ಡಿಪ್ಲೊಮಾ ಕೋರ್ಸ್: ಉಳಿದ ಸೀಟುಗಳಿಗೆ ಹಾಸನ ನಗರ LVP ಕಾಲೇಜಿನಿಂದ SSLC ಮಕ್ಕಳಿಗೆ ಅರ್ಜಿ ಆಹ್ವಾನ

0

ಹಾಸನ,ಸೆ.26(ಹಾಸನ್_ನ್ಯೂಸ್): ಹಾಸನ ನಗರದ ಎಲ್. ವಿ. (ಸರ್ಕಾರಿ) ಪಾಲಿಟೆಕ್ನಿಕ್, ಇಲ್ಲಿ 2020-21 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮ ಕೋರ್ಸ್‍ಗಳಲ್ಲಿ ಭರ್ತಿ ಆಗದೇ ಉಳಿಕೆ ಸೀಟುಗಳಿಗೆ  ಆಫ್‍ಲೈನ್ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ 35 ರಷ್ಟು ಅಂಕಗಳಿಸಿದ  ಅಭ್ಯರ್ಥಿಗಳಿಂದ ಆಫ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಡಿಪ್ಲೋಮಾ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್, ಹಾಸನ ಇಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ.30ಕೊನೆಯ ದಿನವಾಗಿರುತ್ತದೆ.

ಶೇಕಡ 40% ಮತ್ತು ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಶೇಷ ಚೇತನ ಅಭ್ಯರ್ಥಿಗಳಿಗೆ 25 ಸೀಟುಗಳು ನೇರ ಪ್ರವೇಶ ಇರುತ್ತದೆ ಮತ್ತು ಅವರಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರನ್ನು ಕಚೇರಿ ವೇಳೆ ಬೇಟಿಮಾಡಬಹುದು ” –  ಪ್ರಾಂಶುಪಾಲರು ವಸಂತ ಕುಮಾರ್ ಡಿ.ಹೆಚ್.

LEAVE A REPLY

Please enter your comment!
Please enter your name here