ಶುಂಠಿ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಸೊಪ್ಪು ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಅರೇಹಳ್ಳಿ ಪೊಲೀಸರು, ಹದಿನಾಲ್ಕು ಕೆಜಿ 700 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

0

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಮತ್ತಾವರ ಗ್ರಾಮದ 28 ವರ್ಷದ ಲತೇಶ್ ಅನಿಲ್ ಬಂಧಿತ ಆರೋಪಿ. ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಶುಂಠಿ ಬೆಳೆಯ ಮಧ್ಯೆ ಗಾಂಜಾ ಸೊಪ್ಪನ್ನು ಬೆಳೆಯಲಾಗಿದೆ ಎಂದು ಪಿಎಸ್‌ಐ ಲಿಂಗರಾಜು ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊ0ದಿಗೆ ಸ್ಥಳಕ್ಕೆ ದೌಡಾಯಿಸಿದರು.

ಸ್ಥಳದಲ್ಲಿದ್ದ ಲತೇಶ್ ಅನಿಲ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ನಿಜ ಕಾರಣ ಬಯಲಾಗಿದೆ. ಸದರಿ ಜಮೀನನ್ನು ಮತ್ತಾವರ ಗ್ರಾಮದ ಕುಮಾರಸ್ವಾಮಿ ಅವರಿಂದ ಸುಮಾರು ಐದು ತಿಂಗಳ ಹಿಂದೆ ಶುಂಠಿ ಬೆಳೆಯಲೆಂದು ಐವತ್ತು ಸಾವಿರ ರೂಗೆ ಲತೇಶ ಗುತ್ತಿಗೆ ಪಡೆದಿದ್ದ ಎನ್ನಲಾಗಿದೆ.

ಮಾಲೀಕರಿಗೆ ವಂಚಿಸಿ ಯಾವುದೇ ಪರವಾನಗಿ ಪಡೆಯದೇ ಶುಂಠಿ ಬೆಳೆ ಮಧ್ಯೆ ಅಕ್ರಮವಾಗಿ ಗಾಂಜಾ ಸೊಪುö್ಪ ಬೆಳೆದಿದ್ದ ಲತೇಶನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬAಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here