Belur

ಬೆಂಗಳೂರು ಹಾಸನ ಚಿಕ್ಕಮಗಳೂರು 6 ಎಲೆಕ್ಟ್ರಿಕ್ ಬಸ್‌ ಸೇವೆ ವಿವರ ವೇಳಾಪಟ್ಟಿ ಇಂತಿದೆ

By Hassan News

May 23, 2023

KSRTC ಕರ್ನಾಟಕವು ಹೊಸದಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 6 ಇವಿ ಪವರ್ ಪ್ಲಸ್ ಎಂಬ ಎಲೆಕ್ಟ್ರಿಕ್ ಬಸ್‌ ಸೇವೆಯನ್ನು ಮೇ 19 ರಿಂದ ಆರಂಭಿಸಿತ್ತು . , ಬೆಂಗಳೂರು- ಚಿಕ್ಕಮಗಳೂರು ಸಂಪರ್ಕದ ನಡುವೆ ಓಡಾಡುವ ಹಾಸನ-ಬೇಲೂರು ಪ್ರಯಾಣಿಕರಿಗೆ ಐರಾವತ ದಂತಿರುವ ಎಲೆಕ್ಟ್ರಿಕ್ ಬಸ್ , ಪ್ರಯಾಣದ ಉಪಯೋಗ ಪಡೆಯಬಹುದು ., ಎಸಿ, ಪುಶ್ ಬ್ಯಾಕ್ ಸೀಟರ್‌ ,  ಆರಾಮದಾಯಕ ಪ್ರಯಾಣದ ಸೌಲಭ್ಯ ಇದರಲ್ಲಿದೆ . ಎಲೆಕ್ಟ್ರಿಕ್ ಬಸ್‌ನಲ್ಲಿ

ಶಬ್ದವಿಲ್ಲ ,‌ಇದು ಪ್ರಯಾಣಿಕರಿಗೆ ನೆಮ್ಮದಿಯ ನಿದ್ದೆ ಮಾಡಲು ಅವಕಾಶ, ಸಾರಿಗೆ ಇಲಾಖೆಯ ವೇಗ ನಿಯಂತ್ರಣದ ಕಾನೂನಿನಂತೆ ಒಂದು ಗಂಟೆಗೆ 90KM ವೇಗದಲ್ಲಿ ಸಾಗಲಿದ್ದು ಸುರಕ್ಷಿತ , ನೆಮ್ಮದಿಯ ಪ್ರಯಾಣಕ್ಕೆ ಸಹಕಾರಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ . , ಬೆಂಗಳೂರಿನಿಂದ – ಚಿಕ್ಕಮಗಳೂರು ಟಿಕೆಟ್‌ ದರ ಕ 540 ರೂ , ವೀಕೆಂಡ್ ನಲ್ಲಿ 600 ರೂ .,  ಈ ಮಾರ್ಗದಲ್ಲಿ ಸಂಚಾರ ಮಾಡುವ ಬಸ್ ಕಡಿಮೆ ನಿಲುಗಡೆ ಇರುವ ಕಾರಣ ತಡೆರಹಿತ ಪ್ರಯಾಣಕ್ಕೆ ಸಹಕಾರಿ . ಒಂದು ಬಾರಿ ಈ ವಾಹನ ಚಾರ್ಜ್ ಆದರೆ 300KM ಕ್ರಮಿಸಬಲ್ಲದು ., ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆಗಳಿಗೆ ಎಲೆಕ್ಟ್ರಿಕ್ ಬಸ್‌ ಸೇವೆ ಇದೆ , , ಶಿವಮೊಗ್ಗ ಜಿಲ್ಲೆಗೂ 10 ಬಸ್‌ಗಳ ಸೇವೆ ಇನ್ನೊಂದು ವಾರದಲ್ಲಿ ಆರಂಭಿಸಲಿದೆ. ಈ ಮಾರ್ಗದಲ್ಲಿ ಬರುವ

ಅರಸೀಕೆರೆ, ಕಡೂರು, ಬೇಲೂರು, ಹಾಸನ ಜಿಲ್ಲೆಗೂ ಇವಿ ವಾಹನ ಸೇವೆ ಪ್ರಯಾಣಿಕರಿಗೆ ಅನುಕೂಲ ., ಬೆಂಗಳೂರಿನಿಂದ ಹಾಸನಕ್ಕೆ ಬಂದ ಎಲೆಕ್ಟ್ರಿಕ್‌ ಸಾರಿಗೆ ಬಸ್: ನಿತ್ಯ 6 ಬಸ್ ಸಂಚಾರ.

ಪರಿಸರ ಸ್ನೇಹಿ ಸಾರಿಗೆ ಸೇವೆಗೆ ಆದ್ಯತೆ ನೀಡಿರುವಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊಸದಾಗಿಬೆಂಗಳೂರಿನಿಂದ ಚಿಕ್ಕಮಗಳೂರಿಗೆ 6 ಇವಿ ಪವರ್ ಪ್ಲಸ್ ಎಂಬಎಲೆಕ್ನಿಕ್ ಬಸ್ ಸೇವೆಯನ್ನು ಮೇ 19 ರಿಂದ ಆರಂಭಿಸಿದೆ.ಈ ಮೂಲಕ ಬೆಂಗಳೂರು- ಚಿಕ್ಕಮಗಳೂರು ಸಂಪರ್ಕದ ನಡುವೆಬರುವ ಹಾಸನ-ಬೇಲೂರು ಪ್ರಯಾಣಿಕರಿಗೂ ಸುಖಾಸೀನಎಲೆಕ್ನಿಕ್ ಬಸ್ ಪ್ರಯಾಣದ ಅನುಕೂಲ ಸಿಕ್ಕಂತಾಗಿದೆ.

ಬೆಂಗಳೂರಿನಿಂದ ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಸಂಚಾರಆರಂಭವಾಗಲಿದ್ದು, ಬೆಳಿಗ್ಗೆ 6 ಗಂಟೆ, 8 ಗಂಟೆ ಮಧ್ಯಾಹ್ನ2.30ಕ್ಕೆ, ಸಂಜೆ 6 ಗಂಟೆ ಮತ್ತು ಮಧ್ಯರಾತ್ರಿ 12 ಗಂಟೆ ಈಬಸ್‌ಗಳು ಹೊರಡುತ್ತವೆ.