ಅರಸೀಕೆರೆ / ಧರ್ಮಸ್ಥಳ : ಶಿವಲಿಂಗೇಗೌಡ ರಾಗಿ ಕಳ್ಳ’ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಆಗಮಿಸಿದ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಣೆ ಪ್ರಮಾಣ ಮಾಡಿದ್ದಾರೆ.
ಶಿವಲಿಂಗೇಗೌಡ ‘ರಾಗಿ ಕಳ್ಳ’ ಎಂದು ಬಿಜೆಪಿ ಮುಖಂಡರು ಅರಸೀಕೆರೆ ಆಣೆ ಧರ್ಮಸ್ಥಳ ಆರೋಪ ಮಾಡಿದ್ದರು. ಈ ಆರೋಪಕ್ಕೆ ಧರ್ಮಸ್ಥಳ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವುದಾಗಿ ಶಿವಲಿಂಗೇ ಗೌಡ ಹೇಳಿಕೆ ನೀಡಿದ್ದರು.
ಅದರಂತೆ ಧರ್ಮಸ್ಥಳಕ್ಕೆ ಇಂದು ಆಗಮಿಸಿದ ಅವರು ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ನಾನ ಮಾಡಿದ ನಂತರ ಡಾ.ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದರು. ಬಳಿಕ ಶ್ರೀ ಮಂಜುನಾಥನ ಮುಂದೆ ಆಣೆ ಪ್ರಮಾಣ ಮಾಡಿದ್ರು. ಈ ವೇಳೆ ಶಾಸಕ ಶಿವಲಿಂಗೇಗೌಡರ ಜೊತೆ 100 ಕ್ಕೂ ಅಧಿಕ ಬೆಂಬಲಿಗರು ಜೊತೆಗಿದ್ದರು.
ಅರಸೀಕೆರೆ:ಬಿಜೆಪಿ ಮುಖಂಡ ಎನ್ ಆರ್ ಸಂತೋಷ್ ಅವರ ನೇತೃತ್ವದಲ್ಲಿ ನಡೆದಂಥ ಶಾಸಕರ ವಿರುದ್ಧ ಪ್ರತಿಭಟನೆಯಲ್ಲಿ ಹಾಸನದಿಂದ ಆಗಮಿಸಿದ ಬಿಜೆಪಿ ಮುಖಂಡ ರವಿಕುಮಾರ್ ಸ್ಥಳೀಯ ಶಾಸಕ ಶಿವಲಿಂಗೇಗೌಡ ವಿರುದ್ಧ ರಾಗಿ ಕಳ್ಳ ಎಂದು ಆರೋಪವನ್ನು ಮಾಡಿದ್ದು ಖಂಡಿಸಿ ಶಾಸಕ ಶಿವಲಿಂಗೇಗೌಡ ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆ ಆರೋಪವನ್ನು ತಳ್ಳಿ ಹಾಕಿದ್ದು ನನ್ನ ಮೇಲೆ ಮಾಡಿರುವ ಆರೋಪವನ್ನು ಸುಳ್ಳು ಆ ಆರೋಪ ನಿಜವಾಗಿದ್ದರೆ ಬಂದು ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಅವಳ ಮೇಲೆ ಪ್ರಮಾಣ ಮಾಡಲಿ ಎಂದು ಕರೆದಿದ್ದು ಈ ದಿನ ಅರಸೀಕೆರೆಯಿಂದ ಶಾಸಕ ಶಿವಲಿಂಗೇಗೌಡ ಅವರ ಅಭಿಮಾನಿ ಬಳಗದ ವತಿಯಿಂದ 100ಕೂ ಹೆಚ್ಚು ಕಾರ್ಯಕರ್ತರು ಇಂದು ಧರ್ಮಸ್ಥಳಕ್ಕೆ ತೆರಳಿದ್ದರು .