Belur

ಬೇಲೂರು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ “

By Hassan News

February 24, 2023

:- ಶಿಲ್ಪಗಳ ತವರು ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಥಮ ಶಿಲಾ ಶಾಸನ‌ ನೀಡಿದ ಬೇಲೂರು ತಾಲ್ಲೂಕಿನಲ್ಲಿ ಮಾರ್ಚ್ ೭ ಮತ್ತು ೮ ರಂದು‌ ನಡೆಯುವ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬೇಲೂರು ತಹಶೀಲ್ದಾರ್ ರಮೇಶ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಎಲ್.ರಾಜೇಗೌಡರ ನೇತೃತ್ವದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು. ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ ತಹಶೀಲ್ದಾರ್ ರಮೇಶ್, ಸಾಮಾನ್ಯವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಲಾಂಛನ ಬಿಡುಗಡೆ ಮಾಡುವುದಿಲ್ಲ. ಆದರೆ ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಜಕ್ಕೂ ಕೂಡ ಉತ್ತಮ ಕಾರ್ಯವನ್ನು ನಡೆಸುವ ಮೂಲಕ ಬೇಲೂರು ತಾಲ್ಲೂಕಿನ ವೈವಿಧ್ಯಮಯ ಮತ್ತು ವೈವಿಧ್ಯತೆಯನ್ನು ಎತ್ತಿ ಹಿಡಿಯುವ ಲಾಂಛನವನ್ನು ನಮ್ಮ ಕೈಯಲ್ಲಿ ಬಿಡುಗಡೆ ಮಾಡಲು ಅನುವು ಮಾಡಿದ ಪರಿಷತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ವಿಶೇಷವಾಗಿ ಬೇಲೂರಿನ ಶಿಲ್ಪಕಲೆಗಳು, ಹಲ್ಮಿಡಿ ಶಾಸನ ಮತ್ತು ನೀರಾವರಿ, ಕೃಷಿ ಲಾಂಛನದಲ್ಲಿ ಬಂದಿರುವುದು ಖುಷಿ ತಂದಿದೆ. ೯ ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸುಂದರವಾಗಿ ಮತ್ತು ಅರ್ಥಪೂರ್ಣವಾಗಲಿ ಎಂದು ಹಾರೈಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ ಇದೇ ಪ್ರಥಮ ಭಾರಿಗೆ ಬೇಲೂರು ತಾಲ್ಲೂಕಿನ ಪ್ರಾಕೃತಿಕ ಸೌಂದರ್ಯ ಹಾಗೂ ಸ್ವರೂಪವನ್ನು ಒಳಗೊಂಡ ಲಾಂಛನವನ್ನು ಯುವ ಸಾಹಿತಿ ಎ.ಸಿ.ನಿರಂಜನ್ ವಿನ್ಯಾಸ ಮಾಡಿದ್ದಾರೆ. ಈಗಾಗಲೇ ೯ ನೇ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ಮಾಡಲಾಗುತ್ತದೆ.ಮಾರ್ಚ್ ೭ ಮತ್ತು ೮ ರಂದು ನಡೆಯುವ ಸಮ್ಮೇಳನದಲ್ಲಿ ಮೊದಲ ದಿನ ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರಿಗೆ ಅಭಿನಂದನೆ ಮತ್ತು ಸ್ಥಳೀಯ ‌ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ೯ ರಂದು ಬೆಳಿಗ್ಗೆ ಧ್ವಜಾರೋಹಣ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನೆ ಕಾರ್ಯಕ್ರಮ, ಕವಿಗೋಷ್ಠಿ ಮತ್ತು ವಿಚಾರ ಮಂಟಪ ಹಾಗೂ ಸಮಾರೋಪ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಮತ್ತು ಇಂದು ಬಿಡುಗಡೆಯಾದ ಸಮ್ಮೇಳನದ ಲಾಂಛನವನ್ನು ಸರ್ವರಿಗೂ ತಮ್ಮ ಮೊಬೈಲ್ ಡಿಪಿಗೆ ಮತ್ತು ಸಾಮಾಜಿಕ ಜಲಾತಾಣದಲ್ಲಿ ಪ್ರಕಟಸಬೇಕು ಎಂದು ವಿನಂತಿ ಮಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಉಪಾಧ್ಯಕ್ಷ ಗುರುರಾಜ್, ಮಾಜಿ ಗೌರವ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಸಂಘಟನಾ ಕಾರ್ಯದರ್ಶಿ ಬೊಮ್ಮಡಿಹಳ್ಳ

ಕುಮಾರಸ್ವಾಮಿ, ಸಾಹಿತಿಗಳಾದ ಡಾ.ಶ್ರೀವತ್ಸ ಎಸ್ ವಟಿ, ಬೇಲೂರು ಪಲ್ಲವಿ, ಮಾರುತಿ ದೊಡ್ಡಕೊಡಿಹಳ್ಳಿ, ಪತ್ರಕರ್ತರಾದ ಲೋಹಿತ್, ಗಣೇಶ್, ರವಿ ಹೊಳ್ಳ, ರಮೇಶ್, ಪರಿಷತ್ತು ಪದಾಧಿಕಾರಿಗಳಾದ ಬಿ.ಸಿ.ಆನಂದ್, ಚನ್ನಕೇಶವೇಗೌಡ, ಪುರುಷೋತ್ತಮ, ನಾಗರಾಜ್ ಇನ್ನೂ ಮುಂತಾದವರು ಹಾಜರಿದ್ದರು.

ಚಿತ್ರ ೩ (ಬಿ.ಎಲ್.ಆರ್.ಪಿ) ಬೇಲೂರಿನಲ್ಲಿ ನಡೆಯುವ ಸಾಹಿತ್ಯ ಪರಿಷತ್ತು ೯ ನೇ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಶೀಲ್ದಾರ್ ರಮೇಶ್ ಬಿಡುಗಡೆ ಮಾಡಿದರು.