ಗ್ರಾನೈಟ್ ಉದ್ಯಮಿ ಕೃಷ್ಣೇಗೌಡರ ಹತ್ಯೆ ಪ್ರಕರಣ – 6 ಆರೋಪಿಗಳ ಬಂಧನ.

0

6 ತಿಂಗಳ ಹಿಂದೆಯೇ ಸಂಚು ಕೃಷ್ಣೇಗೌಡರ ಕೊಲೆಗೆ ಯೋಗಾನಂದ ಹಾಗೂ ಡಾಬಾ ಸುರೇಶ್ ಸೇರಿ ಸ್ಕೆಚ್..!

ಕೃಷ್ಣೇಗೌಡರಿಂದ 4 ಕೋಟಿಗೂ ಹೆಚ್ಚು ಹಣವನ್ನು ಯೋಗಾನಂದ ಪಡೆದಿದ್ದು ಈ ಹಣವನ್ನು ಹಿಂದಿರುಗಿಸುವ ಬದಲು ಕೃಷ್ಣೇಗೌಡರನ್ನೇ ಕೊಲೆ ಮಾಡುವ ಸ್ಕೆಚ್ ಯಾರು ಮಾಡಲಾಗಿತ್ತು. ಎರಡು ವರ್ಷದ ಹಿಂದೆ ಚಾನಲ್ ಪಾರ್ಟನರ್ ಆಗಿದ್ದ ಡಾಬಾ ಸುರೇಶ್ ಹಾಗೂ ಯೋಗಾನಂದ ಇಬ್ಬರು ಸೇರಿ ಹಾಸನ, ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಕೊಲೆಯ ಸ್ಕೆಚ್ ಬಗ್ಗೆ ಚರ್ಚೆ ನಡೆಸಿದ್ದರು.

ಹಾಸನ: ಕಳೆದ ಬುಧವಾರ ನಗರವನ್ನು ಬೆಚ್ಚಿ ಬೀಳಿಸಿದ್ದ ಗ್ರಾನೈಟ್ ಉದ್ಯಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟAತೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ0ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾನೈಟ್ ಉದ್ಯಮಿ ಕೃಷ್ಣೇಗೌಡರನ್ನು 6 ತಿಂಗಳಿನಿ0ದ
ಸಂಚು ನಡೆಸಿ ಹತ್ಯೆಗೈದಿರುವುದು ಸಾಕ್ಷಿ ಸಮೇತ ದೊರೆತಿದ್ದು ಅದಕ್ಕೆ ಪೂರಕವಾಗಿ ಹತ್ಯೆ ಪ್ರಕರಣದಲ್ಲಿ ಸಂಚು ನಡೆಸಿದವರನ್ನು ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ 6 ಜನರು ಬಂಧಿಸಿರುವುದಾಗಿ ತಿಳಿಸಿದರು. ಬಂಧಿತರನ್ನು ಸಂಜಯ್, ಸುರೇಶ್, ಟೈಲರ್ ಕುಮಾರ್, ಸುಧಾರಾಣಿ, ಅಶ್ವಿನಿ, ಚೈತ್ರಾ ಎಂಬುವವರಾಗಿದ್ದಾರೆ0ದು ಎಸ್ಪಿ ತಿಳಿಸಿದರು.


ಬಂಧಿತ ಸಂಜಯ್ ಕೃಷ್ಣೇಗೌಡರ ಹತ್ಯೆಗೆ ಸುಫಾರಿ ಹಂತಕರನ್ನು ಹುಡುಕುವಲ್ಲಿ ನೆರವಾಗಿದ್ದ ಎನ್ನಲಾಗಿದ್ದು ಸುರೇಶ್ ಅಲಿಯಾಸ್ ಡಾಬಾ ಸುರೇಶ್ ಅವರುಗಳು ಕೃಷ್ಣೇಗೌಡರ ಹತ್ಯೆ ಆರೋಪಿಗಳಿಗೆ ದುಡ್ಡು ನೀಡಿರುವುದು ತಿಳಿದು ಬಂದಿದೆ. ಹಾಗೆಯೇ ಸುಧಾರಾಣಿ ಎಂಬುವವರು ಹತ್ಯೆಯ ಪ್ರಮುಖ ಆರೋಪಿ ಯೋಗಾನಂದನ ಪತ್ನಿಯಾಗಿದ್ದು ಸುಧಾರಾಣಿ ಅವರ ಹೆಸರಿನಲ್ಲಿರುವ ಆಸ್ತಿಯನ್ನು ಕೃಷ್ಣೇಗೌಡರಿಗೆ ಹೋಗದಂತೆ ತಡೆಯಲು ಹತ್ಯೆಯ ಪ್ಲಾನ್ ಮಾಡಿರುವ ವಿಚಾರದಲ್ಲಿ ಬಂಧಿಸಲಾಗಿದ್ದು. ಅಶ್ವಿನಿ ಹಾಗೂ ಎಂಬುವವರ ಹೆಸರಿನಲ್ಲಿ ಯೋಗಾನಂದ ಸಾಕಷ್ಟು ಹಣ ಹೂಡಿಕೆ ಮಾಡಿರುವುದು ಹಾಗೂ ಈ ಹತ್ಯೆಯ ಹಿಂದೆ
ಪಾಲ್ಗೊ0ಡಿರುವ ಹಿನ್ನಲೆಯಲ್ಲಿ ಬಂಧನವಾಗಿದ್ದು. ಚೈತ್ರಾ ಎಂಬಾಕೆಯನ್ನು ಸಹ ಇದೇ ವಿಚಾರದಲ್ಲಿ ಬಂಧಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಆಟೋ ವಶಕ್ಕೆ :
ಹತ್ಯೆಗೆ ಬಳಸಿದ್ದ ಆಟೋವನ್ನು ನಗರದ ಹೇಮಾವತಿ ನಗರದಿಂದ ವಶಕ್ಕೆ ಪಡೆಯಲಾಗಿದ್ದು. ಆಟೋದಲ್ಲಿದ್ದ ಹತ್ಯೆಗೆ ಬಳಸಿದ್ದ ಮಾರಕಾಸ್ತçಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅರಸೀಕೆರೆಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದಲ್ಲಿ ಪಾಲ್ಗೊಂಡಿದ್ದ. ಅರಸೀಕೆರೆಯಲ್ಲಿ ನಡೆದಿದ್ದ ಟ್ಯಾಂಕರ್ ಡಾಕಾಯಿತ ಪ್ರಕರಣದಲ್ಲಿ ಯೋಗಾನಂದ ಪಾಲ್ಗೊಂಡಿದ್ದ ಬಗ್ಗೆ ಪ್ರಕರಣ ದಾಖಲಾಗಿ ಬಳಿಕ ಪ್ರಕರಣ ವಜಾವಾಗಿತ್ತು. ಕೃಷ್ಣೇಗೌಡರಿಗೂ ಕೊಲೆ ಸ್ಕೆಚ್ ಬಗ್ಗೆ ಗೊತ್ತಿತ್ತು. ಮಾತ್ರವಲ್ಲ. ಆಡಿಯೋ ರೆಕಾರ್ಡ್ ಕೃಷ್ಣೇಗೌಡರ ಬಳಿಯಿತ್ತು..! ಕೃಷ್ಣೇಗೌಡರ ಕೊಲೆಗೆ ಸ್ಕೆಚ್ ರೂಪಿಸಲಾಗಿದ್ದ ಬಗ್ಗೆ ಧ್ವನಿ ಮುದ್ರಿಕೆ (ಆಡಿಯೋ ರೆಕಾರ್ಡ್) ಕೃಷ್ಣೇಗೌಡರಿಗೆ ದೊರೆತಿತ್ತು. ಆದರೂ ಕೃಷ್ಣೇಗೌಡರು ಅದನ್ನು ಪೊಲೀಸರ ಗಮನಕ್ಕೆ ತಂದಿರಲಿಲ್ಲ. ಮತ್ತು ಈ ಬಗ್ಗೆ ದೂರು ದಾಖಲಿಸಲಿಲ್ಲ. ಅಥವಾ ಎಚ್ಚರ ವಹಿಸಲಿಲ್ಲ. ಈ ಎಲ್ಲದರ ಪರಿಣಾಮ
ಅದು ಅಜಾನಕ್ ಆಗಿ ಸಿಕ್ಕ ಕೃಷ್ಣೇಗೌಡರು ಹಂತಕರ ಸ್ಕೆಚ್‌ಗೆ ಬಲಿಯಾದರು.

ಕೊಲೆಗೆ ಕಾರಣ
ಕೃಷ್ಣೇಗೌಡರ ಹತ್ಯೆಗೆ ಪ್ರಮುಖವಾಗಿ 2019ರಲ್ಲಿ ಹಾಸನದಲ್ಲಿ ಪಬ್ಲಿಕ್ ಸ್ಟಾರ್ ಎಂಬ ನ್ಯೂಸ್ ಚಾನಲ್ ಮಾಡಲು ಹಾಸನದ ಡಾಬಾ ಸುರೇಶ್ ಹಾಗೂ ಯೋಗಾನಂದ ಅವರುಗಳು ಸೇರಿ ಕೃಷ್ಣೇಗೌಡರಿಂದ ಹಣ ಹಾಕಿಸುತ್ತಾರೆ. ಇದಲ್ಲದೆ ಸಿನಿಮಾ ಹೆಸರಿನಲ್ಲಿಯೂ ಸಹ ಯೋಗಾನಂದ ಕೃಷ್ಣೇಗೌಡರಿಂದ ಬಂಡವಾಳ ಹಾಕಿಸಿದ್ದು ಮಾಟ-ಮಂತ್ರ ಎಂಬಿತ್ಯಾದಿ ಹೆಸರಿನಲ್ಲಿಯೂ ಹಣ ಪಡೆದಿದ್ದಾನೆ. ಈ ಬಳಿಕ ಯೋಗಾನಂದನಿ0ದ ಕೃಷ್ಣೇಗೌಡರಿಗೆ ಮೋಸವಾಗುತ್ತಿದೆ ಎಂಬುದು ಬೆಳಕಿಗೆ ಬಂದ ಬಳಿಕ ಕೃಷ್ಣೇಗೌಡರು ತಾವು ಹಾಕಿದ್ದ ಹಣ ಹಿಂಪಡೆಯಲು ಯೋಗಾನಂದನನ್ನು ಅವರ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕರೆ ತಂದು ಹಲ್ಲೆ ನಡೆಸುತ್ತಾರೆ. ಈ ವೇಳೆ ಯೋಗಾನಂದ ಪತ್ನಿ ಹೆಸರಿನಲ್ಲಿದ್ದ ಆಸ್ತಿಯನ್ನು ಕೃಷ್ಣೇಗೌಡರ ಹೆಸರಿಗೆ ಅಗ್ರಿಮೆಂಟ್ ಮಾಡಿಸಲಾಗಿತ್ತು. ಬಳಿಕ ಕೃಷ್ಣೇಗೌಡರ ಮೇಲೆ ಕಿಡ್ನಾಪ್‌ಹಲ್ಲೆ ಪ್ರಕರಣ ದಾಖಲಾಗಿದ್ದು. ಯೋಗಾನಂದನ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು. ಇದೆಲ್ಲದರ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಯೋಗಾನಂದ ಕೃಷ್ಣೇಗೌಡರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಅಲವತ್ತುಕೊಂಡಿದ್ದು ಮತ್ತು ತನಗೆ ಹಾಗೂ ತನ್ನ ಕುಟುಂಬಕ್ಕೆ ತೊಂದರೆಯಾದರೆ ಕೃಷ್ಣೇಗೌಡ ಹಾಗೂ ಪೊಲೀಸ್ ಇಲಾಖೆ ಕಾರಣವೆಂದು ಮಾತನಾಡಿದ್ದ.

LEAVE A REPLY

Please enter your comment!
Please enter your name here