ಹಾಸನ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಬರ!———ಹಾಸನ ಬಸ್ ನಿಲ್ದಾಣ ಅದರ ಸ್ಥಳಾವಕಾಶ ಹಾಗೂ ವಿನ್ಯಾಸದಿಂದ ರಾಜ್ಯದ ಬಸ್ ನಿಲ್ದಾಣಗಳಲ್ಲೆ ಅಗ್ರಪಂಕ್ತಿಯಲ್ಲಿದೆ. ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ಅವರ ಇಚ್ಛಾಶಕ್ತಿ ಈ ಹಿರಿಮೆಗೆ ಕಾರಣ. ವಿಮಾನ ನಿಲ್ದಾಣ ಹೋಲಿಕೆಯ ಈ ಬಸ್ ನಿಲ್ದಾಣದಲ್ಲಿ ಈಗ ಕುಡಿಯುವ ನೀರಿಗೆ ತತ್ವಾರ ಇದೆ.
ಎರಡು ದಿನಗಳ ಹಿಂದೆ ಹಾಸನದಿಂದ ಬೇರೆ ಜಿಲ್ಲೆಗೆ ಪ್ರಯಾಣಿಸುವ ಸಂದರ್ಭ ನೀರಡಿಕೆಯಾಯ್ತು. ಬೇಕರಿ, ಟೀ ಶಾಪ್, ಹೋಟೆಲ್ ಹೀಗೆ ನಿಲ್ದಾಣದ ಎಲ್ಲ ಮಳಿಗೆಗ ಅಲೆದರೂ ಬಾಟಲ್ ನೀರು ಸಿಗಲೇ ಇಲ್ಲ. ಕಡೆಗೆ ಕ್ಯಾಂಟೀನ್ ಒಂದರಲ್ಲಿ ಮನವಿ ಮಾಡಿಕೊಂಡು ಅಲ್ಲಿ ಅಳವಡಿಸಿದ್ದ ಫಿಲ್ಟರ್ ವಾಟರ್ ನಲ್ಲಿ ನೀರು ಕುಡಿಯ ಬೇಕಾಯ್ತು. ಯಾಕೆ ಹೀಗೆ ಎಂಬ ಪ್ರಶ್ನೆಗೆ ಮಳಿಗೆ ವ್ಯಾಪಾರಸ್ಥರಿಂದ ಬಂದ ಉತ್ತರ ಹೀಗಿತ್ತು. ಎಲ್ಲ ಮಳಿಗೆಗಳನ್ನು SBG ಕಂಪನಿಯವರಿಗೆ ಕೊಡಲಾಗಿದೆ. ಅವರು SBG ಕಂಪನಿಯ ನೀರಿನ ಬಾಟಲ್ ಗಳನ್ನು ಮಾತ್ರ ಮಾರಬೇಕು, ಬೇರೆ ಬ್ರ್ಯಾಂಡ್ ನ ವಾಟರ್ ಬಾಟಲ್ ಮಾರಲು ಅವಕಾಶ ಮಾಡುತ್ತಿಲ್ಲ. SBG ವಾಟರ್ ಬಾಟಲ್ ಗಳನ್ನು ಮಾತ್ರ ಕೊಳ್ಳಬೇಕು ಮತ್ತು (ಇತರೆ ಬ್ರ್ಯಾಂಡ್ ಗಳ ವಾಟರ್ ಬಾಟಲ್ ಗಿಂತ) ದುಬಾರಿ ಬೆಲೆಗೆ ಮಾರಬೇಕು. ಇದು ಸಮಸ್ಯೆ ಎಂದು ಅಳಲು ತೋಡಿಕೊಂಡರು.
ಇದು ತಳ್ಳಿ ಹಾಕುವ, ನಿರ್ಲಕ್ಷಿಸುವ ಸಂಗತಿ ಅಲ್ಲ. ಕೆಎಸ್ ಆರ್ ಟಿಸಿ ಡಿಸಿ ತಕ್ಷಣ ಗಮನ ಹರಿಸಬೇಕು. B Sriramulu ಸಚಿವರು ಸಂಬಂಧಿಸಿದ ಅಧಿಕಾರಿಗೆ ತಕ್ಷಣ ಸೂಚನೆ ಕೊಡಬೇಕು. ಜಿಲ್ಲಾಧಿಕಾರಿ @archana @gopalaiah @anbukumar #ksrtc Hassan MP ಪ್ರಜ್ವಲ್ ರೇವಣ್ಣ Basavaraj Bommai Preetham J Gowda Sathish GT