ವೃತ್ತ ನಿರೀಕ್ಷಕ ಮಂಜುನಾಥಗೌಡ ಎಂದು ಕರ್ತವ್ಯದಲ್ಲಿದ್ದ ವೇಳೆ ಸಾವಿಗಿಡಾಗಿದ್ದಾರೆ

0

ಹಾಸನ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೃತ್ತ ನಿರೀಕ್ಷಕ ಮಂಜುನಾಥಗೌಡ ಎಂದು ಕರ್ತವ್ಯದಲ್ಲಿದ್ದ ವೇಳೆ ಸಾವಿಗಿಡಾಗಿದ್ದಾರೆ.

ಬೆಂಗಳೂರಿನ ಜಯನಗರದ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಮೂಲತಃ ಹಾಸನ ಜಿಲ್ಲೆಯವರು. ಹಾಸನ ತಾಲೂಕಿನ ಬೇಲೂರು ರಸ್ತೆಯಲ್ಲಿರುವ ಮದ್ದೂರು ಹೊಸಹಳ್ಳಿ ಗ್ರಾಮದ ಇವರು ರಾಜ್ಯದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನೆಲಮಂಗಲದ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮಂಜೇಗೌಡ ಎಂದರೆ ಇಡೀ ರೌಡಿಗಳೆ ನಡುಗುತ್ತಿದ್ದರು. ರಾತ್ರಿ 10:00 ನಂತರ ಬಾರ್ ಮತ್ತು ರೆಸ್ಟೋರೆಂಟ್ ಮತ್ತು ಡಾಬಾ ಗಳ ಮೇಲೆ ದಾಳಿ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ತಹಬದಿಗೆ ತರುವಲ್ಲಿ ಮುಂಚುಣಿ ಪಾತ್ರ ವಹಿಸಿದ್ದರು.

ಬಳಿಕ ಚನ್ನರಾಯಪಟ್ಟಣ ಠಾಣೆಗೆ ವರ್ಗಾವಣೆಗೊಂಡು ಚನ್ನರಾಯಪಟ್ಟಣದ ಕಾನೂನು ಮತ್ತು ಸುವ್ಯವಸ್ಥೆ ಅಷ್ಟೇ ಅಲ್ಲದೆ ಗಲ್ಲಿ ಗಲ್ಲಿಗಳಲ್ಲಿ ಹುದುಗಿ ಆರ್ಭಟಿಸುತ್ತಿದ್ದ ಕೆಲವು ಪುಡಿ ರೌಡಿಗಳನ್ನು ಮಟ್ಟ ಹಾಕಿ ಶಾಂತಿ ನೆಲೆಸುವಂತೆ ತಮ್ಮ ಅಧಿಕಾರವಧಿಯಲ್ಲಿ ಮಾಡಿದ್ದು ಶ್ಲಾಘನೀಯ ಸಂಗತಿ. ಬಳಿಕ ತಮ್ಮ ವೃತ್ತಿ ನಿಷ್ಠೆಯ ಮೇಲೆ ಪಿಎಸ್ಐ ಆಗಿದ್ದ ಇವರು ವೃತ್ತ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಹಾಸನದ ಲೋಕಾಯುಕ್ತ ಇಲಾಖೆಯಲ್ಲಿ ಒಂದುವರೆ ವರ್ಷಗಳ ಕಾಲ ಕೆಲಸ ನಿರ್ವಹಿಸಿ ಹೆಸರು ಮಾಡಿದರು.

ಬಳಿಕ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಜಯನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಕಳೆದ ಒಂದುವರೆ ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ರು ಆದರು ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಹೆಚ್ಚಿನ ಚಿಕಿತ್ಸೆಗೆ ಮೂರ್ನಾಲ್ಕು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ನೆಲಮಂಗಲದ ಠಾಣೆಯಲ್ಲಿದ್ದಾಗ ಹುಲಿಯಂತೆ ಆರ್ಭಟಿಸಿ, ಚನ್ನರಾಯಪಟ್ಟಣದಲ್ಲಿ ಪುಡಿ ರೌಡಿಗಳ ಎದೆ ನಡುಗಿಸಿದವರು. ಹಾಸನದಲ್ಲೂ ಲೋಕಾಯುಕ್ತದಲ್ಲಿ ನೀವು ಕರ್ತವ್ಯ ನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯ. ಇವರ ಸಾವು ತುಂಬಾ ನೋವು ತಂದಿದೆ ಭಗವಂತ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

  • ಅರುಣ್ ಕುಮಾರ್ ನರ್ಸಿಂಗ್ ಶಾಲೆಯ ಪ್ರಾಂಶುಪಾಲರು ಚನ್ನರಾಯಪಟ್ಟಣ

ಹಾಸನ ತಾಲೂಕಿನ ಉದ್ದೂರು ಹೊಸಳ್ಳಿಯ ಮಂಜೇಗೌಡರು ಸದ್ಯ ಬೆಂಗಳೂರಿನ ಜಯನಗರದಲ್ಲಿ ವೃತ್ತ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೆಲ ಸಮಯದ ಹಿಂದೆ ಅನಾರೋಗ್ಯ ಪೀಡಿತರಾದ ಇವರು ಇಂದು ಅಕಾಲಿಕ ನಿಧನ ನಿಜಕ್ಕೂ ನೋವು ಉಂಟು ಮಾಡಿದೆ. ಆದರೆ ವಿಧಿಯ ಆಟ ನಿಮ್ಮನ್ನ ಇಷ್ಟು ಬೇಗ ಬಾರದೂರಿಗೆ ಕರೆದೊಯ್ಯುತೆಂದರೆ ನಿಜಕ್ಕೂ ದುಃಖದ ಸಂಗತಿ.

  • ಬಾಳ್ಳು ಗೋಪಾಲ್, ಪತ್ರಕರ್ತರ ಸಂಘದ ಅಧ್ಯಕ್ಷ

ಇನ್ನು ಇವರು,ಎಸಿಬಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ನಿ ಪಿಐ ಶ್ರೀಮತಿ ಶಿಲ್ಪ ಮಂಜುನಾಥ್ ಪತಿ. ಇತ್ತೀಚೆಗಷ್ಟೇ ತಮ್ಮ ಸ್ವಗ್ರಾಮದಲ್ಲಿ ನೂತನ ಮನೆಯೋದನ್ನ ನಿರ್ಮಿಸಿ ಗೃಹಪ್ರವೇಶ ಮಾಡಿದ್ದು , ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಆದರೆ ಮಂಜುನಾಥ್ ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟಿದ್ದು ನೋವಿನ ಸಂಗತಿ. ಮತ್ತು ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಓಂ ಶಾಂತಿ ಸದ್ಗತಿ💐

LEAVE A REPLY

Please enter your comment!
Please enter your name here