ಹಾಸನ KSRTC ಬಸ್ ನಿಲ್ದಾಣದಲ್ಲಿ ಖಾಲಿ‌ ಇರುವ ಅಂಗಡಿ ಮುಂಗಟ್ಟು ಹಾಗೂ ಇತರೆ ವಾಣಿಜ್ಯ ಸೇವೆ ಟೆಂಡರ್ ಪ್ರಕಟಣೆ

0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗದ ವ್ಯಾಪ್ತಿಗೆ ಸೇರಿದ ಈ ಕೆಳಕಂಡ ಬಸ್ ನಿಲ್ದಾಣಗಳಲ್ಲಿ ಖಾಲಿಇರುವ/ಖಾಲಿಯಾಗಲಿರುವ ವಾಣಿಜ್ಯ ಮಳಿಗೆಗಳಿಗೆ ತೆರೆದ ಜಾಗಗಳಿಗೆ, ಉಪಹಾರ ಗೃಹಕ್ಕೆ ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ನಿಗಮದ ನಿಯಮಾವಳಿಗಳ ಪರವಾನಗಿದಾರರನ್ನು ಇ-ಟೆಂಡರ್ ಪ್ರಕ್ರಿಯೆಯ ಮೂಲಕ ಆಯ್ಕೆಮಾಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಇಚ್ಚೆಯುಳ್ಳವರು ಸಂಬಂಧಿಸಿದ ಮಳಿಗೆಗಳ ಮುಂದೆ ಸೂಚಿಸಿರುವ ಇ.ಎಂ.ಡಿ. ಮೊತ್ತವನ್ನು ಇ ಪ್ರಕ್ಯೂರಮೆಂಟ್ ಮುಖೇನ/ ಡಿಡಿ ಮೂಲಕ “ವಿಭಾಗೀಯ ನಿಯಂತ್ರಣಾಧಿಕಾರಿ” ಕ ರಾ ರಿ ಸಾ ನಿಗಮ ಹಾಸನ ವಿಭಾಗ ಹೆಸರಿನಲ್ಲಿ ಪಾವತಿಸುವುದು. ಇ-ಪ್ರೊಕ್ಯುರ್‌ಮೆಂಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇ-ಟೆಂಡರ್‌ನಲ್ಲಿ ಭಾಗವಹಿಸುವ ಅರ್ಜಿದಾರರು ಕೆಳಕಂಡಂತಿದೆ.

ಮೊತ್ತ ಮತ್ತು ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಕೋರಲಾಗಿದೆ. ವಿವರಗಳು

ದಿನಾಂಕ:16-08-2021 ರಂದು 12.00 ಗಂಟೆಯ ನಂತರ ತೆರೆಯಲಾಗವುದು. ವಿವರವನ್ನು www.eproc.karnataka.gov.in (Dept:KSRTC) ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳವುದು. ಹೆಚ್ಚಿನ ವಿವರಗಳಿಗಾಗಿ ವಿಭಾಗೀಯ ಕಛೇರಿ ಕ.ರಾ.ರ.ಸಾ.ನಿಗಮ ಹಾಸನ, ಇಲ್ಲಿ ಕಛೇರಿ ಸಮಯದಲ್ಲಿ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯಬಹುದಾಗಿರುತ್ತದೆ. ನಿಬಂಧನೆಗಳ ಪಟ್ಟಿಯನ್ನು ಪೂರ್ತಿ ಓದಿಕೊಂಡು ಅರ್ಜಿ ಸಲ್ಲಿಸುವುದು, ದಾಖಲಾತಿಗಳನ್ನು ನಿಗಮಕ್ಕೆ ಒಪ್ಪಿಸುವಾಗ ನಿಬಂಧನೆಗಳ ಪಟ್ಟಿಯನ್ನು ಒಳಗೊಂಡಂತೆ ಎಲ್ಲಾ ಪ್ರತಿಗಳಿಗೂ ಬಿಡ್‌ದಾರರು ಸಹಿ ಮಾಡಿ ಒಪ್ಪಿಸಬೇಕಿರುತ್ತದೆ. ಯಾವುದೇ ಕಾರಣ ನೀಡದೆ ಇ ಟೆಂಡರ್ ನಡೆಸುವ, ಮುಂದೂಡುವ, ತಿರಸ್ಕರಿಸುವ, ಮಾರ್ಪಡು ಮಾಡುವ ಹಕ್ಕನ್ನು ನಿಗಮವು ಕಾಯ್ದಿರಿಸಿಕೊಂಡಿರುತ್ತದೆ. (ನಿಬಂಧನೆಗಳ ಪಟ್ಟಿ ಲಗತ್ತಿಸಿದೆ).

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹಾಸನ ವಿಭಾಗಕ್ಕೆ ಸೇರಿದ ಈ ಕೆಳಗೆ ನಮೂದಿಸಿದ ನಿಲ್ದಾಣದ ವಾಣಿಜ್ಯ

ಮಳಿಗೆಗಳನ್ನು ಪರವಾನಗಿ ನೀಡಲು ಉದ್ದೇಶಿಸಿ ಶಾಶ್ವತ ಮಳಗೆಗೆ 5 ವರ್ಷ. ಮತ್ತು ತೆರದ ಜಾಗಕ್ಕೆ 3 ವರ್ಷ. ಅವರಿಗೆ ಪರವಾನಗಿಯನ್ನು ನೀಡಲು ಆಸಕ್ತರನ್ನು ಸಂಧಾನಕ್ಕೆ ಕರೆಯಲಾಗಿದೆ. ಸಂಧಾನದಲ್ಲಿ ಯಶಸ್ವಿಯಾದವರು ಪಾವತಿಸುವ ಶುಲ್ಕವನ್ನು ಪ್ರತಿ ವರ್ಷ ಶೇಕಡ 10 ರಷ್ಟು ಹೆಚ್ಚಿನ ಮಾಹೆಯಾನ ಪರವಾನಗಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಅವಧಿ ಮುಗಿದ ನಂತರ ಹೊಸದಾಗಿ ಇ-ಟೆಂಡರ್‌ ಮೂಲಕ ಪರವಾನಗಿದಾರರನ್ನು ಆಯ್ಕೆ ಮಾಡಲಾಗುವುದು. ಸಂಧಾನದಲ್ಲಿ ಭಾಗವಹಿಸುವವರು, ಸಂಸ್ಥೆಯು ನಿಗದಿಪಡಿಸಿದ ಟೆಂಡರ್‌ ಅರ್ಜಿ ಶುಲ್ಕವನ್ನು ಪಾವತಿಸಿ ಸಂಧಾನದ ಅರ್ಜಿಯನ್ನು ದಿನಾಂಕ:30-07-2021 ರ 500 ಘಂಟೆಯೊಳಗೆ ಪಡೆದು, ಸೂಕ್ತ ಬಿ.ಎಂ.ಟಿ. ಮೊತ್ತದ ಡಿ.ಟಿ ಹಾಗೂ ಆಧಾರ್ ಕಾರ್ಡ್, ಪಾನ್‌ಕಾರ್ಡ್ ಗುರುತಿನ ಚೀಟಿಯೊಂದಿಗೆ ಸಂಧಾನದಲ್ಲಿ ಭಾಗವಹಿಸುವುದು. ಇ.ಎಂ.ಡಿ ಮೊತ್ತಕ್ಕೆ ಯಾವುದೇ ರೀತಿಯ ಬಡ್ಡಿ ನೀಡಲಾಗುವುದಿಲ್ಲ.

ಸದರಿ ಸಂದಾನವನ್ನು ದಿನಾಂಕ:30-07-2021 ರಂದು ಸಮಯ 15.00 ಕ್ಕೆ ವಿಭಾಗೀಯ ಕಛೇಲಿ ಬಿ.ಎಂ.ರಸ್ತೆ ಹಾಸನದಲ್ಲ ಕರೆಯಲಾಗಿದೆ. ಪರವಾನಗಿಯನ್ನು ನೀಡುವ ಬಗ್ಗೆ ಸಂಸ್ಥೆಯ ನಿಯಮ ಹಾಗೂ ನಿಬಂಧನೆಗಳ ಬಗ್ಗೆ ಈ ಕೆಳಗೆ ಸಹಿ ಮಾಡಿರುವವರ ಕಛೇಲಿಯ ಕೆಲಸದ ವೇಳೆಯಲ್ಲಿ ಭೇಟಿ ನೀಡಿ ಹೆಚ್ಚಿನ ಮಾಹಿತಿ/ವಿವರವನ್ನು ಪಡೆಯಬಹುದಾಗಿದೆ. (ಗೋಸೈನ್ ಫಲಕಗಳಲ್ಲಿ 43 ರ ಅಳತೆಯಲ್ಲಿ 42 ಜಾಹಿರಾತನ್ನು ಮತ್ತು 4+1 ರಲ್ಲಿ ಜಾಹೀರಾತು ಅಳವಡಿಸಬೇಕಾಗಿರುತ್ತದೆ)

ಯಾವುದೇ ಕಾರಣಗಳನ್ನು ನೀಡದೆ ಸಂಧಾನವನ್ನು ನಡೆಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಸಂಸ್ಥೆಯು ಕಾಯ್ದಿರಿಸಿಕೊಂಡಿದೆ.

ಸಂಧಾನ ಪ್ರಕಟಣೆಯಲ್ಲಿ ಆಯ್ಕೆಯಾದವರು ಪರವಾನಗಿ ಶುಲ್ಕಕ್ಕೆ ಜಿ.ಎಸ್.ಟಿ.ತೆರಿಗೆಯನ್ನು ಪಾವತಿಸುವುದು ಮತ್ತು ಕರ್ನಾಟಕ ಸ್ಟಾಂಪ್ ಆಕ್ಟ್ 1957 ಸೆಕ್ಷನ್ 320 (1) (111))ರಲ್ಲಿ ಪರಿಷ್ಕೃತ ಸ್ಟಾಂಪ್ ಆಕ್ಟ್ ನಂ 8/2003.ರನ್ವಯ ಸ್ಟಾಂಪ್ ಶುಲ್ಕವನ್ನು ಛಲಿಸಿ ಕರಾರು ಮಾಡಿಕೊಳ್ಳಬೇಕಾಗಿರುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗದ ವ್ಯಾಪ್ತಿಗೆ ಸೇರಿದ ಈ ಕೆಳಕಂಡ ಬಸ್ ನಿಲ್ದಾಣಗಳಲ್ಲಿ ಖಾಲಿಯಿರುವ/ಖಾಲಿಯಾಗಲಿರುವ ವಾಣಿಜ್ಯ ಮಳಿಗೆಗಳಿಗೆ, ತೆರದ ಜಾಗಗಳಿಗೆ, ಉಪಹಾರ ಗೃಹಕ್ಕೆ ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ನಿಗಮದ ನಿಯಮವಳಿಗಳನ್ವಯ ಪರವಾನಗಿದಾರರನ್ನು ಮ್ಯಾನುಯಲ್ ಟೆಂಡರ್ ಪ್ರಕ್ರಿಯೆಯ ಮೂಲಕ ಆಯ್ಕೆಮಾಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಇಚ್ಚೆಯುಳ್ಳವರು, ಸಂಬಂಧಿಸಿದ ಮಳಿಗೆಗಳ ಮುಂದೆ ಸೂಚಿಸಿರುವ ಇ.ಎಂ.ಡಿ. ಮೊತ್ತವನ್ನು ಡಿಡಿ ಮೂಲಕ “ವಿಭಾಗೀಯ ನಿಯಂತ್ರಣಾಧಿಕಾರಿ” ಕ ರಾ ರ ಸಾ ನಿಗಮ ಹಾಸನ ವಿಭಾಗ ಹೆಸರಿನಲ್ಲಿ ಪಾವತಿಸುವುದು. ಮ್ಯಾನುಯಲ್ ಟೆಂಡರ್‌ನಲ್ಲಿ ನಮೂದಿಸುವ ಹೆಚ್ಚು ಮಾಸಿಕ ಪರವಾನಗಿ ಶುಲ್ಕದ ಮೇಲೆ ಪ್ರತಿ ವರ್ಷ ಶೇ.10 ರ ಹೆಚ್ಚಳದಂತೆ ಶಾಶ್ವತ ಮಳಿಗೆಗೆ 5 ವರ್ಷದ ಅವಧಿಗೆ ಮತ್ತು ತೆರದ ಜಾಗಕ್ಕೆ 3 ವರ್ಷಗಳ ಅವಧಿಗೆ ಪರವಾನಗಿ ಮಂಜೂರು ಮಾಡಲು ಉದ್ದೇಶಿಸಲಾಗಿದೆ. ಅವಧಿಯು ಪೂರ್ಣಗೊಂಡ ನಂತರ ಮನಃ ಮ್ಯಾನುಯಲ್ ಟೆಂಡರ್ ಪ್ರಕಟಣೆ ಮಾಡಲಾಗುವುದು.

– KSRTC HASSAN

LEAVE A REPLY

Please enter your comment!
Please enter your name here