ಹಾಸನ ಸೇರಿ ರಾಜ್ಯದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ✅

    0

    ಹಾಸನ ಡಿ.20.(ಹಾಸನ್_ನ್ಯೂಸ್):- ಭಾರತ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯ ವಿವಿಧಡೆ 10.904 ಕೋಟಿ ವೆಚ್ಚದಲ್ಲಿ ನಡೆಯುವ 1.197 ಕಿ.ಮೀ ಉದ್ದದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆಇಂದು ಡಿಜಿಟಲ್ ಫ್ಲಾಟ್ ಫಾರ್ಮ್ ಮೂಲಕ ಚಾಲನೆ ದೊರೆತಿದೆ.


         ವಿಡಿಯೊ ಸಂವಾದ ಮೂಲಕ ನಡೆದ ವಿಭಿನ್ನ ಕಾರ್ಯಕ್ರಮದಲ್ಲಿ ಬೆಂಗಳೂರು – ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಎನ್.ಎಚ್75ರ  237 ಕಿ.ಮೀ ನಿಂದ 263 ಕಿ.ಮೀ ವರೆಗೆ ತಡೆಗೋಡೆ, ಶೋಲ್ಡರ್ ನಿರ್ಮಾಣ ಕಾಮಗಾರಿ ಸೇರಿದಂತೆ 33 ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

         ವಿಡಿಯೋ ಸಂವಾದದಲ್ಲಿ ಕೇಂದ್ರ ಭೂ ಸಾರಿಗೆ  ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರು,  ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಸಚಿವರಾದ ಸದಾನಂದಗೌಡ, ಸಂಸದೀಯ ವ್ಯವಹಾರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವರಾದ ಪ್ರಲ್ಹಾದ್ ಜೋಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರಾದ ವಿ.ಕೆ ಸಿಂಗ್, ಉಪಮುಖ್ಯಮಂತ್ರಿಗಳಾದ ಸಚಿವ ಗೋವಿಂದ ಕಾರಜೋಳ ಮತ್ತು ಲಕ್ಷಣ್ ಸವದಿ ಹಾಗೂ ಸಿ.ಎನ್ ಅಶ್ವತ್ ನಾರಾಯಣ್ ಮತ್ತಿತರ ಸಚಿವರು ಪಾಲ್ಗೊಂಡಿದ್ದರು.

    LEAVE A REPLY

    Please enter your comment!
    Please enter your name here