ಮಂಗಳೂರು – ವಾರಾಣಸಿ ರೈಲು ಹಾಸನದ ಮೂಲಕವಾಗಿ

0

ಹಾಸನ / ಮಂಗಳೂರು /ವಾರಣಾಸಿ : ಕರಾವಳಿ ಜನರ ಬಹುದಿನದ ಬೇಡಿಕೆ ಮಂಗಳೂರಿನಿಂದ ಹಾಸನ ಮೂಲಕ ವಾರಾಣಸಿ ರೈಲಿಗೆ ಕಾರ್ಯಯೋಜನೆ

ಗಂಗಾನದಿಯ ತಟದಲ್ಲಿರುವ ದೇಶದ ಅತ್ಯಂತ ಪ್ರಾಚೀನ ಪಟ್ಟಣ ವಾರಾಣಸಿ ಮತ್ತು ಕರ್ನಾಟಕದ ಕರಾವಳಿ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಮಂಗಳೂರು ನಡುವೆ ರೈಲು ಆರಂಭಿಸುವ ಕುರಿತು ದಕ್ಷಿಣ ರೈಲ್ವೆ ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ.

ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್, ಬಿ.ಜಿ, ಮಲ್ಲ 24ರಂದು ದಕ್ಷಿಣ ಕನ್ನಡದ ಸಂಸದರಿಗೆ ಬರೆದ ಪತ್ರದಲ್ಲಿ ಈ ಮಾಹಿತಿ ಖಚಿತಪಡಿಸಿದ್ದಾರೆ. ಪ್ರಸ್ತಾವಿತ ರೈಲು ಮಂಗಳೂರು ಸೆಂಟ್ರಲ್‌ನಿಂದ ಸುಬ್ರಹ್ಮಣ್ಯ ರೋಡ್, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಮೀರಜ್, ಪುಣೆ ಮಾರ್ಗದಲ್ಲಿ ವಾರಾಣಸಿ ತಲುಪಲಿದೆ.

ಮುಂದಿನ ಹಂತದಲ್ಲಿ ರೈಲ್ವೆ ಸಂಚಾರ ನಿರ್ವಹಣೆ ವಿಭಾಗ ಹೊಸ ಯೋಜನೆಯ ಸಾಧ್ಯತೆಗಳ ಬಗ್ಗೆ ವರದಿ ನೀಡಲಿದ್ದು. ಬಳಿಕ ರೈಲು ಹಾದುಹೋಗುವ ವಲಯಗಳ ಅಭಿಪಾಯ ಸಂಗ್ರಹಿಸಿ ವೇಳಾಪಟ್ಟಿ ರಚಿಸಿ ರೈಲ್ವೆ ಮಂಡಳಿಗೆ

ವಿಶೇಷ ಶಿಫಾರಸು ಕಳುಹಿಸಲಾಗುತ್ತದೆ. ಎನ್ನಲಾಗಿದೆ., ಇದರಿಂದ ಮಲೆನಾಡಿನ ಹಾಸನ ,  ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಹೀಡೇರಲಿದೆ., ಪ್ರಸ್ತುತ ಮಂಗಳೂರಿನಿಂದ ವಾರಾಣಸಿಗೆ ನೇರ ರೈಲು ಅಥವಾ ವಿಮಾನ ಸಂಪರ್ಕವಿಲ್ಲ. ಅಲ್ಲಿಗೆ ಪ್ರಯಾಣಿಸುವವರು ಈಗ ಮುಂಬೈ ಅಥವಾ ಬೆಂಗಳೂರು ಮೂಲಕ ಪ್ರಯಾಣಿಸುತ್ತಿರೋದು ನಿಮಗೆ ತಿಳಿದಿದೆ.

ಶ್ರೀರಾಮನ ಜನ್ಮ ಭೂಮಿ ಖ್ಯಾತಿಯ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಚಂದ್ರ ದೇವರ ಭವ್ಯ ಮಂದಿರದ ಬಗ್ಗೆ ಆರಂಭದ ದಿನಗಳಿಂದಲೂ ಇತ್ತ

ಪ್ರಸ್ತಾವಿತ ರೈಲು ಆರಂಭಿಸುವುದರಿಂದ ದಕ್ಷಿಣ ಕನ್ನಡ ಜಿಲ್ಲೆ , ಹಾಸನ , ದಾವಣಗೆರೆ , ಹುಬ್ಬಳ್ಳಿ ಹಾಗೂ ಆಸುಪಾಸಿನ ಜನರಿಗೆ ಭಾರತದ ಪ್ರಧಾನ ಪುಣ್ಯಕ್ಷೇತ್ರಗಳಿರುವ ಕಾಶಿ, ಆಯೋಧ್ಯೆ ಮತ್ತು ಪ್ರಯಾಗ್‌ರಾಜ್‌ ದರ್ಶನ ಸುಲಭ ಅನುಕೂಲ ವಾಗಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 4 ಮತ್ತು 5 ಪ್ಲಾಟ್‌ಫಾರ್ಮ್‌ಗಳು ಸಿದ್ಧಗೊಳ್ಳುತ್ತಿದ್ದು, ಇಲ್ಲಿಂದ ಹೊರ ರೈಲು ಆರಂಭಿಸಲು ಏನು ಸಮಸ್ಯೆ ಇಲ್ಲ.

ಈ ಬಗ್ಗೆ ಹನುಮಂತ ಕಾಮತ್ ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮುತುವರ್ಜಿ ವಹಿಸಿದವರು ಕರ್ನಾಟಕ ಕರಾವಳಿ ಭಾಗದ , ಮಲೆನಾಡಿನ , ಹಾಗೂ ಅರೆ ಮಲೆನಾಡಿನ ಜನರು , ಪ್ರಥಮ ಹಂತದಲ್ಲಿ ವಾರಾಣಸಿ ತನಕ ರೈಲು ಸಂಪರ್ಕ ದೊರೆತರೆ, ಮುಂದಿನ ಹಂತದಲ್ಲಿ ಈ ರೈಲು ಅಲ್ಲಿಂದ ಕೇವಲ 203 ಕಿ.ಮೀ ದೂರದ ಅಯೋಧ್ಯೆ ತನಕ ವಿಸ್ತರಣೆ ಖಚಿತ ಎನ್ನಲಾಗಿದೆ, ಇದರಿಂದ ಕಡಿಮೆ ವೆಚ್ಚದಲ್ಲಿ ಇಲ್ಲಿನ ಜನರಿಗೆ ಆಯೋಧ್ಯೆ ದರ್ಶನ ಸಾಧ್ಯವಾಗಲಿದೆ.

ಪ್ರಯೋಜನಗಳೇನು?
ದೇಶದ ಪ್ರಮುಖ ಪ್ರಾಚೀನ ಹಾಗೂ ಪವಿತ್ರ ಸ್ಥಳಗಳಾದ ವಾರಾಣಸಿ ಮತ್ತು ಅಯೋಧ್ಯೆಗೆ ಸುಲಭ ಸಂಪರ್ಕ,

• ಪಸ್ತುತ ಹಾಸನ, ಸಕಲೇಶಪುರ , ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಕಡೆಗಳಿಂದ ಉತ್ತರ ಭಾರತಕ್ಕೆ ಇಲ್ಲಿಯ ತನಕ ನೇರ ರೈಲು ಸಂಪರ್ಕವಿಲ್ಲ, ಹೊಸ ಯೋಜನೆಯಿಂದ ಈ ಕೊರತೆ ತುಂಬಲಿದೆ.

ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here