ಬಿಜೆಪಿ ನಾಮಪತ್ರ ವಾಪಸ್ ಪಡೆದ ಕೃಷ್ಣೇಗೌಡ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ , 14 ನಾಮಪತ್ರ ತಿರಸ್ಕೃತ

0

ಹಾಸನ: ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ತೆರೆಮರೆಯಲ್ಲಿ ನಡೆದಿದ್ದ ಅಚ್ಚರಿಯ ರಾಜಕೀಯ ಬೆಳವಣಿಗೆ ಹಾಗೆಯೇ ತಣ್ಣಗಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದ ಎಂ.ಟಿ.ಕೃಷ್ಣೇಗೌಡ ಅವರು, ಶುಕ್ರವಾರ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಎಂ.ಟಿ.ಕೃಷ್ಣೇಗೌಡ ಅವರು ಕಡೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ಹೈಕಮಾಂಡ್ ಬಿ ಮತ್ತು ಸಿ ಫಾರಂ ನೀಡಿದ್ದರಿಂದ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣೇಗೌಡ ಉಮೇದುವಾರಿಕೆ ಸಲ್ಲಿಸಿದ್ದರು.ಇಮೇಲ್ ಮೂಲಕ ಬಿ ಮತ್ತು ಸಿ ಫಾರಂ ಕಳುಹಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಬಿಜೆಪಿಯಿಂದ ಎಚ್.ಯೋಗಾ ರಮೇಶ್ ನಾಮಪತ್ರ ಸಲ್ಲಿಸಿದ್ದರು. ಯೋಗಾ ರಮೇಶ್ ಮಾತ್ರವಲ್ಲದೆ ಕೃಷ್ಣೇಗೌಡ ಸಹ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರಿಂದ ಯಾರು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂಬ ಅನುಮಾನ ಮೂಡಿತ್ತು. ಆದರೆ ಶುಕ್ರವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ, ಕೃಷ್ಣೇಗೌಡ ಬಿಜೆಪಿಯಿಂದ ಸಲ್ಲಿಸಿದ್ದ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ ಎಚ್.ಯೋಗಾ ರಮೇಶ್ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ 86 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಹಾಸನ: ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023 ಕ್ಕೆ ಸಂಬಂಧಿಸಿದಂತೆ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ನಡೆದಿದ್ದು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ 13 ಅಭ್ಯರ್ಥಿಗಳ, ಅರಸೀಕೆರೆ ವಿಧಾನಸಭಾ ಕ್ಷೇತ್ರದ 13 ಅಭ್ಯರ್ಥಿಗಳ, ಬೇಲೂರು ವಿಧಾನಸಭಾ ಕ್ಷೇತ್ರದ 13 ಅಭ್ಯರ್ಥಿಗಳ ಹಾಸನ ವಿಧಾನಸಭಾ ಕ್ಷೇತ್ರದ 11 ಅಭ್ಯರ್ಥಿಗಳ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ 8 ಅಭ್ಯರ್ಥಿಗಳ, ಅರಕಲಗೂಡು ವಿಧಾನಸಭಾ ಕ್ಷೇತ್ರದ 17 ಅಭ್ಯರ್ಥಿಗಳ ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದ 11 ಅಭ್ಯರ್ಥಿಗಳ ನಾಮಪತ್ರಗಳು ಸೇರಿದಂತೆ ಒಟ್ಟು 86 ಅಭ್ಯಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್.ಅವರು ತಿಳಿಸಿದ್ದಾರೆ.
193- ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಒಟ್ಟು 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಚಿದಾನಂದ ಸಿ.ಆರ್ ನಾಮಪತ್ರ, ಆಮ್ ಆದ್ಮಿ ಪಕ್ಷದ ಮಂಜೇಗೌಡ ಬಿ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಂ.ಎ ಗೋಪಾಲಸ್ವಾಮಿ, ಜನತಾದಳ (ಜಾತ್ಯತೀತ) ಪಕ್ಷದ ಸಿ.ಎನ್. ಬಾಲಕೃಷ್ಣ, ಬಹುಜನ ಸಮಾಜ ಪಾರ್ಟಿ ಆರ್ ರಾಜು, ಉತ್ತಮ ಪ್ರಜಾಕೀಯ ಪಕ್ಷದ ಕಿರಣ್ ಟಿ.ಕೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪವಿತ್ರ ಜೆ.ಕೆ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಹೆಚ್.ಡಿ ರೇವಣ್ಣ ಕರ್ನಾಟಕ ರಾಷ್ಟç ಸಮಿತಿ ಪಾರ್ಟಿಯ ಶಿವಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ನಟರಾಜ ಪಿ.ಎನ್, ಎಂ.ಜಿ ನಂಜೇಗೌಡ, ಹೆಚ್.ಎಂ ರವಿ, ಸುಬ್ರಹ್ಮಣ್ಯ ಎಂ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.
194- ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಒಟ್ಟು 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಜಿ.ವಿ ಬಸವರಾಜು, ಆಮ್ ಆದ್ಮಿ ಪಕ್ಷದ ಜಿ.ಜಿ ದಯಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ.ಎಂ ಶಿವಲಿಂಗೇಗೌಡ, ಜನತಾದಳ (ಜಾತ್ಯತೀತ) ಪಕ್ಷದ ಎನ್.ಆರ್ ಸಂತೋಷ್, ಬಹುಜನ ಸಮಾಜ ಪಾರ್ಟಿಯ ಎನ್.ಸಿ ಚಂದ್ರಶೇಖರ್, ಉತ್ತಮ ಪ್ರಜಾಕೀಯ ನವೀನ್ ಎಸ್.ಕೆ, ಕರ್ನಾಟಕ ರಾಷ್ಟç ಸಮಿತಿ ಉಮೆಶ್ ಬಿ.ಎಂ, ಲೋಕಶಕ್ತಿ ಪಕ್ಷದ ಹೊಳೆಯಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಬಿ.ಎಸ್ ಅಶೋಕ, ಡಿ ಕಿಶೋರ್ ಕುಮಾರ್, ರವಿ, ಹೆಚ್.ಆರ್ ರಾಜೇಶ್, ಡಿ.ಜಿ ರಂಗಪ್ಪ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.

195- ಬೇಲೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಹೆಚ್.ಕೆ ಸುರೇಶ್, ಆಮ್ ಆದ್ಮಿ ಪಕ್ಷದ ಪರ್ವತೇಗೌಡ ಹೆಚ್.ಪಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಶಿವರಾಮ್, ಜನತಾದಳ (ಜಾತ್ಯತೀತ) ಪಕ್ಷದ ಕೆ.ಎಸ್ ಲಿಂಗೆಶ್, ಬಹುಜನ ಸಮಾಜ ಪಾರ್ಟಿಯ ಗಂಗಧಾರ್ ಡಿ.ಎಸ್, ಕರ್ನಾಟಕ ರಾಷ್ಟç ಸಮಿತಿ ಆದೇಶ್.ಸಿ.ಎನ್, ಆರ್.ಪಿ.ಐ ಕರ್ನಾಟಕ ಪಕ್ಷದ ಡಿ.ಡಿ ಲೊಕೇಶ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ದಿನೆಶ್ ಹೆಚ್.ಆರ್,ಪರಮೇಶ್ ಎನ್.ಎಂ, ಪ್ರದೀಪ್ ಹೆಚ್.ಸಿ, ಭವ್ಯ ಸಿ.ಆರ್, ಡಿ.ಆರ್ ಮಲ್ಲಿಕಾರ್ಜುನ, ಮಹೇಶ್ ಬಿ.ಆರ್ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.
196- ಹಾಸನ ವಿಧಾನಸಭಾ ಕ್ಷೇತ್ರದಿಂದ ಒಟ್ಟು 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಪ್ರೀತಮ್ ಜೆ.ಗೌಡ, ಆಮ್ ಆದ್ಮಿ ಪಕ್ಷದ ಎ.ಟಿ ಯೋಗೀಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಕೆ ರಂಗಸ್ವಾಮಿ, ಜನತಾದಳ (ಜಾತ್ಯತೀತ) ಪಕ್ಷದ ಹೆಚ್.ಪಿ ಸ್ವರೂಪ್, ಬಹುಜನ ಸಮಾಜ ಪಾರ್ಟಿಯ ಹೆಚ್.ಪಿ ಮಲ್ಲಯ್ಯ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಸ್ವರೂಪ್ ಬಿ.ಎಂ, ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಆರ್.ಜಿ ಸತೀಶ್, ಹೆಚ್.ಪಿ ಸ್ವಾಮಿ, ಕಾವ್ಯ ಹೆಚ್.ಜಿ, ಕೆ.ಪಿ ಶಿವಕುಮಾರ್ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.
197- ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಒಟ್ಟು 8 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಜಿ ದೇವರಾಜೇಗೌಡ, ಆಮ್ ಆದ್ಮಿ ಪಕ್ಷದ ಗೀತಾ ಬಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶ್ರೇಯಸ್ ಎಂ.ಪಟೇಲ್, ಜನತಾದಳ (ಜಾತ್ಯತೀತ) ಪಕ್ಷದ ಹೆಚ್ಡಿ.ರೇವಣ್ಣ, ಬಹುಜನ ಸಮಾಜ ಪಾರ್ಟಿಯ ತಾರೇಶ್ ಹೆಚ್.ಎಸ್, ಕರ್ನಾಟಕ ರಾಷ್ಟç ಸಮಿತಿ ಬಿ.ಕೆ ನಾಗರಾಜ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಹೆಚ್.ಡಿ ರೇವಣ್ಣ ಹಾಗೂ ಪಕ್ಷೇತರ ಅಭ್ಯರ್ಥಿ ಡಿ.ಆರ್ ರಂಗಸ್ವಾಮಿ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.
198- ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಒಟ್ಟು 17 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಹೆಚ್. ಯೋಗಾರಮೇಶ್, ಆಮ್ ಆದ್ಮಿ ಪಕ್ಷದ ಜಿ.ಟಿ ಜವರೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ಪಿ ಶ್ರೀಧರ್ಗೌಡ, ಜನತಾದಳ (ಜಾತ್ಯತೀತ) ಪಕ್ಷದ ಎ.ಮಂಜು, ಬಹುಜನ ಸಮಾಜ ಪಾರ್ಟಿಯ ಹರೀಶ್ ಎ.ಪಿ, ಕರ್ನಾಟಕ ರಾಷ್ಟç ಸಮಿತಿ ಪಾರ್ಟಿ ಕೇಶವಮೂರ್ತಿ ಹೆಚ್.ಟಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ದಿವಾಕರ್ಗೌಡ ಸಿ.ಡಿ, ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಮಂಜುನಾಥ ಹೆಚ್.ಪಿ, ಉತ್ತಮ ಪ್ರಜಾಕೀಯ ಪಕ್ಷದ ಶಿವರಾಜ್ ಜಿ.ಆರ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಎಂ.ಟಿ ಕೃಷ್ಣೇಗೌಡ, ಪುಟ್ಟರಾಜ, ಪುನೀತ್ ಬಿ.ಆಋ, ಎ.ಎಂ ಮಲ್ಲೇಶ್, ವಿಜಯ ಭಾರತಿ, ಎಮ.ಸಿ ವಿಶ್ವನಾಥ, ಎಮ್.ಆರ್ ಶಿವಣ್ಣ , ಶ್ರೀನಿವಾಸ್ ಎಂ.ಜಿ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.
199- ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಒಟ್ಟು 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಎಸ್.ಮಂಜುನಾಥ, ಆಮ್ ಆದ್ಮಿ ಪಕ್ಷದ ಕೆ.ಸ್ ಪವನ್ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುರಳಿ ಮೋಹನ್, ಜನತಾದಳ (ಜಾತ್ಯತೀತ) ಪಕ್ಷದ ಕುಮಾರಸ್ವಾಮಿ ಹೆಚ್.ಕೆ, ಬಹುಜನ ಸಮಾಜ ಪಾರ್ಟಿಯ ಡಿ ಶಿವಮ್ಮ, ಕರ್ನಾಟಕ ರಾಷ್ಟç ಸಮಿತಿ ಪಾರ್ಟಿ ಪ್ರದೀಪ್ ಬಿ.ವಿ, ಕರುನಾಡ ಪಾರ್ಟಿಯ ಹೆಚ್.ಎಸ್ ಕುಮಾರಸ್ವಾಮಿ, ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಮಂಜುನಾಥ ಹೆಚ್.ಪಿ, ಉತ್ತಮ ಪ್ರಜಾಕೀಯ ಪಕ್ಷದ ಪ್ರತಾಪ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ರವಿ ಜಿ,ಸಿ, ಲೋಕೇಶ್ ಕುಮಾರ್ ಕೆ, ವೇಣು ಎಂ.ಆರ್ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್.ತಿಳಿಸಿದ್ದಾರೆ.

ಬಂಡಾಯದ ಭಯ ಇಲ್ಲ: ಶ್ರೀಧರ್‌ಗೌಡ

ಅರಕಲಗೂಡು: ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ನನಗೇನೂ ಸಮಸ್ಯೆಯಲ್ಲಿ ಎಂದು ಕೈ ಅಭ್ಯರ್ಥಿ ಶ್ರೀಧರ್‌ಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯ ಅಭ್ಯರ್ಥಿಯಾಗಿ
ಕೃಷ್ಣೇಗೌಡ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್‌ಗೆ ಏನೂ ಸಮಸ್ಯೆ ಇಲ್ಲ ಎಂದರು.
ಅರಕಲಗೂಡು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಪಕ್ಷದ ಜೊತೆ ಇದ್ದಾರೆ. ಹಾಗಾಗಿ ಏನೂ ಸಮಸ್ಯೆ ಇಲ್ಲ, ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕೃಷ್ಣೇಗೌಡ ಅವರ ಮನವೊಲಿಕೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ, ಅವರು ಹೇಳಿದಂತೆ ಕೇಳುತ್ತೇನೆ ಎಂದರು.
ಹಿಂದೆ ಪಕ್ಷದ ವರಿಷ್ಠರು ಯಾರಿಗೂ ಟಿಕೆಟ್ ಭರವಸೆ ನೀಡಿರಲಿಲ್ಲ. ಪಕ್ಷದಲ್ಲಿ ಗೆಲುವೇ ಮಾನದಂಡವಾಗಿದ್ದರಿAದ ಗೆಲ್ಲುವ ಅಭ್ಯರ್ಥಿ ಹುಡುಕುತ್ತಿದ್ದರು.ಹಾಗಾಗಿ ಜನರ ಜೊತೆ ಇರೋ ನನಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.
ಅರಕಲಗೂಡು ತಾಲೂಕಿನಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕೇವಲ ಇಬ್ಬರ ಮೂರು ದಶಕದ ರಾಜಕಾರಣದಿಂದ ಬೇಸತ್ತು ಹೋಗಿದ್ದಾರೆ. ಈ ಬಾರಿ ಅಭಿವೃದ್ಧಿ ಪರವಾಗಿ ಮತ ನೀಡಲು ಸಜ್ಜಾಗಿದ್ದಾರೆ. ಈ ಚುನಾವಣೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರ ಸ್ಪರ್ಧೆ ಚುನಾವಣಾ ವಿಚಾರವೇ ಅಲ್ಲ ಎನ್ನುವ ಮೂಲಕ
ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ವಿರುದ್ದ ವಾಗ್ದಾಳಿ ನಡೆಸಿದರು

ಹಾಸನ ಜಿಲ್ಲೆಯಲ್ಲಿ 14 ನಾಮಪತ್ರ ತಿರಸ್ಕೃತ

ಹಾಸನ: ಮುಂದಿನ ತಿಂಗಳು ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಸ್ಫರ್ಧೆ ಬಯಸಿ 86 ಅಭ್ಯರ್ಥಿಗಳು ಸಲ್ಲಿಸಿದ್ದ 128 ನಾಮಪತ್ರಗಳ ಪೈಕಿ 14 ನಾಮಪತ್ರ ತಿರಸ್ಕೃತಗೊಂಡಿವೆ. ಈ ಪೈಕಿ 81 ಪುರುಷ ಅಭ್ಯರ್ಥಿಗಳು 121 ಉಮೇದು ವಾರಿಕೆ ಸಲ್ಲಿಸಿದ್ದರೆ, ಐವರು ಮಹಿಳೆಯರು 7 ನಾಮಪತ್ರ ಸಲ್ಲಿಸಿದ್ದರು.
ಇಷ್ಟೂ ನಾಮಪತ್ರಗಳ ಪರಿಶೀಲನೆ ಆಯಾ ತಾಲೂಕು ಕೇಂದ್ರಗಳ ಚುನಾವಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಈ ವೇಳೆ 14 ನಾಮಪತ್ರ ತಿರಸ್ಕೃತಗೊಂಡಿವೆ.
ಅತಿ ಹೆಚ್ಚು ಅಂದರೆ ಆಲೂರು-ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ 6 ನಾಮಪತ್ರ ತಿರಸ್ಕೃತವಾಗಿದ್ದರೆ, ಅರಕಲಗೂಡು ನಾಲ್ಕು, ಹಾಸನ ಮೂರು ಮತ್ತು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿವೆ.
ಶ್ರವಣಬೆಗಳೊಳ, ಅರಸೀಕೆರೆ, ಬೇಲೂರು ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ತಿರಸ್ಕೃತಗೊಂಡಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.
ಸಲ್ಲಿಕೆಯಾಗಿದ್ದ 128 ನಾಮಪತ್ರಗಳ ಪೈಕಿ 14 ತಿರಸ್ಕೃತಗೊಂಡಿರುವುದರಿAದ 114 ಕ್ರಮಬದ್ಧವಾಗಿವೆ.
ಕಡೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅರಕಲಗೂಡು ವಿಧಾನಸಭಾ ಕ್ಷೇತ್ರ ಎಂ.ಟಿ.ಕೃಷ್ಣೇಗೌಡ ಅವರ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಹೊರತು ಪಡಿಸಿ ಎಲ್ಲಾ ಏಳು ಕ್ಷೇತ್ರಗಳಲ್ಲೂ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಆಪ್ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.
ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದ್ದು, ಅಂದು ಎಷ್ಟು ಮಂದಿ ವಾಪಸ್ ಪಡೆಯಲಿದ್ದಾರೆ, ಎಷ್ಟು ಮಂದಿ ಅಂತಿಮವಾಗಿ ಕಣದಲ್ಲಿ ಉಳಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಗೊಂದಲಕ್ಕೆ ತೆರೆ:
ಅರಕಲಗೂಡು ಕ್ಷೇತ್ರದಿಂದ ಬಿಜೆಪಿ ಅಥವಾ ಪಕ್ಷೇತರ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದ ಎಂ.ಟಿ.ಕೃಷ್ಣೇಗೌಡ ಅವರ ನಾಮಪತ್ರ ತಿರಸ್ಕöÈತಗೊಂಡಿದೆ.
ಕಾAಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣೇಗೌಡ ಅವರು ಅಂತಿಮ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಂತರ ಬಿಜೆಪಿ ಅಭ್ಯರ್ಥಿ ಎಂದು ನಾಮಪತ್ರ ಹಾಕಿದ್ದರು. ಈ ವೇಳೆ ಸಿ ಫಾರಂ ಜೆರಾಕ್ಸ್ ಪ್ರತಿ ಮಾತ್ರ ಸಲ್ಲಿಸಿದ್ದರು. ಪರಿಶೀಲನೆ ವೇಳೆ ಬಿಜೆಪಿಯಿಂದ ಬಿ ಫಾರಂ ಸಿಗದ ಕಾರಣ ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಿದ್ದಾರೆ. ಇದರಿಂದಾಗಿ
ಅಧಿಕೃತ ವಾಗಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಯೋಗಾ ರಮೇಶ್, ಕಮಲ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿ ನಾಯಕರ ಮನವೊಲಿಸಿ ಸಿ ಫಾರಂ ತರುವ ವಿಶ್ವಾಸದಿಂದ ಬಿಜೆಪಿ ಹೆಸರು ನಮೂದಿಸಿ ಕೃಷ್ಣೇಗೌಡ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ಪ್ಲಾನ್ ಫಲಪ್ರದವಾಗಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮಾತ್ರ ಕಣದಲ್ಲಿ ಉಳಿಯಲಿದ್ದಾರೆ. ನಾಮಪತ್ರ ಸಲ್ಲಿಕೆ ಕಡೆಯ ದಿನ ತೆರೆಮರೆಯಲ್ಲಿ ನಡೆದಿದ್ದ
ಅಚ್ಚರಿಯ ರಾಜಕೀಯ ಬೆಳವಣಿಗೆ ಹಾಗೆಯೇ ತಣ್ಣಗಾಗಿದೆ.

ಜೆಸಿಬಿ ಮೂರು ಪಕ್ಷದಿಂದ ಮತದಾರರನ್ನ ದಾರಿತಪ್ಪಿಸುವ ಕೆಲಸ


ಏಪ್ರಿಲ್ ತಿಂಗಳಲ್ಲಿ ಹಾಸನಕ್ಕೆ ಅರವಿಂದ ಕೇಜ್ರಿವಾಲ್
ಹಾಸನ: ಹಣದ ಆಮಿಷಗಳನ್ನು ಹೊಡ್ಡುವ ಮೂಲಕ ಮೂರು ಪಕ್ಷಗಳು ಮತದಾರರನ್ನ ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಆದ್ರೆ ಎಎಪಿ ಪಕ್ಷವು ಸೂರು ಇಲ್ಲದ ಪ್ರತಿಯೊಬ್ಬರಿಗೂ ನಿವೇಶನ ನೀಡಲು ಗ್ಯಾರಂಟಿ ಕಾರ್ಡ್ ನೀಡಲಾಗುತ್ತಿದ್ದು, ಏಪ್ರಿಲ್ ಇದೆ ತಿಂಗಳಲ್ಲಿ ಹಾಸನಕ್ಕೆ ದೆಹಲಿ ಮುಖ್ಯಮಂತ್ರಿ ಹಾಗೂ ನಮ್ಮ ನಾಯಕರಾದ ಅರವಿಂದ್ ಕೇಜ್ರಿವಾಲ್ ಆಗಮಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಮತದಾರರು ಸ್ವಯಂ ಪ್ರೇರಿತವಾಗಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಾಸನ ಕ್ಷೇತ್ರದ ಅಭ್ಯರ್ಥಿ ಅಗಿಲೆ ಯೋಗೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಎಎಪಿ ಪಕ್ಷದಿಂದ ಹಾಸನ ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಾಗಿದೆ. ಚುನಾವಣೆಯಲ್ಲಿ ಜನರಿಗೆ ತಿಳುವಳಿಕೆ ನೀಡಲು ನಿರ್ಧರಿಸಿದ್ದೇವೆ. ಜೆಸಿಬಿ ಎಂದು ಕರೆಯುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳು ಚುನಾವಣೆಯಲ್ಲಿ ಜನರನ್ನು ಹಾದಿ ತಪ್ಪಿಸುವ ಮೂಲಕ ಹಣದ ಹೊಳೆಯನ್ನು ಹರಿಸಿ ಮತವನ್ನು ಖರೀದಿ ಮಾಡಲು ಹೊರಟಿದ್ದಾರೆ. ಈ ಪಕ್ಷಗಳಲ್ಲಿ ಯಾವುದೇ ಅಧಿಕಾರಕ್ಕೆ ಬಂದ ಮೇಲೆ ಲೂಟಿ ಮಾಡಬೇಕು, ಜನರ ತೆರಿಗೆ ಹಣವನ್ನು ಇವರು ಸಂಪಾದನೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಲ್ಲಿ ಜನರ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಗಂಬೀರವಾಗಿ ಆರೋಪಿಸಿದರು. ನಾಮಪತ್ರ ಸಲ್ಲಿಸಲು ಒಂದೊAದು ಪಕ್ಷದವರು ಸುಮಾರು 5 ರಿಂದ 6 ಕೋಟಿ ವೆಚ್ಚವನ್ನು ಮಾಡುತ್ತಿದ್ದಾರೆ. ಆನರನ್ನು ಅಭಿಮಾನಕ್ಕೆ ಕರೆದಿದ್ದರೇ ಅದೊಂದು ದೊಡ್ಡ ಸಾಧನೆ. ಆದರೇ ಒಂದು ಬಾರಿ ಬಂದ ಜನರೇ ಮೂರು ಪಕ್ಷಗಳ ನಾಮಪತ್ರ ಸಲ್ಲಿಸುವಾಗ ಆಗಮಿಸಿದ್ದರು. ಈಲ್ಲೆಯ ಚುನಾವಣಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ನೇರವಾಗಿ ಹಣವನ್ನು ಖರ್ಚು ಮಾಡಲಾಗುತ್ತಿದ್ದರೂ ಮತ್ತು ಮತದಾರರಿಗೆ ಮಂಕುಬೂದಿ ಎರೆÀಚುತ್ತಿದ್ದರೂ ಕೂಡ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇವರ ನಂಬಿಕೊAಡು ನ್ಯಾಯಸಮ್ಮತವಾದಂತಹ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕೆಂಬುದು ಒಂದು ಯಕ್ಷಾ ಪ್ರಶ್ನೆಯಾಗಿದೆ. ಈ ಹಿಂದೆ ಬಿಜೆಪಿಯವರು ಲಕ್ಷ್ಮಿ ಪೋಟೊವನ್ನು ಬೆಳ್ಳೆ ಪೋಟೊ ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳಿ ಆಮಿಷ ತೋರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ಹೇಳಲಾಗಿತ್ತು. ಆದರೇ ಮಾಹಿತಿಯೇ ಬಂದಿರುವುದಿಲ್ಲ ಎಂದಿದ್ದರು. ಮಾಹಿತಿ ಕೊಟ್ಟರೂ ಕೂಡ ಬಿಜೆಪಿಯವರಿಗೆ ಹೆದರಿ ಚುನಾವಣಾಧಿಕಾರಿಗಳು ಹಿಂದೆ ಸರಿದು ಯಾವ ರೀತಿ ಕ್ರಮ ಕೈಗೊಂಡಿರುವುದಿಲ್ಲ. ಈ ಚುನಾವಣಾಧಿಕಾರಿಗಳ ಮೇಲೆ ಯಾವ ನಂಬಿಕೆ ಇರುವುದಿಲ್ಲ. ಈ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಕೂಡ ಸಲ್ಲಿಸಿದ್ದೇವೆ ಎಂದು ಹೇಳಿದರು.
ನನ್ನನ್ನು ಜನರು ಸೇವಕನಾಗಿ ಆಯ್ಕೆ ಮಾಡಿಕೊಂಡು ನಾವು ಅಧಿಕಾರಕ್ಕೆ ಬಂದರೇ ಜನರಿಗೆ ಏನೆನು ಕೊಡುತ್ತೀವಿ ಎಂಬುದನ್ನು ಪ್ರಣಾಳಿಕೆಗಿಂತ ಅದನ್ನು ಗ್ಯಾರಂಟಿ ಕಾರ್ಡ್ ಮಾಡಿದ್ದೇವೆ. ಈ ವಿಚಾರವನ್ನು ಜನರಿಗೆ ಹೇಳುವ ಮೂಲಕ ನಾವು ಪ್ರತಿಕುಟುಂಬವನ್ನು ತಲುಪು ಕೆಲಸ ಮಾಡಿದ್ದೇವೆ. ನನ್ನ ಸೂರು ನನ್ನ ಕನಸು ಯೋಜನೆ ಮೂಲಕ 25 ಸಾವಿರ ಕುಟುಂಬಕ್ಕೆ ನಿವೇಶನವನ್ನು ಕೊಡಲಾಗುವುದು. ಸ್ವಂತ ಸೂರಿನಡಿ ಪ್ರತಿಯೊಬ್ಬರೂ ವಾಸ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ. 3 ಸಾವಿರಕ್ಕಿಂತ ಅಧಿಕಭೂಮಿ ಸರಕಾರಿ ಹೆಸರಿನಲ್ಲಿದ್ದು, ಈ ಭೂಮಿಯನ್ನು ಕೆಲವರು ಉಳುಮೆ ಮಾಡುತ್ತಿದ್ದು, ಈಗಾಗಲೇ ಪ್ರಭಾರಿಗಳು, ಕೆಲ ಜನಪ್ರತಿನಿಧಿಗಳು ಅದನ್ನ ದುರುಪಯೋಗ ಮಾಡಲು ಆರಂಭಿಸಿದ್ದು, ಆ ಕೆಲಸ ಆಗಬಾರದು. ಅಂತವರ ಕೈಲಿ ಅಧಿಕಾರ ಕೊಡಬಾರದು ಎಂದು ತಾಕೀತು ಮಾಡಿದರು. ಚುನಾವಣೆ ದಿನಾಂಕದೊಳಗೆ 75 ಸಾವಿರ ಮತದಾರರನ್ನು ಭೇಟಿ ಮಾಡುವ ಕೆಲಸ ಮಾಡಲಾಗಿದೆ. ನಾವು ಜೆಡಿಎಸ್ ಇತರೆ ಪಕ್ಷದ ತರ ಯಾವ ಶಕ್ತಿ ಪ್ರದರ್ಶನ ಮಾಡುವುದಿಲ್ಲ. ಆದರೇ ಎಎಪಿ ಪಕ್ಷದ ಅರವಿಂದ್ ಕೇಜ್ರಿವಾಲ್ ಏಪ್ರಿಲ್ ತಿಂಗಳ ಒಳಗೆ ಹಾಸನಕ್ಕೆ ಆಗಮಿಸುತ್ತಿದ್ದು, ಗ್ಯಾರಂಟಿ ಕಾರ್ಡ್ ಪಡೆದಿರುವ ಒಬ್ಬೊಬ್ಬರೂ ನಮ್ಮ ಪಕ್ಷದ ಮೆರವಣಿಗೆಗೆ ಬರುವುದಾಗಿ ಹೇಳಿದ್ದು, ಯಾವ ಹಣ ಬೇಡ ಎಂದು 25 ಸಾವಿರ ಜನರು ಸ್ವಯಂ ಪ್ರೇರಿತವಾಗಿ ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಇಂದ್ರೇಶ್, ಗ್ರಾಮಾಂತರ ಅಧ್ಯಕ್ಷ ಮಂಜುನಾಥ್, ಕುಮಾರ್ ಇತರರು ಉಪಸ್ಥಿತರಿದ್ದರು

ಯಾವುದೇ ಪಕ್ಷ, ವ್ಯಕ್ತಿ, ಅಭ್ಯರ್ಥಿ ಬಗ್ಗೆ ಮಾತಾಡಲ್ಲ
ನನ್ನವಧಿಯ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುವೆ: ಶಾಸಕ ಪ್ರೀತಂ ಗೌಡ ಸಾಫ್ಟ್


ಹಾಸನ: ನೆನ್ನೆ ವಿಚಾರ ನೆನ್ನೆಗೆ, ಇವತ್ತಿನ ವಿಚಾರ ಇವತ್ತಿಗೆ ಇನ್ಮುಂದೆ ಬೇರೆ ಪಕ್ಷಗಳ, ವ್ಯಕ್ತಿಗಳ ಹಾಗೂ ಅಭ್ಯರ್ಥಿಗಳ ಕುರಿತು ನಾನು ವಿರೋಧವಾಗಿ ಯಾವುದು ಮಾತನಾಡುವುದಿಲ್ಲ. ನನ್ನವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನ ಮುಂದಿಟ್ಟುಕೊಂಡು ಮತದಾರರ ಬಳಿ ಹೋಗುವುದಾಗಿ ಕ್ಷೇತ್ರದ ಶಾಸಕ ಹಾಗೂ ಅಭ್ಯರ್ಥಿ ಪ್ರೀತಂ ಜೆ. ಗೌಡ ಹೇಳಿಕೆ ಕೊಡುವ ಮೂಲಕ ಸಾಫ್ಟ್ ಮಾತುಗಳನ್ನಾಡಿದರು.
ನಗರದ ಬಸಟ್ಟಿಕೊಪ್ಪಲು ಇತರೆ ಭಾಗಗಳಲ್ಲಿ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡುವಾಗ ಮಾಧ್ಯಮದೊಂದಿಗೆ ಮಾತನಾಡಿದ ಅವರು,
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಬರುವುದು, ಹೋಗುವುದು ಸಹಜ. ಆದರೇ ನಾನು ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಜನರ ಜೊತೆ ನಿಂತಿದ್ದೆನು. ಹಾಸನ ತಾಲೂಕಿನಲ್ಲಿ 25 ವರ್ಷದಲ್ಲಿ ಯಾವೆಲ್ಲಾ ಅಭಿವೃದ್ಧಿಯನ್ನು ಕಾಣಬೇಕಿತ್ತು ಆ ಅಭಿವೃದ್ಧಿ ಮಾಡಿದ್ದಾನೆ. ಒಬ್ಬ ಯುವಕ ಅಂತ ನಮ್ಮ ಕೆಲಸ ನೋಡಿ ಎಲ್ಲರೂ ಆಶೀರ್ವಾದ ಮಾಡ್ತಿದ್ದಾರೆ. ಈ ಜನ ಬೆಂಬಲ ನೋಡಿ ಒಂದು ಮಾತನ್ನು ಹೇಳ್ತಿನಿ, ಯಾರೇ ಚುನಾವಣೆ ರಾಜಕಾರಣದಲ್ಲಿ ಇರುವವರಿಗೆ ಅವರ ಚುನಾವಣೆ ಸಂದರ್ಭದಲ್ಲಿ ಏನು ಸಪೋರ್ಟ್ ಬೇಸ್ ಎಸ್ಟಾಬ್ಲಿಷ್ ಆಗುತ್ತೆ ಆಗ ಮಾತ್ರ ನಾವು ಮಾಡಿರುವ ಕೆಲಸದ ಸಾರ್ಥಕತೆ ಅರ್ಥ ಆಗುತ್ತದೆ ಎಂದರು. ಹಾಸನದಲ್ಲಿ ಜೆಡಿಎಸ್ ಬೃಹತ್ ರೋಡ್ ಶೋ ಹಾಗೂ ದಳಪತಿಗಳು ಭಾಗಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ನಾಮಿನೇಷನ್ ಪ್ರಕ್ರಿಯೇ ಈಗಾಗಲೇ ಮುಗಿದಿದೆ. ನಾನೊಂದು ಶಪಥವನ್ನು ಮಾಡಿದ್ದೀನಿ, ವಿರೋಧ ಪಕ್ಷದ ಅಭ್ಯರ್ಥಿಯ ಹೆಸರು ಹೇಳದ ರೀತಿಯಲ್ಲಿ ಯಾವ ಮುಖಂಡರ ಹೆಸರನ್ನು ತೆಗೆದುಕೊಳ್ಳದೆ ನಮ್ಮ ಚುನಾವಣೆ ಮಾಡುತ್ತೇನೆ. ಇಲ್ಲಿಯವರೆಗೂ ನಾಮಿನೇಷನ್ ಇತ್ತು ಯಾರು ಅಭ್ಯರ್ಥಿ ಆಗ್ತಾರೆ ಏನು ಅಂತ ಮಾತನಾಡಬೇಕಿತ್ತು ನಾನು ಒಂದು ಶಪಥ ಮಾಡಿದ್ದೀನಿ ಅಭ್ಯರ್ಥಿ ಹೆಸರಾಗಲಿ, ನನ್ನ ವಿರೋಧ ಪಕ್ಷದ ಯಾವುದೇ ಮುಖಂಡರ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿ ಅಂತ ಕೈಮುಗಿದು ಕೇಳಿ ಕೊಳ್ಳುವ ತೀರ್ಮಾನಕ್ಕೆ ಬಂದಿದ್ದೀನಿ. ನಾನು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ, ಯಾವುದೇ ಅಭ್ಯರ್ಥಿ, ಯಾವುದೇ ಪಕ್ಷದ ಬಗ್ಗೆ ಮಾತನಾಡಲ್ಲ ಎಂದು ಸಾಫ್ಟ್ ಆಗಿ ಉತ್ತರಿಸಿದ ಅವರು, ಪ್ರೀತಂಗೌಡ ಕೆಲಸ ಮಾಡಿದ್ದಾನೆ ಕಣ್ಮುಂದೆ ಇದೆ. ಆಶೀರ್ವಾದ ಮಾಡಿ ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಅಂತ ಕೈಮುಗಿದು ಮತದಾರರಲ್ಲಿ ಪ್ರಾರ್ಥನೆ ಮಾಡ್ತಿನಿ ಎಂದು ಹೇಳಿದರು.
ಹೊಳೆನರಸೀಪುರದಲ್ಲಿ ಮೊದಲು ನಾಮಪತ್ರ ಸಲ್ಲಿಸುವುದಾಗಿ ಹೇಳಿ ನಂತರ ಸಲ್ಲಿಸದ ವಿಚಾರವಾಗಿ ಮಾತನಾಡುತ್ತಾ,
ನಿನ್ನೆಗೆ ನಾಮಿನೇಷನ್ ಮುಗಿತು. ನಾನು ಇನ್ನೇನು ಮಾತನಾಡುವುದಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾನು. ನನಗೆ ಜನರು ಮತ ಹಾಕಿ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಅಂತ ಮಾತ್ರ ಕೇಳಿಕೊಳ್ಳುತ್ತಿನಿ. ನಿನ್ನೆ ನಿನ್ನೆಗೆ, ಇವತ್ತಿಂದ ಚುನಾವಣೆ ಪ್ರಕ್ರಿಯೆಯ ಬೆಳವಣಿಗೆ ಆಗಿದೆ. ಮುಗಿದ ಅಧ್ಯಾಯದ ಬಗ್ಗೆ ಇನ್ನು ಮಾತನಾಡಲ್ಲ. ಕೈಮುಗಿದು ಆಶೀರ್ವಾದ ಮಾಡಿ ಅಂತ ಕೇಳ್ಕತಿನಿ ಅಷ್ಟೇ ಎಂದು ಹೇಳಿಕೆ ಕೊಡುವ ಮೂಲಕ ಜೆಡಿಎಸ್ ದಳಪತಿಗಳ, ನಾಯಕರ ಟೀಕೆಗಳಿಗೆ ಪ್ರೀತಂ ಗೌಡ ಅದೆಕೋ ಸಾಫ್ಟ್ ಆಗಿ ಮಾತನಾಡುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here