ಹಾಸನದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ‌ಯ ಈದಿನದ ಹೈಲೈಟ್ಸ್

0

ಹಾಸನ ನ.01 :  ಜಿಲ್ಲಾ ಕನ್ನಡ ರಾಜ್ಯೋತ್ಸವ ದಿನಾಚರಣಾ ಸಮಿತಿಯ ವತಿಯಿಂದ  ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಆಯೋಜಿಸಲಾಗಿದ್ದ, 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು  ತಾಯಿ ಭುವನೇಶ್ವರಿದೇವಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದ ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

   ದ್ವಜವಂದನೆ ಸ್ವೀಕರಿಸಿ ಮಾತನಾಡಿದ ಸಚಿವರು ರಾಜ್ಯ ಮಟ್ಟದರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಹಾಸನ ಜಿಲ್ಲೆಯವರಾದ ಹೆಚ್.ಆರ್. ಕಸ್ತೂರಿರಂಗನ್ ಹಾಗೂ ಇತರ ಪ್ರಶಸ್ತಿ ಪುರಸ್ಕøತರಿಗೆ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಎಲ್ಲಾ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.

ಇಂದು ನಮ್ಮಕರುನಾಡಿಗೆ ಸಂಭ್ರಮದ ದಿನ ಕರ್ನಾಟಕರಾಜ್ಯ ಉದಯಿಸಿದ ದಿನ ನಾಡು ನುಡಿಯ ಸಂರಕ್ಷಣೆ, ಸಮೃದ್ದಿಗೆ ಸಂಕಲ್ಪ ಮಾಡುತ್ತಾ, ಅದಕ್ಕೆ ಶಕ್ತಿ ನೀಡುವಂತೆತಾಯಿ ಭುವನೇಶ್ವರಿ ಹಾಗೂ ಚಾಮುಂಡೇಶ್ವರಿ ಮತ್ತು ಹಾಸನಾಂಬೆಯಲ್ಲಿ ಪ್ರಾರ್ಥಿಸೋಣ ಎಂದರು.

ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿಯೇ ಕರ್ನಾಟಕ ಏಕೀಕರಣ ಕೂಗು ಎದ್ದಿತ್ತು.1924 ರಲ್ಲಿ ಬೆಳಗಾವಿಯಲ್ಲಿ ನಡೆದಕಾಂಗ್ರೇಸ್‍ಅಧಿವೇಶನದ ಸಂದರ್ಭದಲ್ಲಿಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿಕರ್ನಾಟಕಏಕೀಕರಣದ ನಿರ್ಣಯ ಮಂಡಿಸಲಾಯಿತು ಎಂದರು.

ಹಾಸನ ಜಿಲ್ಲೆಯವರಾದ ಯಶೋಧರ ದಾಸಪ್ಪ, ಹಾರನಹಳ್ಳಿ ರಾಮಸ್ವಾಮಿ, ಕೆ.ಎಂ ರುದ್ರಪ್ಪ,ಗೊರೂರುರಾಮಸ್ವಾಮಿಅಯ್ಯಂಗಾರ್, ಸಂಪತ್‍ಐಯ್ಯಂಗಾರ್‍ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದು ಸ್ಮರಣೀಯ ಎಂದು ತಿಳಿಸಿದರು.

ಸ್ವಾತಂತ್ರ್ಯಾನಂತರ1950ರಲ್ಲಿ ಭಾರತವುಗಣತಂತ್ರರಾಷ್ಟ್ರವಾದ ಮೇಲೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದ ಸಂದರ್ಭ1-11-1956ರಲ್ಲಿ ಮೈಸೂರುರಾಜ್ಯರಚನೆಯಾಯಿತು. ನಂತರ1-11-1973ರಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತಡಿ. ದೇವರಾಜ್‍ಅರಸುಅವರು ಮೈಸೂರುರಾಜ್ಯವನ್ನುಕರ್ನಾಟಕಎಂದು ಮರು ನಾಮಕರಣ ಮಾಡಿದರು.  ರಾಜ್ಯರಚನೆಯಈ ಸವಿ ನೆನಪಿಗಾಗಿ ಪ್ರತಿವರ್ಷ ನವೆಂಬರ್1 ರಂದುಕನ್ನಡರಾಜ್ಯೋತ್ಸವವನ್ನುಆಚರಿಸುತ್ತಾ ಬಂದಿದ್ದೇವೆ ಎಂದರು.

ವಿವಿಧತೆಯಲ್ಲಿಏಕತೆಗೆ ಹೆಸರಾಗಿರುವಕರ್ನಾಟಕತನ್ನದೇಆದ ಐತಿಹಾಸಿಕ, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಜಗತ್ತಿನಾದ್ಯಂತ ಹೆಸರಾಗಿದೆ. ಅದಕ್ಕೆಲ್ಲಾಕಾರಣರಾದ ನಮ್ಮ ಹಿರಿಯರಿಗೆ,ಈ ನಾಡನ್ನುಕಟ್ಟಿದಗಣ್ಯರಿಗೆಕೃತಜ್ಞತಾ ನಮನ ಸಲ್ಲಿಸುವುದು ನಮ್ಮಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕನ್ನಡ ಭಾಷೆಗೆ3 ಶತಮಾನಗಳಿಗೂ ಹೆಚ್ಚಿನಇತಿಹಾಸವಿದೆ. ಕ್ರಿ.ಪೂ.2ನೇ ಶತಮಾನದಲ್ಲೇಕನ್ನಡ ಭಾಷೆ, ಸಾಹಿತ್ಯಇತ್ತೆಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಆ ನಂತರದಲ್ಲಿ ಹಂತ ಹಂತವಾಗಿ ವಿವಿಧ ಸ್ವರೂಪಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳು ಬೆಳೆದು ಬಂದಿವೆ. ಎಂಟುಜ್ಞಾನಪೀಠ ಪ್ರಶಸ್ತಿಗಳು ನಮ್ಮ ನಾಡಿನ ಸಾಹಿತ್ಯ ಶ್ರೀಮಂತಿಕೆಯ ಸಂಕೇತವಾಗಿದೆ ಎಂದರು.

‘ಮನುಕುಲ ತಾನೊಂದೇ ವಲಂ’ ಎಂದು ಸಾರಿದ ಆದಿ ಕವಿ ಪಂಪನಿಂದ ಹಿಡಿದುರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ಕುವೆಂಪು, ದಾ.ರಾ.ಬೇಂದ್ರೆ, ಮಾಸ್ತಿ, ಗಿರೀಶ್‍ಕಾರ್ನಾಡ್, ಯು.ಆರ್.ಅನಂತಮೂರ್ತಿ, ಚಂದ್ರಶೇಖರಕಂಬಾರ ಮತ್ತಿತರ ಶ್ರೇಷ್ಠ ಕವಿಗಳು, ಸಾಹಿತಿಗಳು, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರಂತಹ ಶ್ರೇಷ್ಠ ವಚನಕಾರರು, ಸಮಾಜ ಸುಧಾರಕರು, ಪುರಂದರದಾಸ, ಕನಕದಾಸರಂತಹದಾರ್ಶನಿಕರು, ನಮ್ಮ ಬದುಕಿನದಾರಿಗೆ ದೀಪ ಹಚ್ಚಿ ಬೆಳಗಿದ್ದಾರೆ. ರಾಷ್ಟ್ರ ಕವಿ ಕುವೆಂಪು ವಿಶ್ವ ಮಾನವ ಸಂದೇಶವನ್ನೇ ಸಾರಿದ್ದಾರೆ ಎಂದು ಹೇಳಿದರು.

ಶಾತವಾಹನರು, ಚಾಲುಕ್ಯರು, ಕದಂಬರು, ರಾಷ್ಟ್ರಕೂಟರು, ಸೇವುಣರು, ಹೊಯ್ಸಳರು, ತಲಕಾಡುಗಂಗರು, ವಿಜಯನಗರಅರಸರು, ನಾಯಕರು, ಬಹುಮನಿ ಸುಲ್ತಾನರು, ಮೈಸೂರುಅರಸರು, ಬ್ರಿಟೀಷರು ಸೇರಿದಂತೆ ಹತ್ತು ಹಲವು ಆಳರಸರ ಆಡಳಿತದಲ್ಲಿ ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದ ಹೆಮ್ಮೆಕನ್ನಡಿಗರದ್ದು ಎಂದರು.

ಕಿತ್ತೂರುರಾಣಿಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮದಕರಿನಾಯಕರಂತಹಕೆಚ್ಚೆದೆಯ ಕಲಿಗಳ ವೀರ ಪರಂಪರೆಯೂ ನಮ್ಮಲ್ಲಿದೆ. ಅದೇರೀತಿಕರ್ನಾಟಕ ಶಿಲ್ಪಕಲೆಗಳ ತವರೂರು ಸಹ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಈ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದರೆ, ಹಂಪೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಹೀಗೆ ನೂರಾರು ಸ್ಥಳಗಳು ನಮ್ಮ ನಾಡಿನ ಭವ್ಯ ಪರಂಪರೆ ಹಾಗೂಇತಿಹಾಸವನ್ನು ಇಂದಿಗೂ ಸಾರುತ್ತಿವೆ ಎಂದು ತಿಳಿಸಿದರು.

ನಮ್ಮ ಹೆಮ್ಮೆಯಕನ್ನಡಕ್ಕೆ ಪಾಶ್ಚಿಮಾತ್ಯರ ಕೊಡುಗೆಯೂ ಸ್ಮರಣೀಯ. ರೆವರೆಂಡ್‍ಕಿಟಲ್, ಬಿ.ಎಲ್.ರೈಸ್, ಬಿ.ಪಿ.ರೈಸ್ ಮತ್ತಿತರರು ಹಾಗೂ ಲಂಡನ್ ಮಿಷನರಿ, ಬಾಸೆಲ್ ಮಿಷನ್, ವೆಸ್ಲಿಯನ್ ಮಿಷನರಿಗಳು ನಮ್ಮ ಭಾಷಾ ಬೆಳವಣಿಗೆಗೆ ನೆರವಾಗಿವೆ.  ಮೈಸೂರುಒಡೆಯರು, ಬೆಂಗಳೂರು ಕಟ್ಟಿದ ನಾಡ ಪ್ರಭುಕೆಂಪೇಗೌಡರು, ಅದೇರೀತಿರಾಜ್ಯಕ್ಕೆ ಬೆಳಕು, ಬೆಳೆಗೆ ನೀರು ನೀಡಿರಾಷ್ಟ್ರಕ್ಕೆ ಮಾದರಿ ಎನಿಸಿದ ಭಾರತರತ್ನಡಾ:ಸರ್.ಎಂ.ವಿಶ್ವೇಶ್ವರಯ್ಯನವರನ್ನೂಕೃತಜ್ಞತಾ ಪೂರ್ವಕವಾಗಿ ಸ್ಮರಿಸಲೇ ಬೇಕಿದೆ ಎಂದರು.

ಹಾಸನದ ಹಿರಿಮೆಯೂ ಕಡಿಮೆಯೇನಿಲ್ಲ. ಕನ್ನಡದ ಪ್ರಥಮ ಶಿಲಾ ಶಾಸನ ಹಲ್ಮಿಡಿ ಶಾಸನ ದೊರೆತಿರುವುದು ಈ ಜಿಲ್ಲೆಯಲ್ಲಿಯೇ. ದೇಶದ ಪ್ರಧಾನಿಯಾಗಿದ್ದ ರಾಜ್ಯದ ಏಕೈಕ ಕನ್ನಡಿಗರಾದ ಹೆಚ್.ಡಿ. ದೇವೇಗೌಡಅವರು ಈ ಜಿಲ್ಲೆಯ ಕೊಡುಗೆಯೇ. ಅದೇರೀತಿ ಎಸ್.ಎಲ್.ಭೈರಪ್ಪ, ಅ.ನ.ಕೃ., ಎಸ್.ಕೆ.ಕರೀಂಖಾನ್, ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾಯರು, ಶಾರದಾ ಪ್ರಸಾದ್, ಹಾರನಹಳ್ಳಿ ರಾಮಸ್ವಾಮಿ, ಕಿ.ರಂ.ನಾಗರಾಜ್, ಕ್ಯಾಪ್ಟನ್ ಗೋಪಿನಾಥನ್, ಗರುಡನಗಿರಿ ನಾಗರಾಜ್, ಜಾವಗಲ್ ಶ್ರೀನಾಥ್, ಪ್ಯಾರಾಒಲಂಪಿಯನ್ ಚಾಂಪಿಯನ್‍ಗಳಾದ ಸುಹಾಸ್ ಹಾಗೂ ಗಿರೀಶ್ ಮುಂತಾದ ಮುತ್ತುಗಳು ಈ ಮಣ್ಣಿನಲ್ಲಿ ಅರಳಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿತಮ್ಮಕಂಪನ್ನು ಪಸರಿಸಿವೆ ಎಂದರು.

ರಾಜ್ಯ ಕಳೆದ 66 ವರ್ಷಗಳಲ್ಲಿ ಹಂತ ಹಂತವಾಗಿಅಭಿವೃದ್ದಿ ಹಾದಿಯಲ್ಲಿ ಸಾಗಿದೆ. ನಮ್ಮ ಸಾಧಕರು, ಶ್ರಮಿಕರು, ಆಡಳಿತಗಾರರ ಕಾಳಜಿಯಿಂದ ರಾಜ್ಯಅತ್ಯುತ್ತಮ ಪ್ರಗತಿ ಸಾಧಿಸಿ ಮುನ್ನಡೆದಿದೆ. ಕೋವಿಡ್-19 ನಿಂದಾದ ಹಿನ್ನಡೆಗಳ ನಡುವೆಯೂ ರಾಜ್ಯ ಸರ್ಕಾರರಾಜ್ಯ ಹಾಗೂ ಜಿಲ್ಲೆಯಲ್ಲಿಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸುತ್ತಾ ಜನಮನ್ನಣೆಗಳಿಸಿದೆ ಎಂದು ಹೇಳಿದರು.

ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆ ಕಾಮಗಾರಿಗೆ ಅನುಮೋದನೆ ದೊರೆತಿದ್ದು, 175 ಕೋಟಿರೂ ವೆಚ್ಚದಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. “ಖೇಲೋ ಇಂಡಿಯಾಯೋಜನೆ”ಯಡಿ 8.5 ಕೋಟಿರೂ ವೆಚ್ಚದಜಿಲ್ಲಾಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ಎಂದರು.

ಬೇಲೂರುತಾಲ್ಲೂಕಿನದ್ವಾರಸಮುದ್ರ ಮತ್ತುಇತರ 6 ಕೆರೆಗಳಿಗೆ ಕುಡಿಯುವ ನೀರು ಪೂರೈಸುವ125.46 ಕೋಟಿರೂ ವೆಚ್ಚದರಣಘಟ್ಟ ನೀರಾವರಿಯೋಜನೆ ಚಾಲನೆಗೆ ಸಿದ್ದವಾಗಿದೆ, ನಮ್ಮೆಲ್ಲೆರ ನೆಚ್ಚಿನ ನಟ ಪುನಿತ್‍ರಾಜ್‍ಕುಮಾರ್‍ಅವರಅನಿರೀಕ್ಷಿತ ಆಕಾಲಿಕ ನಿಧನದಿಂದಕಾರ್ಯಕ್ರಮ ಮುಂದೂಡಲಾಗಿದೆ, ಈ ಸಂದರ್ಭದಲ್ಲಿ ನಮ್ಮನ್ನುಆಗಲಿದರಾಷ್ಟ್ರ ಪ್ರಶಸ್ತಿ ಪುರಸ್ಕøತ ಪುನಿತ್‍ರಾಜ್‍ಕುಮಾರ್‍ಅವರ ಆಗಲಿಕೆಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಾಅವರಆತ್ಮಕ್ಕೆಚಿರಶಾಂತಿ ಸಿಗಲೆಂದು ನಾವೆಲ್ಲರೂ ಭಗವಂತನಲ್ಲಿ ಪ್ರಾರ್ಥಿಸೋಣ. ಶೀಘ್ರವೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ್ ಬೊಮ್ಮಾಯಿಯವರು ಹಳೇಬೀಡಿಗೆ ಆಗಮಿಸಿ ರಣಘಟ್ಟ ನೀರಾವರಿಕಾಮಾಗಾರಿಗೆ ಚಾಲನೆ ನೀಡಲಿದ್ದಾರೆ.  ಇದೇರೀತಿ 140 ಕೋಟಿರೂ ವೆಚ್ಚದಲ್ಲಿ ಹಾಸನ ನಗರಕ್ಕೆಕುಡಿಯುವ ನೀರು ಪೂರೈಸುವ   “ಅಮೃತ್‍ಯೋಜನೆ” ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿ ಚಾಲನೆ ದೊರೆಯಲಿದೆ ಎಂದರು.

ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದರಾಜ್ಯ ಹೆದ್ದಾರಿಅಭಿವೃದ್ದಿ ಹಾಗೂ ನವೀಕರಣಯೋಜನೆಯಲ್ಲಿ25 ಪ್ಯಾಕೇಜ್‍ಗಳಡಿ 500 ಕೋಟಿರೂ ವೆಚ್ಚದಲ್ಲಿ ಹಲವು ರಸ್ತೆಗಳ ಕಾಮಗಾರಿಕೈಗೆತ್ತಿಕೊಂಡಿದೆ, ಅಲ್ಲದೆ189 ಕಿ.ಮೀ ಜಿಲ್ಲಾ ಮುಖ್ಯರಸ್ತೆಅಭಿವೃದ್ಧಿ ಪಡಿಸಿದೆ ಎಂದರು.

ಕಳೆದ ಸಾಲಿನ ಅತಿವೃಷ್ಠಿಯಿಂದ ಹಾನಿಗೀಡಾದರಸ್ತೆ ಸೇತುವೆಗಳ ದುರಸ್ತಿಗೆ 52.31 ಕೋಟಿರೂಅನುದಾನ ಬಿಡುಗಡೆಯಾಗಿದ್ದು, 120 ಕಿ.ಮೀ ರಸ್ತೆ, 14 ಸೇತುವೆ/ಕಿರು ಸೇತುವೆ ದುರಸ್ತಿ ಕಾಮಗಾರಿಕೈಗೆತ್ತಿಕೊಂಡಿದ್ದು, ಬಹುತೇಕ ಮುಕ್ತಾಯಗೊಂಡಿದೆ ಎಂದರು.

ವಿಶೇಷ ಘಟಕಯೋಜನೆಯಡಿ15 ಕಿ.ಮೀ. ಗಿರಿಜನ ಉಪ ಯೋಜನೆಯಡಿ7.6 ಕಿ.ಮೀ. ರಸ್ತೆಅಭಿವೃದ್ಧಿಪಡಿಸಲಾಗುತ್ತಿದೆ. ವಿಶೇಷ ಅಭಿವೃದ್ಧಿಯೋಜನೆಯಡಿ ಈ ಸಾಲಿಗೆ 18 ಹೊಸ ಕಾಮಗಾರಿಗಳಿಗೆ 3.29 ಕೋಟಿರೂಅನುದಾನ ಬಿಡುಗಡೆಯಾಗಿದೆ ಎಂದರು.

ಜಿಲ್ಲೆಯಲ್ಲಿ845 ಕಿ.ಮೀ. ಉದ್ದದರಾಜ್ಯ ಹೆದ್ದಾರಿ ಹಾಗೂ 1235 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ವಾರ್ಷಿಕ ನಿರ್ವಹಣೆ ಮಾಡಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲುಕ್ರಮವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 82.5 ಕೋಟಿರೂ ವೆಚ್ಚದಲ್ಲಿ ಹಾಸನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಎರಡನೇ ಹಂತದಕಾಮಗಾರಿ ಪೂರ್ಣಗೊಂಡಿದೆ. ಹಾಸನ ನಗರದಲ್ಲಿ10 ಕೋಟಿರೂ ವೆಚ್ಚದಲ್ಲಿಕೌಟುಂಬಿಕ ನ್ಯಾಯಾಲಯಕಟ್ಟಡದ ನಿರ್ಮಾಣ.ಅರಸೀಕೆರೆಯಲ್ಲಿ 13 ಕೋಟಿ ಹಾಗೂ ಚನ್ನರಾಯಪಟ್ಟಣದಲ್ಲಿ10 ಕೋಟಿರೂ ವೆಚ್ಚದಲ್ಲಿತಾಲ್ಲೂಕು ನ್ಯಾಯಾಲಯ ಸಂಕೀರ್ಣ ನಿರ್ಮಾಣಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಇದೇರೀತಿ46.46  ಕೋಟಿರೂ ವೆಚ್ಚದಲ್ಲಿಇತರ18 ಇಲಾಖಾ ಕಟ್ಟಡಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು,11 ಕಾಮಗಾರಿ ಪೂರ್ಣಗೊಂಡಿದ್ದು7 ಕಾಮಗಾರಿ ಪ್ರಗತಿಯಲ್ಲಿವೆ. 29.56 ಕೋಟಿರೂ ವೆಚ್ಚದಲ್ಲಿ8 ವಸತಿಗೃಹಗಳ ನಿರ್ಮಾಣಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾಲೇಜು ಶಿಕ್ಷಣ ಯೋಜನೆಯಡಿ88.24 ಕೋಟಿರೂ ವೆಚ್ಚದಲ್ಲಿ31 ಕಾಮಗಾರಿಅನುಮೋದನೆಗೊಂಡಿದೆ29 ಕಾಮಗಾರಿಗಳಿಗೆ ಗುತ್ತಿಗೆ ನಿಗಧಿಯಾಗಿದ್ದು, 21 ಕಾಮಗಾರಿಗಳು ಪೂರ್ಣಗೊಂಡಿದ್ದು8 ಕಾಮಗಾರಿಗಳು ಪ್ರಗತಿಯಲ್ಲಿದ್ದು, 2 ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದರು.

50 ಕೋಟಿರೂ ವೆಚ್ಚದ ಹಾಸನ ಸರ್ಕಾರಿಇಂಜಿನಿಯರಿಂಗ್‍ಕಾಲೇಜುಕಟ್ಟಡಕಾಮಗಾರಿ ಪ್ರಗತಿಯಲ್ಲಿದೆ50 ಕೋಟಿರೂ ವೆಚ್ಚದ ಹಾಸನ ವೈದ್ಯಕೀಯಕಾಲೇಜುಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿಆಸ್ಪತ್ರೆ  ನಿರ್ಮಾಣಕಾಮಗಾರಿ ಪ್ರಗತಿಯಲ್ಲಿದೆ. 58 ಕೋಟಿರೂ ವೆಚ್ಚದ ಮೊಸಳೆ ಹೊಸಹಳ್ಳಿ ಸರ್ಕಾರಿಇಂಜಿನಿಯರಿಂಗ್‍ಕಾಲೇಜು ಹಾಗೂ 12.50 ಕೋಟಿರೂ ವೆಚ್ಚದ ಪಾಲಿಟೆಕ್ನಿಕ್‍ಕಾಲೇಜುಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ, 9.9 ಕೋಟಿರೂ ವೆಚ್ಚದಲ್ಲಿ ಹೊಳೆನರಸೀಪುರ ಪಾಲಿಟೆಕ್ನಿಕ್‍ಕಾಲೇಜು ಪೂರ್ಣಗೊಂಡಿದೆ. 58 ಕೋಟಿರೂ ವೆಚ್ಚದಲ್ಲಿ ಅರಸೀಕೆರೆ ಸರ್ಕಾರಿಇಂಜಿನಿಯರಿಂಗ್‍ಕಾಲೇಜು ನಿರ್ಮಾಣಕಾಮಗಾರಿ ಪ್ರಗತಿಯಲ್ಲಿದೆ6.50 ಕೋಟಿರೂ ವೆಚ್ಚದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ಕಾಲೇಜಿನಹೆಚ್ ಮಾದರಿ ನೂತನಕಟ್ಟಡಕಾಮಗಾರಿಗೆಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

      ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಪರಿಸ್ಥಿತಿಯು ನಮ್ಮನ್ನು ಸಾಕಷ್ಟು ಕಾಡಿದ್ದು, ಅದನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗಿದೆ. ಮೂಲಭೂತ ಸೌಕರ್ಯ, ದುರಸ್ಥಿ ಮತ್ತಿತರ ಕಾರ್ಯಗಳಿಗೆ ಜಿಲ್ಲೆಗೆಒಟ್ಟು 48 ಕೋಟಿರೂಪಾಯಿಅನುದಾನ ಒದಗಿಸಿದೆ. ಎರಡು ವರ್ಷಗಳಲ್ಲಿ 40,782 ರೈತರಿಗೆ 50 ಕೋಟಿರೂ ಬೆಳೆಹಾನಿ ಪರಿಹಾರಒದಗಿಸಲಾಗಿದೆ ಎಂದು ಹೇಳಿದರು.

ಮನೆಹಾನಿ ಹಾಗೂ ಪುನರ್ ನಿರ್ಮಾಣಕ್ಕಾಗಿ 2677 ಫಲಾನುಭವಿಗಳಿಗೆ ವಿಕೋಪ ಪರಿಹಾರ ನಿಧಿ ನಿಯಮದನ್ವಯ ಹಣ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ನಗರೋತ್ಥಾನಯೋಜನೆಯಡಿ 9.40 ಕೋಟಿರೂ ಹಂಚಿಕೆಯಾಗಿದೆ. 92 ಕಾಮಗಾರಿಗಳಿಗೆ ಕ್ರಿಯಾಯೋಜನೆಅನುಮೋದನೆಯಾಗಿದೆ. 15 ನೇ ಹಣಕಾಸುಯೋಜನೆಯಡಿ 20 ಕೋಟಿರೂ ಹಂಚಿಕೆಯಾಗಿದೆ 132 ಕಾಮಗಾರಿಗಳ ಕ್ರಿಯಾಯೋಜನೆಗೆಅನುಮೋದನೆಯಾಗಿದೆ ಎಂದರು.

2021-22 ನೇ ಸಾಲಿನಲ್ಲಿಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಉಪಯೋಜನೆಯಡಿ96 ಕೋಟಿರೂ ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ13.31 ಕೋಟಿ ರೂಗಳನ್ನು ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮ ಅನುಷ್ಠಾನಕ್ಕೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶೇ.70 ಕ್ಕೂ ಅಧಿಕಗುರಿ ಸಾಧನೆಯಾಗಿದೆ ಎಂದು ತಿಳಿಸಿದರು.

ಈ ಸಾಲಿನ ಪ್ರಗತಿ ಕಾಲೋನಿಗಳ ಯೋಜನೆಯಡಿ14 ಕೋಟಿ ರೂಗಳನ್ನು ಪರಿಶಿಷ್ಟ ಜಾತಿಯಜನರು ಹೆಚ್ಚು ವಾಸಿಸುವ ಕಾಲೋನಿಗಳ ಅಭಿವೃದ್ದಿಗೆ ಹಾಗೂ 4ಕೋಟಿರೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಕಾಲೋನಿಗಳ ಮೂಲಭೂತ ಸೌಕರ್ಯಅಭಿವೃದ್ದಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 6.45 ಕೋಟಿರೂ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. 65 ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ1.10 ಕೋಟಿರೂ ಪರಿಹಾರ ಮಂಜೂರು ಮಾಡಲಾಗಿದೆ. ಅಸ್ಪೃಶ್ಯತಾ ನಿವಾರಣಾಯೋಜನೆಯಡಿಅಂತರ್‍ಜಾತಿ ವಿವಾಹದ199 ದಂಪತಿಗಳಿಗೆ 4.88 ಕೋಟಿರೂ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದಜಿಲ್ಲೆಯಲ್ಲಿಒಟ್ಟು129 ಸಮುದಾಯ ಭವನಗಳಿಗೆ ಒಟ್ಟು22.46 ಕೋಟಿರೂ ಸಹಾಯಧನ ಬಿಡುಗಡೆ ಮಾಡಲಾಗಿದ್ದು, 50 ಕಾಮಗಾರಿಗಳು ಪೂರ್ಣಗೊಂಡಿದ್ದು, 79 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ‘ನಮ್ಮ ಬೆಳೆ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆಜಿಲ್ಲೆಯಾದ್ಯಂತರೈತರ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿಕಿಸಾನ್ ಸಮ್ಮಾನ್ ನಿಧಿ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನಯೋಜನೆಯಡಿಜಿಲ್ಲೆಯಲ್ಲಿ2.55 ಲಕ್ಷಕ್ಕೂಅಧಿಕರೈತರಿಗೆಒಟ್ಟಾರೆ526.34 ಕೋಟಿರೂ ಹಣ ವರ್ಗಾವಣೆಯಾಗಿದೆ ಎಂದರು.

ಜಲಾನಯನಅಭಿವೃದ್ಧಿ ಮೂಲಕ ಬರಗಾಲ ನಿಯಂತ್ರಿಸುವ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ62. 52 ಲಕ್ಷರೂ ವೆಚ್ಚದಲ್ಲಿ6 ಗೋಕಟ್ಟೆ ಹಾಗೂ 1.40 ಲಕ್ಷ ಸಸಿಗಳನ್ನು ನೆಡಲಾಗಿದೆ. 17 ಹೊಸ ಕೃಷಿಯಂತ್ರಧಾರೆ ಪ್ರಾರಂಭಿಸಿ ಎಲ್ಲಾರೈತ ಸಂಪರ್ಕ ಕೇಂದ್ರಗಳಲ್ಲಿ ಸಕಾಲದಲ್ಲಿಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆದರದಲ್ಲಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸೂಕ್ಷ್ಮ ನೀರಾವರಿಯೋಜನೆಯಡಿ2021-22 ನೇ ಸಾಲಿಗೆ 13.50 ಕೋಟಿರೂ ವೆಚ್ಚದಲ್ಲಿ ನೀರಾವರಿ ಘಟಕಗಳ ವಿತರಣೆ ಮಾಡಲಾಗುತ್ತಿದೆ. ಕೃಷಿ ಯಂತ್ರೋಪಕರಣಯೋಜನೆಯಡಿ ಶೇಕಡ50 ರಿಂದ90ರ ರಿಯಾಯಿತಿದರದಲ್ಲಿ2.94 ಕೋಟಿ ರೂಪಾಯಿಗಳ ಯಂತ್ರೋಪಕರಣಗಳ ವಿತರಣೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ತೋಟಗಾರಿಕೆಇಲಾಖೆಯ ವತಿಯಿಂದ ಅಂಗಾಂಶ ಆಲೂಗಡ್ಡೆಎ.ಆರ್.ಸಿ ತಾಂತ್ರಿಕತೆಯ ಮೂಲಕ ಹಾಸನ ಜಿಲ್ಲೆಯಲ್ಲಿ 2021ರ ಮುಂಗಾರು ಹಂಗಾಮಿನಲ್ಲಿ ಸುಮಾರು 181 ರೈತರಿಗೆ ಎ.ಆರ್.ಸಿ  ಆಲೂಗಡ್ಡೆ ಸಸಿಗಳನ್ನು ನೀಡಿ ಬೆಳೆ ಉತ್ಪಾದನೆಗೆ ಪ್ರೋತ್ಸಾಹಿಸಲಾಗಿದ್ದು, ಹಿಂಗಾರು ಹಂಗಾಮಿನಲ್ಲಿಯೂಇದು ಮುಂದುವರೆಯಲಿದೆ ಎಂದರು.

2021ರ ಕೋವಿಡ್-19ರ ಲಾಕ್‍ಡೌನ್ ಸಂದರ್ಭದಲ್ಲಿ ಬೆಳೆ ನಷ್ಟಕ್ಕೆ ಒಳಗಾಗಿದ್ದ 1062 ಮಂದಿ ಹೂವು, ಹಣ್ಣು ಮತ್ತುತರಕಾರಿ ಬೆಳೆಗಾರರಿಗೆ ರೂ.34.94 ಲಕ್ಷಗಳು ಪರಿಹಾರಧನವನ್ನು ಪಾವತಿಸಲಾಗಿದೆ. ವಿವಿಧರೈತಪರ ಯೋಜನೆಗಳಾದ ರಾಷ್ಟ್ರೀಯತೋಟಗಾರಿಕೆ ಮಿಷನ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಹನಿ ನೀರಾವರಿಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಯಾಂತ್ರೀಕರಣ, ಜೇನು ಕೃಷಿ ಪ್ರೋತ್ಸಾಹಯೋಜನೆ ಮುಂತಾದವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ.

2021-22 ನೇ ಸಾಲಿನಲ್ಲಿಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ41,228 ಕಟ್ಟಡಕಾರ್ಮಿಕರಿಗೆತಲಾ3000ರೂ ಗಳಂತೆ ಒಟ್ಟು12.36ಕೋಟಿ ರೂಆರ್ಥಿಕಧನಸಹಾಯ ನೀಡಲಾಗಿದೆ. ಅಸಂಘಟಿತ ವಲಯದ11 ವರ್ಗಗಳ 20,209 ಕಾರ್ಮಿಕರಿಗೆತಲಾಎರಡು ಸಾವಿರರೂ ಗಳಂತೆ ನಾಲ್ಕು ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ. ಕಟ್ಟಡಕಾರ್ಮಿಕರಿಗೆ62,500 ಆಹಾರಕಿಟ್, ಸುರಕ್ಷತಾ ಕಿಟ್‍ಗಳನ್ನು ವಿತರಿಸಲಾಗಿದೆ. 8388 ಕಟ್ಟಡಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮದುವೆ ಹಾಗೂ ವೈದ್ಯಕೀಯಆರ್ಥಿಕಧನಸಹಾಯಕ್ಕಾಗಿ15.46ಕೋಟಿರೂ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ವಸತಿಯೋಜನೆಯಡಿ2021-22 ನೇ ಸಾಲಿಗೆ 4685 ಫಲಾನುಭವಿಗಳಿಗೆ ಮನೆ ನಿರ್ಮಾಣಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ22.36 ಕೋಟಿರೂ ಬಿಡುಗಡೆ ಮಾಡಲಾಗಿದೆ ಎಂದರು.

ಸ್ವಚ್ಚ ಭಾರತ್ ಮಿಷನ್‍ಯೋಜನೆಯಡಿ ಈ ಸಾಲಿನಲ್ಲಿ2989 ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದು, 3.77 ಕೋಟಿರೂಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯ267 ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ನಿರ್ವಹಣಾಘಟಕ ಸ್ಥಾಪಿಸುವ ಗುರಿ ಹೊಂದಲಾಗಿದ್ದು, 242 ಗ್ರಾಮ ಪಂಚಾಯಿತಿಗಳಲ್ಲಿ ಡಿ.ಪಿ.ಆರ್.ಗಳು ಅನುಮೋದನೆಗೊಂಡಿದ್ದು, ಗ್ರಾಮಪಂಚಾಯಿತಿಗಳಿಗೆ 8.2 ಕೋಟಿರೂ ಬಿಡುಗಡೆ ಮಾಡಲಾಗಿದ್ದು, ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಹೇಳಿದರು ಎಂದರು.


ಭಾರತದ ಸ್ವಾತಂತ್ರ್ಯೊತ್ಸವದಅಮೃತ ಮಹೋತ್ಸವದ ಸವಿ ನೆನಪಿಗಾಗಿ ಜಿಲ್ಲೆಯಲ್ಲಿ31ಗ್ರಾಮ ಪಂಚಾಯಿತಿಗಳನ್ನು ಅಮೃತಗ್ರಾಮ ಪಂಚಾಯಿತಿಯೋಜನೆಗೆಆಯ್ಕೆ ಮಾಡಿಕೊಳ್ಳಲಾಗಿದ್ದು, ಆಯಾಗ್ರಾಮ ಪಂಚಾಯಿತಿಗಳ ಸಮಗ್ರ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆಕ್ರಮವಹಿಸಲಾಗುತ್ತಿದೆ ಎಂದರು.

ಮಹಾತ್ಮಗಾಂಧಿರಾಷ್ಟ್ರೀಯಗ್ರಾಮೀಣಉದ್ಯೋಗಖಾತರಿಯೋಜನೆಯಡಿ2021-22ನೇ ಸಾಲಿಗೆ ವಾರ್ಷಿಕ34ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಈವರೆಗೆ41.80 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.123 ರಷ್ಟು ಪ್ರಗತಿ ಸಾಧಿಸಿ ರಾಜ್ಯದ ಪ್ರಗತಿಯಲ್ಲಿ2ನೇ ಸ್ಥಾನ ಕಾಯ್ದುಕೊಳ್ಳಲಾಗಿದೆ ಹಾಗೂ ಆರ್ಥಿಕವಾಗಿ ರೂ.154.76 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಭೂಮಾಪನಕಾರ್ಯವನ್ನುಆಧುನಿಕತಂತ್ರಜ್ಞಾನ ಬಳಸಿ ಡ್ರೋಣ್‍ಆಧಾರಿತ ಸರ್ವೆ ಮಾಡುವ ಸಂಬಂಧ “ಸ್ವಾಮಿತ್ವ” ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

2021-22 ನೇ ಸಾಲಿನಲ್ಲಿರಾಜ್ಯ ವಲಯದ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿಜನಸಾಮಾನ್ಯರಆರೋಗ್ಯರಕ್ಷಣೆಯ ಸಲುವಾಗಿ ಯೋಗ ಮತ್ತುಆಯುಷ್‍ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲುಕ್ರಮ ವಹಿಸಲಾಗಿದೆ ಎಂದರು.

ಕಾವೇರಿನೀರಾವರಿ ನಿಗಮದ ವತಿಯಿಂದ 144 ಕೋಟಿರೂ ವೆಚ್ಚದಲ್ಲಿ ಹಾಸನ ನಗರದ ಸುತ್ತ ಮುತ್ತಲಿನ 7 ಕೆರೆಗಳನ್ನುಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಅದಿದೇವತೆತಾಯಿ ಹಾಸನಾಂಬೆ ದರ್ಶನ ಮಹೋತ್ಸವ ನಡೆಯುತ್ತಿದೆ. ಆ ದೇವಿಯ ಆಶೀರ್ವಾದದಿಂದ ಇಡೀಜಗತ್ತನ್ನುಕಾಡುತ್ತಿರುವ ಕೋವಿಡ್-19 ಹಾಗೂ ಪ್ರಕೃತಿ ವಿಕೋಪಗಳು ದೂರಾಗಿಕರುನಾಡು ಸಮೃದ್ದಿಯಾಗಲಿ ಎಂದು ಹಾರೈಸುವೆ ಎಂದು ಸಚಿವರು ಹೇಳಿದರು.

ಕೋವಿಡ್-19 ರ ವಿರುದ್ದ ಹೋರಾಡಿಉತ್ತಮ ಸೇವೆ ಸಲ್ಲಿಸುತ್ತಿರುವಎಲ್ಲಾ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಎಲ್ಲಾಅಧಿಕಾರಿ ಸಿಬ್ಬಂದಿ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕೋವಿಡ್-19 ಇನ್ನೂ ನಮ್ಮಿಂದದೂರವಾಗಿಲ್ಲ, ಹಾಗಾಗಿ ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್, ಸ್ಯಾನಿಟೈಜರ್ ಬಳಸಿ ಸೋಂಕಿನಿಂದ ಸುರಕ್ಷಿತವಾಗುಳಿಯ ಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.90 ಕ್ಕೂ ಅಧಿಕ ಪ್ರಮಾಣದಲ್ಲಿಕೋವಿಡ್ ಲಸಿಕೆ ಹಾಕಲಾಗಿದೆ. ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಲಸಿಕೆ ಹಾಕಿಸಿಕೊಳ್ಳದೆ ಇರುವವರುಕೂಡಲೇ ಹಾಕಿಸಿಕೊಂಡು ತಮ್ಮ ಹಾಗೂ ಗ್ರಾಮದಆರೋಗ್ಯವನ್ನು ಸುರಕ್ಷತೆಗೊಳಿಸಬೇಕಾಗಿದೆ ಎಂದು ಸಚಿವರು ಹೇಳಿದರು.

ಕನ್ನಡರಾಜ್ಯೋತ್ಸವದ ಹಿನ್ನೆಲೆಯಲ್ಲಿರಾಜ್ಯ ಸರ್ಕಾರಕನ್ನಡಕ್ಕಾಗಿ ನಾವು ಎಂಬ ಅಭಿಯಾನ ಪ್ರಾರಂಭವಾಗಿದೆ. ಇದರ ಅಂಗವಾಗಿ ರಾಜ್ಯದಎಲ್ಲರೂಕನ್ನಡ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ “ಮಾತಾಡ್ ಮಾತಾಡ್‍ಕನ್ನಡ” ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕನ್ನಡ ಗೀತೆಗಳ ಸಮೂಹ ಗಾಯನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ನೆಲದ ನುಡಿಯ ಸಿರಿವಂತಿಕೆ ಹೆಚ್ಚಿಸಲುಕ್ರಮವಹಿಸಲಾಗಿದೆ ಎಂದು ಹೇಳಿದರು.

ಒಟ್ಟಾರೆ ನಾವೆಲ್ಲರೂ ನಮ್ಮ ನೆಲ-ಜಲ ನುಡಿ ಸಂಸ್ಕೃತಿರಕ್ಷಣೆಗೆ ಹಾಗೂ ನಾಡಿನ ಶ್ರೇಯಸ್ಸು ಸಂಪತ್ತಿನ ವೃದ್ಧಿಗೆ ಐಕ್ಯತೆಯಿಂದ ಶ್ರಮಿಸೋಣ ಜೊತೆಗೆ ಕರ್ನಾಟಕವು ವಿಶ್ವಕ್ಕೆ
ಮಾದರಿಯಾಗಿಸೋಣ ಎಂದು ಹೇಳಿದರು.

   ಇದೇ ಸಂಧರ್ಭದಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ವಿಕಲ ಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.

   ಬಿ.ಟಿ.ಮಾನವ ಮತ್ತು ತಂಡದಿಂದ ಕೋಲಾಟ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಬಿ. ಎ. ಪರಮೇಶ್,  ನಗರ ಸಭೆ ಅಧ್ಯಕ್ಷರಾದ  ಮೋಹನ್ ,ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ. ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ.ಕೃಷ್ಣೆಗೌಡ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ, ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here