ದುಡ್ಡು, ‘ಚಿನ್ನ’ ಇದೆಲ್ಲಾ ನಿಂಗೇ ಅಂತಿದ್ದ ; ಮಿಕ್ಸರ್ ಸ್ಫೋಟದ ಹಿಂದೆ ಮತ್ತೊಂದು ಅಸಲಿ ಕಥೆ ಇಲ್ಲಿದೆ ನೋಡಿ

0

ಹಾಸನದ ಕೊರಿಯರ್ ಶಾಪ್ನಲ್ಲಿ ನಡೆದ ಸ್ಫೋಟ ಪ್ರಕರಣವು ದಿನಕ್ಕೊಂದು ಸ್ವರೂಪ ಪಡೆದುಕೊಳ್ತಿದೆ. ನಿನ್ನೆಯಷ್ಟೇ ಆರೋಪಿ ಅನೂಪ್ ಕುಮಾರ್ ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿದ್ದ ಮಹಿಳೆ ತನ್ನ ಪ್ರೀತಿ ಒಪ್ಪಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಿಕ್ಸರ್ ಸ್ಫೋಟ ಮಾಡಿದ್ದ ಎಂದು ತಿಳಿದುಬಂದಿತ್ತು., ಕುವೆಂಪುನಗರದ ಕೊರಿಯರ್ ಸೆಂಟರ್‍ನಲ್ಲಿ ನಡೆದಿದ್ದ ಮಿಕ್ಸರ್ ಸ್ಪೋಟದ ಪ್ರಕರಣ ಉಗ್ರಗಾಮಿ ಕೃತ್ಯ ಅಲ್ಲ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ ಪ್ರೇಮಿಯೊಬ್ಬನ ಕೃತ್ಯ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. , ಇದೀಗ ತನಿಖೆ ಮುಂದುವರಿದ ಭಾಗವಾಗಿ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಮ್ಯಾಟ್ರಿಮೊನಿಯಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದ ಆರೋಪಿ ಹೆಣ್ಮಕ್ಕಳಿಗೆ ವಂಚಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರು ಮೂಲದ ಅನೂಪ್ ಕುಮಾರ್, ಮ್ಯಾಟ್ರಿಮೊನಿನಲ್ಲಿ ಪರಿಚಯ ಆಗಿದ್ದ ಮಹಿಳೆಯರ ಜೊತೆ ಬಣ್ಣ ಬಣ್ಣದ ಮಾತುಗಳನ್ನ ಆಡುತ್ತಿದ್ದ. ನನ್ನ ಬಳಿ ಕೆ.ಜಿ.ಗಟ್ಟಲೇ ಬಂಗಾರ, ಕೋಟಿ ಕೋಟಿ ಹಣ ಇದೆ ಎಂದು ಫೇಕ್ ವಿಡಿಯೋ ಮಾಡಿ ನಂಬಿಸುತ್ತಿದ್ದ ಎನ್ನಲಾಗಿದೆ. , ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹಾಸನದ ಮಹಿಳೆ ವಸಂತಾ ವಿಚ್ಛೇದನ ನಂತರ ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಫ್ಲೋಡ್ ಮಾಡಿದ್ದಳು, ಇದನ್ನು ನೋಡಿ ಬೆಂಗಳೂರು ಮೂಲದ ಅನೂಪ್ ಮದುವೆ ಪ್ರಸ್ತಾಪ ಮಾಡಿದ್ದನು. , ಅನೂಪ್ ವಿಡಿಯೋದಲ್ಲಿ ತನ್ನ ಬಳಿ ಫಾರ್ಮ್ ಹೌಸ್, 20 ಲೀ. ಕುಕ್ಕರ್‌ನಲ್ಲಿ 40 ಕೆ.ಜಿ. ಚಿನ್ನ, 12 ಲೀ. ಕುಕ್ಕರ್‌ನಲ್ಲಿ 36 ಕೆ.ಜಿ. ಚಿನ್ನ ಇದೆಯೆಂದು ಸೆಲ್ಫಿ ವಿಡಿಯೋ ಮಾಡಿ ಇದೆಲ್ಲ ಮಾಡಿ ತೋರಿಸುತ್ತಿದ್ದ. ಅದರಂತೆ

ಹಾಸನದ ಮಹಿಳೆಯನ್ನೂ ನಂಬಿಸಿದ್ದ ಎಂದು ತಿಳಿದುಬಂದಿದೆ. , ನಂತರ ಅನೂಪ್ ಪದೇಪದೇ ಉಡುಗೊರೆ ಕಳುಹಿಸುತ್ತಿದ್ದ ಇದನ್ನು ಸಹಿಸದ ವಸಂತಾ ಮದುವೆಯೂ ಆಗದೆ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಅನೂಪ್ ಮದುವೆಯಾಗಬೇಕು ಎಂದು ಆಕೆಯ ಬೆನ್ನು ಬಿದ್ದಿದ್ದನು. ಅನೂಪ್ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮುಚ್ಚಳಿಕೆ ಬರೆಸಿದ್ದರು. , ಹಾಸನದ ಮಹಿಳೆಯನ್ನೂ ನಂಬಿಸಿದ್ದ ಎಂದು ತಿಳಿದುಬಂದಿದೆ. , ಇದಾದ ಬಳಿಕ ಹಾಸನದ ವಸಂತಾ ಅವರ ಮನೆಗೆ ಬಂದಾಗ ಅನೂಪ್‍ಗೆ ಚಪ್ಪಲಿಯಲ್ಲಿ ಹೊಡೆದು ಕಳುಹಿಸಿದ್ದರು, ಕೆರಳಿದ ಅನೂಪ್ ಆಕೆಯನ್ನು ಮುಗಿಸೋಕೆ ಸ್ನೇಹಿತರೊಂದಿಗೆ ಪ್ಲಾನ್ ಮಾಡಿದ್ದನು. ಅದರಂತೆ ಆತ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ತನಗೆ ಮೋಸ ಮಾಡಿದವಳ ಮುಖ ವಿಕಾರವಾಗಬೇಕು, ಇಲ್ಲಾ ಆಕೆ ಸಾಯಬೇಕು ಎಂದು ಸಂಚು ರೂಪಿಸಿ

ಮಿಕ್ಸಿಯನ್ನು ಪಾರ್ಸಲ್ ಮಾಡಿದ್ದನು. , ಆದರೆ ಹಾಸನ ಮಹಿಳೆ ಆರೋಪಿಯನ್ನ ನಂಬಿರಲಿಲ್ಲ. ಆತನ ಬಲೆಗೂ ಬೀಳಲಿಲ್ಲ. ಅದಕ್ಕೆ ಕೋಪಗೊಂಡು ಮಿಕ್ಸರ್ನಲ್ಲಿ ಸ್ಫೋಟಕ ತುಂಬಿ ಪಾರ್ಸಲ್ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. , ವಸಂತಾ ತನಗೆ ಬಂದ ಪಾರ್ಸಲ್ ಬಿಚ್ಚಿ ನೋಡಿ, ಅದು ಮಿಕ್ಸಿ ಎಂದು ಗೊತ್ತಾಗಿ ಬೇಡ ಎಂದು ಹಿಂದಿರುಗಿಸಲು ನಿರ್ಧರಿಸಿ ಡಿ.26ರಂದು ಮಿಕ್ಸಿ ವಾಪಸ್ ಕಳಿಸುವಂತೆ ಕೊರಿಯರ್ ಅಂಗಡಿಗೆ ಕೊಟ್ಟಿದ್ದಳು. ಕೊರಿಯರ್ ಮಾಡಿದವರ ಪೂರ್ಣ ವಿಳಾಸ ಇಲ್ಲದ ಕಾರಣ ಅದನ್ನು ಬಿಚ್ಚಿ ಪರಿಶೀಲಿಸಲು ಮಾಲೀಕ ಶಶಿ ಮುಂದಾಗಿದ್ದರು. ಈ ವೇಳೆ ಮಿಕ್ಕಿ ಸ್ಪೋಟಗೊಂಡು ಶಶಿ ಗಾಯಗೊಂಡಿದ್ದನು. , ಎಫ್‍ಎಸ್‍ಎಲ್ ತಂಡ, ಅಂತರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತ್ತು. ಹಾಸನ ಎಸ್ಪಿ ಹರಿರಾಂ ಶಂಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣದ ಕುರಿತು ಬಯಲು ಮಾಡಿದ್ದಾರೆ., ಕೊರಿಯರ್ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರೇಮಿ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. , ಸದ್ಯ ಎಲ್ಲ ಮಾಹಿತಿಯನ್ನು ವಸಂತಾ ಅವರು ನೀಡಿದ ಹೇಳಿಕೆಯ ಅನ್ವಯ ದಾಖಲಿಸಲಾಗಿದ್ದು ಸಂಚು ರೂಪಿಸಿದ ಅನೂಪ್ ಹಾಗೂ

ಆತನ ಸ್ನೇಹಿತರ ಸುಳಿವು ದೊರಕಿದ್ದು ಅತಿ ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು. ಡೆಟೋನೇಟರ್ ಎಲ್ಲಿ ಖರೀದಿಸಿದರು ಹಾಗೂ ಮಿಕ್ಸಿಗೆ ಅಳವಡಿಸಲು ಸಹಕಾರ ನೀಡಿದವರು ಯಾರು ಎಂದು ತನಿಖೆ ಯಿಂದ ಪತ್ತೆಯಾಗಲಿದೆ ಎಂದು ಎಸ್ಪಿ ಹೇಳಿದರು. , ಡಿ.17 ರಂದು ವಸಂತಾ ಎಂಬುವವರ ಹೆಸರಿಗೆ ಕೊರಿಯರ್ ಬಂದಿತ್ತು. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಗಣೇಶ್ ಎನ್ನುವ ಯುವಕ ಡಿಲವೆರಿ ಮಾಡಿದ್ದ. ಡಿ. 26 ರಂದು ವಾಪಾಸ್ ಕಳಿಸುವಂತೆ ತಂದಿದ್ದರು. , 300 ರೂಪಾಯಿ ಚಾರ್ಜ್ ಆಗುತ್ತದೆ ಎಂದಾಗ ನನಗೆ ಬೇಡ ನೀವೆ ಇಟ್ಟುಕೊಳ್ಳಿ ಇಲ್ಲಾಬಿಸಾಡಿ ಎಂದು ಆ ಮಹಿಳೆ ಹೇಳಿದ್ದರು. ಆ ಮಿಕ್ಸಿಯನ್ನು

ಪಕ್ಕಕ್ಕೆ ತೆಗೆದಿಡಲು ಹೋದ ವೇಳೆ ಕೈಜಾರಿ ಕೆಳಗೆ ಬಿದ್ದ ವೇಳೆ ಸ್ಪೋಟಗೊಂಡಿದೆ ಎಂದು ಶಶಿ ಹೇಳಿದ್ದಾರೆ. ಬಲಗೈ ತೀವ್ರ ಪೆಟ್ಟಾಗಿದ್ದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ಸ್ಪೋಟದಲ್ಲಿ ಗಾಯಗೊಂಡ ಶಶಿಕುಮಾರ್ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here