Jobs Updates

ISRO Recruitment: ಇಸ್ರೋದಲ್ಲಿ ಅಸಿಸ್ಟೆಂಟ್‌, ಕ್ಲರ್ಕ್‌ ಸೇರಿದಂತೆ ವಿವಿಧ ಉದ್ಯೋಗಾವಕಾಶ, ಹಾಸನ , ಬೆಂಗಳೂರು ಸೇರಿದಂತೆ ವಿವಿಧೆಡೆ ನೇಮಕ ಅವಕಾಶ

By Hassan News

December 20, 2022

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಇಸ್ರೊ ಸೆಂಟ್ರಲೈಜ್ಡ್‌ ರಿಕ್ರೂಟ್‌ಮೆಂಟ್‌ ಬೋರ್ಡ್‌ (ಐಸಿಆರ್‌ಬಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್‌, ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌, ಕ್ಲರ್ಕ್‌, ಸ್ಟೆನೊಗ್ರಾಫರ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ., ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿವರ : ಅಸಿಸ್ಟೆಂಟ್‌- 342 , ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌- 153 , ಅಪ್ಪರ್‌ ಡಿವಿಷನ್‌ ಕ್ಲರ್ಕ್‌- 16 , ಸ್ಟೆನೊಗ್ರಾಫರ್‌-14 , ಪರ್ಸನಲ್‌ ಅಸಿಸ್ಟೆಂಟ್‌-01

ಒಟ್ಟು ಹುದ್ದೆ: 526

ಅರ್ಜಿ ಸಲ್ಲಿಸುವುದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ ?

ಇಲ್ಲಿ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-12-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-01-2023 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11-01-2023 ವಯೋಮಿತಿ ಎಷ್ಟಿರಬೇಕು ಗೊತ್ತಾ‌ ?

ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.

ಜನರಲ್‌, ಒಬಿಸಿ, ಇಡಬ್ಲ್ಯುಎಸ್‌ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಇಎಸ್‌ಎಂ, ಪಿಡಬ್ಲ್ಯುಡಿ, ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಅಥವಾ ಎಸ್‌ಬಿಐ ಶಾಖೆಯ ಮೂಲಕ ಪಾವತಿಸಬಹುದು.

ಎಲ್ಲೆಲ್ಲಿದೆ ಉದ್ಯೋಗ ಇಲ್ಲಿದೆ ಆ ಮಾಹಿತಿ?

ಅಸಿಸ್ಟೆಂಟ್‌ ಹುದ್ದೆಗಳು: ಅಹಮಾದಬಾದ್‌-26, ಬೆಂಗಳೂರು-125, ಹಾಸನ-16, ಹೈದರಾಬಾದ್‌-35, ಶ್ರೀಹರಿಕೋಟಾ-54, ತಿರುವನಂತಪುರ-83 ಸೇರಿದಂತೆ ಒಟ್ಟು 339 ಅಸಿಸ್ಟೆಂಟ್‌ ಹುದ್ದೆಗಳಿವೆ. ಬೆಂಗಳೂರು, ಹಾಸನ ಸೇರಿದಂತೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಇರುವುದರಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು.

ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌: ಅಹಮಾದಬಾದ್‌-5, ಬೆಂಗಳೂರು-60, ಹಾಸನ-1, ಹೈದರಾಬಾದ್‌-16, ಶ್ರೀಹರಿಕೋಟಾ-24, ತಿರುವನಂತಪುರ-45 ಸೇರಿದಂತೆ ಒಟ್ಟು 153 ಅಸಿಸ್ಟೆಂಟ್‌ ಹುದ್ದೆಗಳಿವೆ. ಈ ಹುದ್ದೆಯಲ್ಲೂ ಬೆಂಗಳೂರಿನಲ್ಲಿ ಹೆಚ್ಚಿನ ಅವಕಾಶವಿದೆ.

ಇನ್ನುಳಿದಂತೆ ಬಾಹ್ಯಾಕಾಶ ವಿಭಾಗದ ಶಿಕ್ಷಣ ಸಂಸ್ಥೆಯಲ್ಲಿ 3 ಅಸಿಸ್ಟೆಂಟ್‌ ಮತ್ತು 1 ಪರ್ಸನಲ್‌ ಅಸಿಸ್ಟೆಂಟ್‌ ಹುದ್ದೆಗಳಿವೆ.

ವಿದ್ಯಾರ್ಹತೆ ಏನಿರಬೇಕು ಗೊತ್ತೆ ?ಅಸಿಸ್ಟೆಂಟ್‌ ಮತ್ತು ಅಪ್ಪರ್‌ ಡಿವಿಷನ್‌ ಕ್ಲರ್ಕ್‌ ಹುದ್ದೆಗೆ ಶೇಕಡ 60 ಅಂಕದೊಂದಿಗೆ ಅಥವಾ ಸಿಜಿಪಿಎ 6.32 ಪಾಯಿಂಟ್‌ನೊಂದಿಗೆ ಪದವಿ ಪಡೆದಿರಬೇಕು. ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌/ ಸ್ಟೆನೊಗ್ರಾಪರ್‌ ಹುದ್ದೆಗೆ ಶೇಕಡ 60 ಅಂಕದೊಂದಿಗೆ ಅಥವಾ ಸಿಜಿಪಿಎ 6.32 ಪಾಯಿಂಟ್‌ನೊಂದಿಗೆ ಪದವಿ ಪಡೆದಿರಬೇಕು ಅಥವಾ ಡಿಪ್ಲೊಮಾ ಓದಿರಬೇಕು. ಸ್ಟೆನೊಗ್ರಾಫರ್‌ ಹುದ್ದೆಗೆ ಒಂದು ವರ್ಷದ ಕೆಲಸದ ಅನುಭವ ಬಯಸಲಾಗಿದೆ. ಇಂಗ್ಲಿಷ್‌ ಸ್ಟೆನೊಗ್ರಫಿಯಲ್ಲಿ ನಿಮಿಷಕ್ಕೆ 60 ಪದ ಟೈಪ್‌ ಮಾಡುವ ಸಾಮರ್ಥ್ಯ ಇರಬೇಕು. ಕಂಪ್ಯೂಟರ್‌ ಬಳಕೆ ತಿಳಿದಿರಬೇಕು.

ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌: www.isro.gov.in. ಅಧಿಸೂಚನೆ ಪಿಡಿಎಫ್‌ ಈ ಕೆಳಗೆ ನೀಡಲಾಗಿದೆ.

ಈ‌ ಮಾಹಿತಿ ಇಷ್ಟವಾದರೆ ಶೇರ್ ಮಾಡಿ , ಇತರರಿಗೆ ಸಹಾಯವಾಗುತ್ತದೆ