ಹಾಸನ : ಮಧ್ಯ ರಾತ್ರಿ ಹಾಸನ ಕಾರಾಗೃಹ ಮೇಲೆ ಪೊಲೀಸ್ ದಾಳಿ, ಹಾಸನ ASP ತಮ್ಮಯ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಸುಮಾರು 60 ಜನ ಪೊಲೀಸ್ ತಂಡದಿಂದ ನಡೆದ ದಾಳಿ ನಡೆಯಿತು, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಈ ದಾಳಿ ವೇಳೆ ಬರೊಬ್ಬರಿ 17 ಮೊಬೈಲ್ ಜಪ್ತಿ ಮಾಡಿದ ಪೊಲೀಸರು.
ಗಾಂಜ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳು ವಶಕ್ಕೆ ಪಡೆದಿದೆ. ಆರೋಪಿಗಳ ಚಟುವಟಿಕೆ ಗಮನಿಸಿ ಖಚಿತ ಮಹಿತಿಯೊಂದಿಗೆ ದಿಢೀರ್ ದಾಳಿ ನಡೆಸಿದ ಪೊಲೀಸರು, ಜೈಲಿನಲ್ಲಿದ್ದುಕೊಂಡೆ ಹೊರಗಿನವರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಇದೀಗ ಹೆಚ್ಚುವರಿ ಕೇಸಿಗೆ ಸಿಲುಕಿದ್ದಾರೆ.