ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿದ ಪದ್ಮಶ್ರೀ ಹಾಜಬ್ಬಾ

0

ಇಂದು ಹಾಸನದ ಕೆಆರ್ ಪುರಂ ಬಡಾವಣೆಯಲ್ಲಿರುವ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಅಕ್ಷರ ಸಂತ ಖ್ಯಾತ ಸಮಾಜ ಸೇವಕರು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಶ್ರೀ ಹರೇಕಳ ಹಾಜಬ್ಬಾ ಅವರು ಆಗಮಿಸಿದ್ದರು.

ಆರೋಗ್ಯ ಇದ್ದವನಿಗೆ ಭರವಸೆ ಇರುತ್ತದೆ, ಭರವಸೆ ಇದ್ದವರ ಬಳಿ ಎಲ್ಲವೂ ಇರುತ್ತದೆ. ಎಂಬುದಾಗಿ ಥಾಮಸ್ ಕಾರ್ಲೈ ಎಂಬವವರು ಹೇಳಿದಂತೆ ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯ ಸಂಪತ್ತು ಎಂಬುದಾಗಿದೆ. ಹಾಗಾಗಿ ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವ ಸಂಸ್ಥೆಯಾದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಶೇಷವಾಗಿ ನಿರ್ದೇಶಕರಾದ ಶ್ರೀಮತಿ ಸೌಮ್ಯ ಮಣಿ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮುಖ್ಯ ಅತಿಥಿಗಳಾದ ಶ್ರೀ ಹರೇಕಳ ಹಾಜಬ್ಬ ರವರು ತಮ್ಮ ಭಾಷಣದಲ್ಲಿ ನಾನೊಬ್ಬ ಸಾಧಾರಣ ವ್ಯಕ್ತಿಯಾಗಿದ್ದು ಕಿತ್ತಲೆಹಣ್ಣನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ಒಬ್ಬ ವಿದೇಶದ ವ್ಯಕ್ತಿ How much cost for orange ಎಂದಾಗ ಉತ್ತರ ತಿಳಿಸಲು ತಿಳಿಯದೆ ಬೇಜಾರಾಗಿ ಅಂದೇ ನಿರ್ಧರಿಸಿ ಅಂದೇ ತಮ್ಮ ಊರಿನ ಮಕ್ಕಳಿಗೆ ಹೀಗಾಗದಿರಲಿ ಅವರೆಲ್ಲರೂ ವಿದ್ಯಾವಂತರಾಗಲಿ ಎಂದು ಶಾಲೆ ಕಟ್ಟಿಸಿದೇ ಎಂದು ತಿಳಿಸಿದರು. ಪ್ರಸ್ತುತ ಶಾಲೆಯಲ್ಲಿ ನೂರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು.

ವಿದ್ಯಾಭ್ಯಾಸದ ಜೊತೆಗೆ ಆರೋಗ್ಯ ವಿಚಾರವು ಮುಖ್ಯವಾಗಿದ್ದು ಹಾಸನ ಮಣಿ ಸ್ಪೆಷಲಿಟಿ ಆಯೋಜಿಸಿರುವ ಉಚಿತ ಆರೋಗ್ಯ ಶಿಬಿರದ ಕಾರ್ಯವೈಖರಿಯನ್ನು ಶಾಗ್ಲಿಸಿದರು.

ನಂತರ ಮಾತನಾಡಿದ ನಿರ್ದೇಶಕರು ಮತ್ತು ವೈದ್ಯರಾದ Dr ಸೌಮ್ಯ ಮಣಿ ರವರು ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಸ್ತನ ಕ್ಯಾನ್ಸರ್ ಎಂಬ ಮಾರಕ ರೋಗವನ್ನು ತಡೆಗಟ್ಟಬಹುದು ಎಂಬುದಾಗಿ ಕಿವಿಮಾತನ್ನು ತಿಳಿಸಿದರು. ಮತ್ತು ಪ್ರಸ್ತುತ ಉಚಿತ ಆರೋಗ್ಯ ಕಾರ್ಯಕ್ರಮ ತಿಂಗಳಿಗೊಮ್ಮೆ ನಾಲಕ್ಕನೆ ಶನಿವಾರದಂದು ಉಚಿತವಾಗಿ ಏರ್ಪಡಿಸಲಾಗಿದೆ ಎಂದು, ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಅರ್ಹ ಫಲಾನುಭವಿಗಳು ಪಡೆಯಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ನಿರ್ದೇಶಕರು ಮತ್ತು ವೈದ್ಯರಾದ Dr ಯತೀಶ್ ರವರು, Dr ದಿನೇಶ್ ಅವರು, Dr ಬಿಂಬ ಕಿರಣ್ ರವರು, Dr ಸಿದ್ದರಾಮು ರವರು Dr ಮದುರ ರವರು ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ವಿಶೇಷವಾಗಿ ಕಿತ್ತಲೆ ಹಣ್ಣನ್ನು ಹಂಚಲಾಯಿತು. ನಂತರ ಆರೋಗ್ಯ ತಪಾಸಣಾ ಶಿಬಿರ ಪ್ರಾರಂಭಿಸಲಾಯಿತು.

LEAVE A REPLY

Please enter your comment!
Please enter your name here