಡಿಟೈಲ್ಸ್ ಕಳುಹಿಸಿದರೇ ಶೀಘ್ರವೇ ಮೊಬೈಲ್ ನ್ನು ಹುಡುಕಿ ಪೊಲೀಸರು ವಾಪಸ್ ಕೊಡಲಿದ್ದಾರೆ.
ಯಾರಾದರೂ ಸೆಕೆಂಡ್ ಮೊಬೈಲ್ ಖರೀದಿ ಮಾಡಲು ಯೋಚನೆ ಮಾಡಿದ್ದರೇ ಸಲ್ಪ ಯೋಚಿಸಿ ಖರೀದಿ ಮಾಡುವುದು ಉತ್ತಮ. ಏಕೆಂದರೇ ನೀವು ಕಳ್ಳತನದ ಮೊಬೈಲ್ ಖರೀದಿ ಮಾಡಿದ್ದರೇ ನೀವು ದಂಢ ತೆತ್ತಬೇಕಾಗುತ್ತದೆ. ಪೊಲೀಸರು ಆ ಮೊಬೈಲನ್ನು ಶೀಘ್ರದಲ್ಲಿ ಕಂಡು ಹಿಡಿದು ವಾಪಸ್ ಮಾಲೀಕನಿಗೆ ಕೊಡುತ್ತಾರೆ. ಆದರೇ

ಶಿಕ್ಷೆ ಇರುವುದಿಲ್ಲ. ಕಳ್ಳತನ ಮಾಡಿದ್ದರೇ ಆತನಿಗೆ ಶಿಕ್ಷೆ ವಿಧಿಸುವುದು ಖಚಿತ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಮ್ಮ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಯಾರಾದ್ರೂ ಮೊಬೈಲ್ ಕಳೆದುಕೊಂಡ್ರೆ ಪೊಲೀಸ್ ಠಾಣೆಗೆ ಬಂದು ಫಾರಂ ತುಂಬಬೇಕಾಗಿತ್ತು. ಮೊಬೈಲ್ ಕಳೆದು ಹೋದ ಮೇಲೆ ಬೇರೆ ಜಿಲ್ಲೆ ಮತು ರಾಜ್ಯಕ್ಕೆ ಹೋಗಿರುತ್ತದೆ. ಕೆಲ ಸಮಯ ಕಳ್ಳತನವಾಗಿದ್ದರೇ ಇನ್ನು ಕೆಲ ಸಂದರ್ಭದಲ್ಲಿ ಮಿಸ್ ಆಗಿರುತ್ತದೆ. ಈ ವೇಳೆ ಪೊಲೀಸರಿಂದ ಹುಡುಕುವುದು ತುಂಬ ಕಷ್ಟವಾಗಿತ್ತು. ಈಗ ಸುಲಭ ರೀತಿಯಲ್ಲಿ ಶೀಘ್ರ ಮೊಬೈಲ್ ಕಂಡು ಹಿಡಿದು ಮಾಲೀಕರಿಗೆ ವಾಪಸ್ ಕೊಡಲು ಸಾಧ್ಯವಾಗುತ್ತಿದೆ ಎಂದರು. ಇನ್ನು ಸುಲಭ ಮಾಡುವುದಕ್ಕಾಗಿ ನಾವು ಹಾಸನ ಜಿಲ್ಲೆಯಲ್ಲಿ ಒಂದು ಮೊಬೈಲ್ ಸಂಖ್ಯೆ ನೀಡಿದ್ದು, 8277959500 ನಂಬರ್ ಕೊಡಲಾಗಿದ್ದು, ಯಾರದಾದರೂ ಮೊಬೈಲ್ ಕಳೆದ ಹೋಗಿದ್ದರೇ

ಈ ವಾಟ್ಸಾಪ್ ನಂಬರ್ ಗೆ ಹಾಯ್ ಎಂದು ಮೆಸೆಜು ಹಾಕಿದರೇ ಸಾಕು ತಕ್ಷಣ ಒಂದು ಫಾರಂ ಬರುತ್ತದೆ. ಸರಳವಾಗಿ ನಿಮ್ಮ ವಿವರಗಳಾದ ಮೊಬೈಲ್ ಕೊಂಡುಕೊಂಡವರ ಹೆಸರು, ತಂದೆ ಹೆಸರು, ಒಂದು ಇ-ಮೈಲ್ ಐಡಿ, ಕಳೆದ ಹೋಗಿರುವ ಮೊಬೈಲ್ ಸಿಮ್ ನಂಬರ್, ಜೊತೆಗೆ ಮೊಬೈಲ್ ನ ಐಎಂಇಎ, ಡಬಲ್ ಸಿಮ್ ಇದ್ದರೇ ಎರಡು ಐಎಂಇಎ ಇವೆಲ್ಲಾ ಮೊಬೈಲ್ ಪೋನ್ ಖರೀದಿ ಮಾಡಿದ ಬಾಕ್ಸ್ ಮೇಲೆ ಮುದ್ರವಾಗಿರುತ್ತದೆ. ಇಷ್ಟು ವಿವರ ಮೊಬೈಲ್ ವಾಟ್ಸಾಪ್ ನಲ್ಲಿ ಕೊಡಲಾಗಿರುವ ಫಾರಂನಲ್ಲಿ ತುಂಬಿ ಕಳುಹಿಸಿದರೇ ಸಾಕು. ಉಳಿದ ಕೆಲಸವನ್ನ ನಮ್ಮ ಪೊಲೀಸ್ ಇಲಾಖೆಯಿಂದ ಮಾಡಿ ಮೊಬೈಲ್ ಸಿಕ್ಕಿದ ಮೇಲೆ ನಿಮ್ಮನ್ನು ಸಂಪರ್ಕಿಸಲಾಗುವುದು. ಈ ವೇಳೆ ಮೊಬೈಲ್ ನ ಆಧಾರ್ ಡಿಟೈಲ್ಸ್ ಕೊಡಬೇಕು. ಮತ್ತು ಈ ಲಾಸ್ಟ್ ಎನ್ನುವ ಕರ್ನಾಟಕ ಪೊಲೀಸ್ ಇಲಾಖೆಯ ಆಫ್ ಇದ್ದು, ಇದನ್ನು ಎಲ್ಲಾರೂ ಉಪಾಯೋಗಿಸಲು ಬರುವುದಿಲ್ಲ. ಆದ್ದರಿಂದ ನಾವೇ ನಿರ್ವಹಿಸಲಾಗುವುದು. ನಿಮ್ಮ ಮೊಬೈಲ್ ಕಳೆದ ಹೋದಲ್ಲಿ ಹುಡುಕಿ ಕೊಡಲು ನಮ್ ಪೊಲೀಸ್ ಇಲಾಖೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ

ಕರ್ನಾಟಕ ರಾಜ್ಯದಲ್ಲಿ ಇಂತಹ ತಂತ್ರಜ್ಞಾನದಿAದ 2 ಸಾವಿರಕ್ಕೂ ಹೆಚ್ಚಿನ ಮೊಬೈಲ್ ಪೋನನ್ನು ಕಳೆದು ಹೋದವರಿಗೆ ವಾಪಸ್ ಹಿಂತಿರಿಗಿಸಿ ಕೊಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಮೊಬೈಲ್ ಬಗ್ಗೆ ತಿಳುವಳಿಕೆ ಕಡಿಮೆಯಾಗಿದೆ. ಸುಲಭವಾಗಿ ಮೊಬೈಲ್ ಕಂಡು ಹಿಡಿಯಲು ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ. ಸೆಲ್ ಇನ್ಸ್ ಪೆಕ್ಟರ್ ಜಗದೀಶ್, ಹಾಸನದ ಡಿವೈಎಸ್ಪಿ, ಟಿಕ್ನಿಕಲ್ ಎಕ್ಸ್ ಪೋರ್ಟ್ ತೀರ್ಥಂಕ್ ಇವರ ನೇತೃತ್ವದಲ್ಲಿ ಮೊಬೈಲ್ ನೂತನ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚುವ ಕೆಲಸ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿಮ್ಮ ಮೊಬೈಲ್ ಪೋನ್ ಕಳೆದು ಹೋಗಿದ್ದರೇ ನೀವು ಪೊಲೀಸ್ ಠಾಣೆಗೆ ಹೋಗಿ ಮನವಿ ಮಾಡುವ ಅವಶ್ಯಕತೆ ಇರುವುದಿಲ್ಲ. ನಾವು ಕೊಡಲಾಗಿರುವ ನಂಬರ್ ಗೆ ಹಾಯ್ ಎಂದು ಮೆಸೆಜು ಮಾಡಿದರೇ ಸಾಕು ನಿಮ್ಮ ವಾಟ್ಸಾಪ್ ಗೆ ಒಂದು ಆಪ್ ಬರುತ್ತದೆ ಅದರಲ್ಲಿ ಕೇಳಲಾಗಿರುವ ಡಿಟೈಲ್ಸ್ ತುಂಬಿದರೇ ಸಾಕು ನಿಮ್ಮ ಮನವಿಗೆ ಸ್ಪಂದಿಸಿ ನಿಮ್ಮ ಮೊಬೈಲ್ ವಾಪಸ್ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಹಾಸನ ಜಿಲ್ಲೆಯಲ್ಲ ಮೊಬೈಲ್ ಕಳೆದಕೊಂಡ ಮೇಲೆ ಆ ಕೆಲ ಮೊಬೈಲ್ ಜಮ್ಮು ಕಾಶ್ಮೀರ, ಜಾರ್ಕಾಂಡ್, ಕಲ್ಕತ್ತ, ಇತರೆ ಭಾಗಗಳಿಂದ ಪತ್ತೆ ಹಚ್ಚಿ ಮೊಬೈಲ್ ತರಿಸಲಾಗಿದೆ. ಒಂದು ವರ್ಷದಲ್ಲಿ ಯಾರದಾದರೂ ಮೊಬೈಲ್ ಕಳೆದು ಹೋಗಿದ್ದರೂ ಕೂಡ ಅವರು

ಕೂಡ ಎಂಟ್ರಿ ಮಾಡಿ ಕಳುಹಿಸಬಹುದಾಗಿದೆ.
ಈ ಸಂದರ್ಭದಲ್ಲಿ ಮೊಬೈಲ್ ಕಳೆದುಕೊಂಡು ನಾವು ಹೇಳಿದಾಗೆ ಮೊಬೈಲ್ ನಲ್ಲಿ ಅರ್ಜಿ ತುಂಬಿ ಕಳುಹಿಸಿದವರ ಮೊಬೈಲ್ ಕಂಡು ಹಿಡಿದು ಮಾಲೀಕರಿಗೆ ವಾಪಸ್ ಕೊಡಲಾಯಿತು. ಮೊಬೈಲ್ ಕದ್ದವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ, ಇನ್ನು ಕದ್ದ ಮೊಬೈಲ್ ನ್ನು, ಸೆಕೆಂಡ್ ಮೊಬೈಲ್ ಖರೀದಿ ಮಾಡಿದ್ದರೇ ಅವರು ವಾಪಸ್ ಕೊಟ್ಟರೇ ಅವರಿಗೆ ಯಾವ ರೀತಿ ಶಿಕ್ಷೆ ಇರುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here