ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ ☑ (ಉದ್ಯೋಗ ಮಾಹಿತಿ ಹಾಸನ)

0

ಹಾಸನ : (ಹಾಸನ್_ನ್ಯೂಸ್) !, ಅರಸೀಕೆರೆ ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ 6 ಅಂಗನವಾಡಿ ಕಾರ್ಯಕರ್ತೆಯರು  ಹಾಗೂ 13 ಅಂಗನವಾಡಿ ಸಹಾಯಕಿಯರ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ.


    
     ಅರಸೀಕೆರ ತಾಲ್ಲೂಕಿನ ರಾಮಕೃಷ್ಣಪುರ ಮತ್ತು ಕಾಳೆನಹಳ್ಳಿಹಟ್ಟಿ ಅಂಗನವಾಡಿ ಕೇಂದ್ರಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಗಿರಿಗೌಡನಕೊಪ್ಪಲು , ದೊಡ್ಡಘಟ್ಟ, ಮಾಡಾಳು-1, ಆನೇನಹಳ್ಳಿ, ಅಂಗನವಾಡಿ ಕಾರ್ಯಕರ್ತೆ (ಇತರೆ) ಆಯ್ಕೆ ಮಾಡಲಾಗುವುದು.


         ಜೇನುಕಲ್ಲು ನಗರ -2, ಮಾರುತಿ ನಗರ -2, ಜಾಜೂರು ಗೊಲ್ಲರಹಟ್ಟಿ, ಬಾಚೇನಹಳ್ಳಿ, ದೊಡ್ಡಘಟ್ಟ, ಬಿಳೇನಹಳ್ಳಿ, ಜೇನುಕಲ್ಲು ನಗರ-1,  ಗಂಜಿಗೆರೆ, ಚಿಂದೇನಹಳ್ಳಿ ಗಡಿ, ಕಾಡಯ್ಯನಕೊಪ್ಪಲು, ಪನ್ನಸಮುದ್ರ, ನಾಗವೇದಿ, ಶ್ರೀನಿವಾಸನಗರ ಅಂಗನವಾಡಿಗಳಲ್ಲಿ ಸಹಾಯಕಿ ಹುದ್ದೆ ಖಾಲಿ ಇರುತ್ತದೆ. ಸ್ಥಳೀಯರಿಗೆ ಮಾತ್ರ ಆಧ್ಯತೆಯಿದ್ದು ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ವೆಬ್‍ಸೆಟ್ WWW.anganawadirecruit.kar.nic.in ಮೂಲಕ ಜ.30 ಸಂಜೆ 5.30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


       ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗ ಕಚೇರಿ ವೇಳೆಯಲ್ಲಿ. ದೂ. ಸಂ 08174-233060. ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here