Arkalgud

ಶಿರಾಡಿಘಾಟ್ ಬಂದ್: ಮಂಗಳೂರು / ಧರ್ಮಸ್ಥಳಕ್ಕೆ ಹೋಗಲು ಪರ್ಯಾಯ ಮಾರ್ಗಗಳು ಯಾವವು ಗೊತ್ತಾ?

By

July 16, 2022

ಹಾಸನದಿಂದ ಸಕಲೇಶಪುರ ಮಾರ್ಗದಲ್ಲಿ ಮಂಗಳೂರಿಗೆ ಹೋಗೋ ಮಾರ್ಗದ ದೋಣಿಗಲ್ ಸಮೀಪ ಭೂ ಕುಸಿತವಾಗಿದ್ದು, ಇದೀಗ ಪರ್ಯಾಯ ಮಾರ್ಗಗಳು ಇಂತಿವೆ ., ಸ್ವಲ್ಪ ದೂರವಾದರೂ ಅನಿವಾರ್ಯವಾಗಿದೆ .

ಶಿರಾಡಿಘಾಟ್ ಬಂದ್ ಆಯ್ತು ಮಂಗಳೂರಿಗೆ ಮಾರ್ಗ ಯಾವುದು?

ಹಾಸನದ ಮೂಲಕ ರಾಜದಾನಿ ಬೆಂಗಳೂರು ಹಾಗು ಬಂದರು ನಗರಿ ಮಂಗಳೂರನ್ನು ಸಂಪರ್ಕಿಸೋ ಪ್ರಮುಖ ರಸ್ತೆ ಹಾಗೂ ಹತ್ತಿರದ ರಸ್ತೆ ಅದು ರಾಷ್ಟ್ರೀಯ ಹೆದ್ದಾರಿ 75, ಈ ಮಾರ್ಗದಲ್ಲಿ ನಿತ್ಯ ಏನಿಲ್ಲವೆಂದರೂ 20 ಸಾವಿರ ವಾಹನಗಳು ಓಡಾಡುತ್ತವೆ. ಎನ್ನೋ ಮಾತಿದೆ. ರಾಜ್ಯದ ಜೀವನಾಡಿ ರಸ್ತೆ ಎಂದು ಕರೆಸಿಕೊಳ್ಳೋ ಹೆದ್ದಾರಿ ಇದು ಎನ್ನೋ ಜೊತೆಗೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆಸುಬ್ರಹ್ಮಣ್ಯಕ್ಕೆ ಭಕ್ತರು ಹೋಗೋದು ಇದೇ ಮಾರ್ಗದಲ್ಲಿ ಹಾಗಾಗಿಯೇ ಈ ರಸ್ತೆ ಬಂದ್ ಆದರೆ ಒಂದು ಪ್ರಯಾಣಿಕರಿಗೆ ತೊಂದರೆ, ಇನ್ನೊಂದು ಇಲ್ಲಿ ಓಡಾಡೋ ವಾಹನಗಳು ಪ್ರಯಾಣಿಕರನ್ನೇ ನಂಬಿ ನೂರಾರು ಕುಟುಂಬಳ ಜೀವನ ನಡೆಯುತ್ತೆ. ಹೊಟೆಲ್ ಉದ್ಯಮ, ಟ್ಯಾಕ್ಸಿ, ಟ್ರಾವೆಲ್ಸ್ ಹೀಗೆ ಎಲ್ಲವೂ ಈ ರಸ್ತೆಯ ಮೇಲೆ ನಿಂತಿದೆ. ಇದೀಗ ರಸ್ತೆ ಬಂದ್ ಆಗಿದ್ದು, ಎಲ್ಲರಿಗೂ ಹೊಡೆತಬಿದ್ದಿದೆ ಹಾಗಾಗಿಯೇ ಬದಲಿ ಮಾರ್ಗ ಯಾವುದು ಎನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಾಸನದಿಂದ ಸಕಲೇಶಪುರ ಮಾರ್ಗದಲ್ಲಿ ಮಂಗಳೂರಿಗೆ ಹೋಗೋ ಮಾರ್ಗದ ದೋಣಿಗಲ್ ಸಮೀಪ ಭೂ ಕುಸಿತವಾಗಿದ್ದು, ಇದೀಗ ಪರ್ಯಾಯ ಮಾರ್ಗಗಳನ್ನು ಹಾಸನ ಜಿಲ್ಲಾಧಿಕಾರಿಯವರು ಸೂಚಿಸಿದ್ದು, ಅದು ಈ ಕೆಳಗಿನಂತಿದೆ.

ಲಘು ಹಾಗೂ ಬಸ್ ಮತ್ತು ಸಣ್ಣ ಪ್ರಮಾಣದ ವಾಹನಗಳು ಹಾಸನದಿಂದ ಅರಕಲಗೂಡು, ಕುಶಾಲನಗರ, ಮಡಿಕೇರಿ ಹಾಗೂ ಸಂಪಾಜೆ ಮೂಲಕ ಮಂಗಳೂರಿಗೆ ಹೋಗಬಹುದು. ಇದು ಒಂದನೇ ಮಾರ್ಗ, ಎರಡನೇ ಮಾರ್ಗವಾಗಿ ಬಸ್ ಗಳ ಜೊತೆಗೆ ಮದ್ಯಮ ಪ್ರಮಾಣದ ಸರಕು ಸಾಗಣೆ ವಾಹನಗಳು ಸೇರಿದಂತೆ ಹಾಸನದಿಂದ ಬೇಲೂರು ಮೂಡಿಗೆರೆ ಮೂಲಕ ಚಾರ್ಮಾಡಿಘಾಟ್ ತಲುಪಿ ಈ ಮಾರ್ಗದಲ್ಲಿ ಮಂಗಳೂರು ತಲುಪಬೇಕು. ಇನ್ನು ಭಾರೀ ಪ್ರಮಾಣದ ವಾಹನಗಳು ಅಂದರೆ ದೊಡ್ಡ ದೊಡ್ಡ ಟ್ರಕ್, ಹತ್ತು ಚಕ್ರಕ್ಕಿಂತ ಮೇಲ್ಪಟ್ಟ ವಾಹನಗಳು ಬೇರೆ ಪರ್ಯಾಯ ಮಾರ್ಗದ ಮೂಲಕ ತೆರಳಬೇಕು ಎಂದು ತಮ್ಮ ಆದೇಶದಲ್ಲಿ ಹಾಸನ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದು, ಮುಂದಿನ ಆದೇಶದವರೆಗೆ ಇದೇ ಮಾರ್ಗಗಳ ಮೂಲಕ ಬೆಂಗಳೂರಿನಿಂದ-ಮಂಗಳೂರಿಗೆ, ಮಂಗಳೂರಿನಿಂದ-ಬೆಂಗಳೂರಿಗೆ ಪ್ರಯಾಣಿಕರು ತಲುಪಬೇಕಿದೆ.