Hassan District Updates

ನಿವೇಶನ ಹಂಚಿಕೆಗೆ ಹಾಸನ ಹುಡಾ ಸಿದ್ಧತೆ | 6784 ಸೈಟ್ ಲಭ್ಯ | ಇದೇ ಡಿಸೆಂಬರ್‌ನಲ್ಲಿ ಲಾಟರಿ ಮೂಲಕ ಅಲಾಟ್ಮೆಂಟ್ | ಸೈಟ್ ಸಿಗದವರಿಗೆ ಅರ್ಜಿ ಶುಲ್ಕ ವಾಪಸ್

By

August 11, 2022

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಉದ್ದೇಶಿತ ನೂತನ ಬಡಾವಣೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡುತ್ತಿದ್ದಂತೆಯೇ ನಿವೇಶನ ಹಂಚಿಕೆ ಸಿದ್ಧತಾ ಕಾರ್ಯ ಬಿರುಸುಗೊಂಡಿದೆ.

ಹೊಸ ಬಡಾವಣೆಯಲ್ಲಿ ಒಟ್ಟು 15 ಸಾವಿರ ನಿವೇಶನ ಲಭ್ಯತೆ ಬಗ್ಗೆ ಅಂದಾಜಿಸಲಾಗಿದ್ದು ಇದಕ್ಕಾಗಿ 27,177 ಅರ್ಜಿ ಸಲ್ಲಿಕೆಯಾಗಿವೆ. 2020ರಲ್ಲಿ ಡಿಮ್ಯಾಂಡ್ ಸರ್ವೆಗಾಗಿ ಅರ್ಜಿ ಆಹ್ವಾನಿಸಿದ್ದ 57 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ವೇಳೆ ನೂತನ ಬಡಾವಣೆಯಲ್ಲಿ ನಿವೇಶನ ಬಯಸಿ ಒಟ್ಟು 27 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ಡಿಮ್ಯಾಂಡ್ ಸರ್ವೆ ವೇಳೆ ಶುಲ್ಕ ಪಾವತಿಸಿ, ನಂತರ ಆರಂಭಿಕ ಠೇವಣಿ ಹಣ ಪಾವತಿ ಮಾಡದವರಿಗೆ ಕಳೆದ 20 ದಿನಗಳಿಂದ ಹುಡಾ ಕಚೇರಿಯಲ್ಲಿ ಹಿಂದಿರುಗಿಸಲಾಗುತ್ತಿದೆ. ಹೊಸ ಬಡಾವಣೆಗೆ ಈಗಾಗಲೇ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಬಡಾವಣೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್‌ನಲ್ಲಿ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. -ರಮೇಶ್, ಹುಡಾ ಆಯುಕ್ತ.

ಸಮುದ್ರವಳ್ಳಿ ಗ್ರಾಮಗಳ ನಾನಾ ಸರ್ವೆ ನಂಬರ್ ಗಳಲ್ಲಿ ಒಟ್ಟು 1145 ಎಕರೆ 32 ಗುಂಟೆ ಪ್ರದೇಶದಲ್ಲಿ 990 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭೂ ಮಾಲೀಕರು-ಹುಡಾ ಸಹಭಾಗಿತ್ವದೊಂದಿಗೆ ಶೇ.50:50 ಅನುಪಾತದಲ್ಲಿ ವಸತಿ ಬಡಾವಣೆ ಯೋಜನೆ ಹಿನ್ನೆಲೆ: ನಗರದ ಹೊರವಲಯದ ನಿರ್ಮಿಸಲು ಉದ್ದೇಶಿಸಿ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಬೂವನಹಳ್ಳಿ, ಕೆಂಚಟ್ಟಹಳ್ಳಿ, ಗೇಕರವಳ್ಳಿ ಮತ್ತು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ನಿವೇಶನ ಹಂಚಿಕೆಗೆ ಹುಡಾ ಸಿದ್ಧತೆ

ಇದಕ್ಕೆ ಪರಿಷ್ಕೃತ ಅಂದಾಜು ವೆಚ್ಚ 1070 ಕೋಟಿ ನಿರ್ಧರಿಸಿದೆ. ರೂ.ಗಳಿಗೆ ಸಂಪುಟ ಸಭೆ ಅನುಮೋದನೆ ಜೊತೆಗೆ ಅಭಿವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಸಹ ನೀಡಿದೆ.

6784 ನಿವೇಶನ ಹಂಚಿಕೆಗೆ ಲಭ್ಯ:

ನೂತನ ಬಡಾವಣೆಯಲ್ಲಿ ಒಟ್ಟು 15,500 ನಿವೇಶನಗಳ ಪೈಕಿ ಅರ್ಧದಷ್ಟು ಸೈಟ್‌ಗಳನ್ನು ಭೂ ಮಾಲೀಕರಿಗೆ ನೀಡಬೇಕಿದೆ. ಒಟ್ಟು ಸೈಟ್‌ಗಳಲ್ಲಿ ಠೇವಣಿ ಸುಮಾರು ಶೇ.10 ರಷ್ಟನ್ನು ಮೂಲೆ ಮತ್ತು ವಾಣಿಜ್ಯ ನಿವೇಶವನ್ನಾಗಿ ಪರಿಗಣಿಸಲಾಗುತ್ತದೆ. ಹಾಗೂ ಉದ್ಯಾನವನ, ರಸ್ತೆ ಅಭಿವೃದ್ಧಿಗೆ ಮೀಸಲಿಡಬೇಕಿದೆ. ಉಳಿದ 6784 ಸೈಟ್‌ಗಳನ್ನು ವರ್ಗವಾರು ಅರ್ಜಿದಾರರಿಗೆ ವಿತರಿಸಲು ಸಿದ್ಧತೆ ನಡೆದಿದೆ. ಲಭ್ಯ ಲಾಟರಿ ಮೂಲಕ ಹಂಚಿಕೆ ಮಾಡಲು ಹುಡಾ ವರ್ಗದಿಂದ ಒಟ್ಟು 27,177 ಅರ್ಜಿಗಳಿಂದ 340 ಕೋಟಿ ರೂ. ಸಂಗ್ರಹ:

ನೂತನ ಬಡಾವಣೆಯಲ್ಲಿ ಒಟ್ಟು ನಿವೇಶನಗಳನ್ನು 5 ವರ್ಗವಾಗಿ ವಿಂಗಡಿಸಿ, ಫಲಾನುಭವಿಗಳು ಅರ್ಜಿ ಯೊಂದಿಗೆ ಪ್ರಾರಂಭಿಕ | ಹಣ ಸೂಚಿಸಲಾಗಿತ್ತು. ಪಾವತಿಸಲು ಎಲ್ಲಾ ಅರ್ಜಿಗಳು ಸಲ್ಲಿಕೆಯಾಗಿ ಆರಂಭಿಕ | ಠೇವಣಿ ಹಣ ಒಟ್ಟು 340 ಕೋಟಿ ರೂ. ಸಂಗ್ರಹವಾಗಿದೆ.

• ಪರಿಶಿಷ್ಟರು-ಮಾಜಿ ಸೈನಿಕರಿಗೆ ರಿಯಾಯ್ತಿ:

ಉದ್ದೇಶಿತ ಕೂಡರ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ,

ಪಂಗಡ, ಮಾಜಿ ಸೈನಿಕರು, ಕಲಾವಿದರು ಸೇರಿದಂತೆ ವಿವಿಧ ಸಾಮಾಜಿಕ ಸೇವೆ ಸಲ್ಲಿಸುತ್ತಿರುವವರಿಗೆ ರಿಯಾಯ್ತಿ ದರದಲ್ಲಿ ಹಂಚಿಕೆ

ನೂತನ ಬಡಾವಣೆಯಲ್ಲಿ ಅರ್ಜಿದಾರರಿಗೆ ಡಿಸೆಂಬರ್‌ನಲ್ಲಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಡಿಸೆಂಬರ್ ಕಾರ್ಯ ಪೂರ್ಣ ಗೊಳ್ಳದಿದ್ದರೂ ಲಕ್ಕಿ ಡಿಪ್ ಮೂಲಕ ನಿವೇಶನ ನಂಬ‌ ಅಲಾಟ್ ನಂತರ ಬಡಾವಣೆ ಮಾಡಿ ಅಭಿವೃದ್ಧಿ ಪಡಿಸಲಾಗುವುದು

ಬೇಡಿಕೆ ಸಂಖ್ಯೆ ತಿಳಿಯಲು 2020ರಲ್ಲಿ ಹುಡಾ ಅರ್ಜಿ ಆಹ್ವಾನಿಸಿತ್ತು, ಆಗ ನಿವೇಶನ ಬಯಸಿ ಒಟ್ಟು 57 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದವು. 2022 ಏಪ್ರಿಲ್‌ನಲ್ಲಿ ನಿವೇಶನಕ್ಕೆ ಅರ್ಜಿ ಆಹ್ವಾನಿಸಿ ನಿವೇಶನದ ಅಂದಾಜು ಮೌಲ್ಯದ ಶೇ.3 ಹಾಗೂ ಶೇ. 10 ರಷ್ಟು ಪ್ರಾರಂಭಿಕ ಠೇವಣಿ ಹಣ ಪಾವತಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಈ ವೇಳೆ ಳೆ ಡಿಮ್ಯಾಂಡ್ ಸರ್ವೆಯಲ್ಲಿ ಅರ್ಜಿ ಸಲ್ಲಿಸಿದವ ಪೈಕಿ 30 ಸಾವಿರ ಮಂದಿ ಆರಂಭಿಕ ಠೇವಣಿ ಪಾವತಿಸಿರಲಿಲ್ಲ. ಇದೀಗ ಪ್ರಾರಂಭಿಕ ಠೇವಣಿ ಪಾವತಿಸದ ಅರ್ಜಿ ದಾರರಿಗೆ 5, 10, 15 ಸಾವಿರ ಒಳಗೆ ಬಡಾವಣೆ ಅಭಿವೃದ್ಧಿ ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುತ್ತಿದೆ. ಶುಲ್ಕ ಹಿಂಪಡೆಯಲು ಈ ಹಿಂದೆ ಸಲ್ಲಿಸಿದ್ದ ಅರ್ಜಿ ಸಂಖ್ಯೆ, ಬ್ಯಾಂಕ್‌ ಪುಸ್ತಕ ಮುಖಪುಟ ಜೆರಾಕ್ಸ್‌ ಪ್ರತಿ, ಬ್ಯಾಂಕ್ ಚಲನ್ ಜೊತೆ ಹುಡಾದಿಂದ ಅರ್ಜಿ ಭರ್ತಿ ಮಾಡಿ ಸಲ್ಲಿಸಿದರೆ ಅರ್ಜಿ ಶುಲ್ಕ ಹಿಂದಿರುಗಿಸುವುದು ” -ಹುಡಾ ಆಯುಕ್ತ ರಮೇಶ್

ವರದಿ : ಪರಮೇಶ್ ವಡೂರು ( ಜನಮಿತ್ರ )