ಹಾಸನ : ವ್ಯಕ್ತಿಯೊಬ್ಬರ ಭೂ ದಾಖಲೆ, ಜಮೀನು ದುರಸ್ಥಿಗೆ 30 ಸಾವಿರ ಲಂಚಕ್ಕೆ ಭೇಡಿಕೆ ಇಟ್ಟಿದ್ದ ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ಕಚೇರಿಯ ಎ.ಡಿ. ಎಲ್.ಆರ್ ಗೋಪಾಲ್ ಎಂಬುವವರನ್ನು ಲೋಕಾಯುಕ್ತ ಪೊಲೀಸರು
ಬಂಧಿಸಿದ್ದಾರೆ. ,ಜಮೀನು ದುರಸ್ಥಿಗಾಗಿ ಅಂತೋಣಿ ಸ್ವಾಮಿ ಎಂಬುವವರಿಂದ 30 ಸಾವಿರ ಲಂಚಕ್ಕೆ ಗೋಪಾಲ್ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಅಂತೋಣಿ ಸ್ವಾಮಿ ಹಾಸನ ಲೋಕಾಯುಕ್ತ ಪೊಲೀಸರಿಗೆ ಈ ಕುರಿತು
ದೂರು ನೀಡಿದ್ದರು. ಇಂದು ಮಾ.24 ಶುಕ್ರವಾರ ಎ.ಡಿ.ಎಲ್.ಆರ್ ಗೋಪಾಲ್ ಅವರು ಅಂತೋಣಿ ಸ್ವಾಮಿ ಅವರಿಂದ ಹಣ ಪಡೆಯು ವಾಗ ದಿಢೀರ್ ದಾಳಿ ನಡೆಸಿದ ಹಾಸನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು, ಶಿಲ್ಪ ಅವರ ತಂಡ ಲಂಚದ ಹಣದೊಂದಿಗೆ ಗೋಪಾಲ್ ಅವರನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸಿದೆ.