ರಷ್ಯಾದ ಕಝಕಿಸ್ತಾನದಲ್ಲಿ ಏಷ್ಯನ್‌ ಪ್ಯಾರಾ ಸಿಟ್ಟಿಂಗ್ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಹಾಸನ ಜಿಲ್ಲೆಯ ಹಲವರು

0

ಹಾಸನ/ರಷ್ಯಾ : ಭಾರತದ ಪ್ಯಾರಾ ಸಿಟ್ಟಿಂಗ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ರಷ್ಯಾದ ಕಝಕಿಸ್ತಾನದಲ್ಲಿ ಜುಲೈ 3ರಿಂದ 10ರವರೆಗೆ ನಡೆಯಲಿರುವ ಏಷ್ಯನ್‌ ಪ್ಯಾರಾ ಸಿಟ್ಟಿಂಗ್ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಹಾಸನ ನಗರದ , ಇನ್ಫೆಂಟ್ ನಿಶಾಂತ್

ಆಯ್ಕೆಯಾಗಿದ್ದು ಪುರುಷ ಮತ್ತು ಮಹಿಳೆಯರ ತಂಡಗಳು ಭಾಗವಹಿಸಲಿದ್ದು, ಪುರುಷರ ತಂಡದ ನಾಯಕನಾಗಿ ಕರ್ನಾಟಕದ ಇನ್ಫೆಂಟ್ ನಿಶಾನ್, ಉಪ ನಾಯಕರಾಗಿ ಹರಿಯಾಣದ ಸಂಜಯ್ ಆಯ್ಕೆಯಾಗಿದ್ದಾರೆ.
ಲಂಡನ್ ಪ್ಯಾರಾ ಒಲಿಂಪಿಕ್‌ ರಜತ ಪದಕ ವಿಜೇತ ಎಚ್.ಎನ್. ಗಿರೀಶ್ ತಂಡದ ಸದಸ್ಯರಾಗಿರುತ್ತಾರೆ. ಮಹಿಳೆಯರ ತಂಡದ ನಾಯಕಿಯಾಗಿ ರಾಜಸ್ಥಾನದ ಪಿಂಕಿ ಮತ್ತು

ಉಪ ನಾಯಕಿಯಾಗಿ ಕರ್ನಾಟಕದ ಸರಸ್ವತಿ , ಹಾಸನದ ಕಮಲಾಕ್ಷಿ ಇದ್ದಾರೆ . ತಂಡದ ಮುಖ್ಯ ತರಬೇತುದಾರರಾಗಿ ಎಚ್. ಚಂದ್ರಶೇಖರ ಹಾಗೂ ತರಬೇತುದಾರರಾಗಿ ಡಾ. ಬಿ. ಆನಂದ್ ಮತ್ತು ನಾಗೇಶ್ ಕಾರ್ಯನಿರ್ವಹಿಸುತ್ತಿದ್ದಾರೆ sportsnewshassan

LEAVE A REPLY

Please enter your comment!
Please enter your name here