ಚನ್ನರಾಯಪಟ್ಟಣದಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ ; ಹಾಡಹಗಲೇ ಮಾರಕಾಸ್ತ್ರಗಳಿಂದ ಭೀಕರ ಕ್ರೌರ್ಯ

0

ಹಾಸನ : ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ಆರೋಪಿ ಯುವಕರು ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ . , ಮಾಸ್ತಿಗೌಡ ಕೊಲೆಯಾದವ ,

ಚನ್ನರಾಯಪಟ್ಟಣ ತಾಲ್ಲೂಕಿನ ಹೊನ್ನಮಾರನಹಳ್ಳಿ ಗ್ರಾಮದವನಾಗಿದ್ದು . ಈತನ ಹಿನ್ನೆಲೆ ಕೆದಕಿದರೆ ಹಲವು ಕೃತ್ಯಗಳಲ್ಲಿ ಈತನ ಹೆಸರಿದ್ದು, ರೌಡಿಶೀಟರ್ ಕೂಡ ಆಗಿದ್ದ. ಮಧ್ಯ ಪೇಟೆಯಲ್ಲಿ ನಡೆದ ಬರ್ಬರ ಹತ್ಯೆಯ ನಂತರದ ಆ ವಿಡಿಯೋ/ಫೋಟೋ ವೈರಲ್ ಆಗಿದ್ದು ಚನ್ನರಾಯಪಟ್ಟಣ ಸೇರಿ ಹಾಸನ ಜನತೆ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ

ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಪ್ರಕರಣ ದಾಖಲಾಗಿದ್ದು , ಹಾಸನ ಜಿಲ್ಲೆಯಲ್ಲಿ ಹಾಡಹಗಲೇ ರೌಡಿಶೀಟರ್‌ನ ಬರ್ಬರ ಹತ್ಯೆ ಕ್ರೂರತೆ ಹೇಳತೀರದು , ಅದೇನು ಅಂತಹ ದ್ವೇಷವೋ ಎಂದು ಮೃತ ದೇಹದ ಮುಂದೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು . ನಡುರಸ್ತೆಯಲ್ಲಿ

ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ನನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಮಾಸ್ತಿಗೌಡ (30) ಕೊಲೆಯಾದ ರೌಡಿಶೀಟರ್, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗ ಈ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here