Hassan

ಕೆಎಸ್‌ಆರ್‌ಟಿಸಿಗೆ ಎಂಟ್ರಿ ಕೊಟ್ಟ ಮೊದಲ ಎಲೆಕ್ಟ್ರಿಕ್ ಬಸ್ , ಶೀಘ್ರದಲ್ಲೇ ಹಾಸನ , ಮೈಸೂರು , ಚಿಕ್ಕಮಗಳೂರು ಮೈಸೂರಿಗೂ ಎಂಟ್ರಿ

By Hassan News

December 30, 2022

ಬೆಂಗಳೂರು / ಹಾಸನ : ಡಿಸೇಲ್ ವಾಹನಗಳ ಪರ್ವ ಬಹುತೇಕ ಕಡಿಮೆಯಾಯಿತು ಅನಿಸುತ್ತಿದೆ . ಇನ್ನೇನಿದ್ರೂ ಎಲೆಕ್ಟ್ರಿಕ್ ವಾಹನಗಳದ್ದೇ ಹವಾ ಅನ್ನೋವಾಗಲೇ . ಈಗಾಗಲೇ ದೇಶದ ಬಹುತೇಕ ಸಾರಿಗೆ ನಿಗಮಗಳು ಎಲೆಕ್ಟ್ರಿಕ್ ಬಸ್‌ಗಳ ಮೊರೆ ಹೋಗುತ್ತಿವೆ ., ನಮ್ಮ ಕರುನಾಡಲ್ಲಿ ಈಗಾಗಲೇ ಬಿಎಂಟಿಸಿಗೆ ಎಂಟ್ರಿ ಕೊಟ್ಟಿರೋ ಎಲೆಕ್ಟ್ರಿಕ್ ಬಸ್ ಗಳು ನಾಳೆಯಿಂದ ಕೆಎಸ್‌ಆರ್ಟಿಸಿಗೂ ಲಗ್ಗೆ ಇಡಲಿವೆ. ಈಗಾಗಲೇ ಡಿಸೇಲ್ ಬಸ್ ಗಳಿಗೆ ಡಿಸೇಲ್ ಹಾಕಿ ಕಂಪ್ಲೀಟ್ ಹೆಚ್ಚು ಲಾಭಗಳಿಸದ ರಾಜ್ಯ ಸಾರಿಗೆ ನಿಗಮಗಳು

ಎಲೆಕ್ಟ್ರಿಕ್ ಬಸ್ಸಿನತ್ತ ಮುಖ ಮಾಡಿದ್ದು . ಈಗಾಗಲೇ ಬೆಂಗಳೂರಿನಲ್ಲಷ್ಟೆ ಹವಾ ಸೃಷ್ಟಿಸಿರೋ ಎಲೆಕ್ಟ್ರಿಕ್ ಬಸ್ ಗಳು ಇನ್ಮುಂದೆ ಬೆಂಗಳೂರು ಸೇರಿದಂತೆ ನಮ್ಮ ಹಾಸನ, ಮೈಸೂರು , ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲೂ ಓಡಿಸೋಕೆ KSRTC ಸಜ್ಜಾಗಿದೆ. ನಾಳೆ (31.ಶನಿವಾರ 2022) ಮೊದಲ ಎಲೆಕ್ಟ್ರಿಕ್ ಬಸ್ ಬರಲಿದ್ದು, ಪರೀಕ್ಷಾರ್ಥ ಸಂಚಾರ ಮಾಡಲಿದೆ. 5 ದಿನಗಳ ಕಾಲ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿ ಯಶಸ್ವಿಯಾದ ಬಳಿಕ ಬಾಕಿ ಬಸ್ ಗಳನ್ನು ರಸ್ತೆಗಿಳಿಸಿಲು ನಿಗಮ ನಿರ್ಧರಿಸಿದೆ., ಅದರಲ್ಲಿ ನಮ್ಮ ಹಾಸನಕ್ಕೆ ಯಾವ ರೂಟ್ ಬಸ್ ಬರಲಿದೆ

ಸ್ಪಷ್ಟತೆ ಸಿಗಲಿದೆ ., ನಿಗಮಕ್ಕೆ ಬರುವ ಬಸ್ಗಳನ್ನು ಬೆಂಗಳೂರು-ಮೈಸೂರು, ತುಮಕೂರು, ಕೋಲಾರ, ಹಾಸನ ಸೇರಿ ಬೆಂಗಳೂರಿನಿಂದ 300 ಕಿ.ಮೀ ವ್ಯಾಪ್ತಿಯಲ್ಲಿನ ಎಲೆಕ್ಟ್ರಿಕ್‌ ಬಸ್‌ ಸೇವೆ ಕಲ್ಪಿಸಲು ಅವಕಾಶವಿದ್ದು . ಎಲೆಕ್ಟ್ರಿಕ್‌ ಬಸ್‌ಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಕೂಡ ಕಡಿಮೆ ಎನ್ನಲಾಗಿದೆ . ಈ ವಿದ್ಯುತ್ ಚಾಲಿತ ಬಸ್‌ಗಳಿಂದ ಶಬ್ದವೂ ಇಲ್ಲ, ಹೊಗೆಯೂ ಇರುವುದಿಲ್ಲ. ಹಾಗಾಗಿ

ಇದು ಶಬ್ದಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿ . 6 ಗಂಟೆ ಜಾರ್ಜ್ ಮಾಡಿದರೆ 250 ಕಿ. ಮೀ  ಸಂಚಾರ ಮಾಡಲಿದೆಯಂತೆ ., KSRTC ಎಲೆಕ್ಟ್ರಿಕ್ ಬಸ್ನತ್ತ ಮುಖ ಮಾಡಿದ್ದು, ಪ್ರಯಾಣಿಕರು ಕಡಿಮೆ ವೆಚ್ಚದಲ್ಲಿ ಪ್ರಯಾಣ ಬೆಳೆಸ್ಬಹುದು. ( ನಾಳಿನ ಪರಿಕ್ಷಾರ್ಥ ಸಂಚಾರದ ಬಳಿಕ ಸಾರ್ವಜನಿಕ ಸೇವೆಗೆ ಲಭ್ಯ KSRTC ELECTRIC ಬಸ್ )