ಅರಸೀಕೆರೆ , ಹೊಳೆನರಸೀಪುರ ಸಾರ್ವಜನಿಕರು ಗಮನಿಸಿ‌ ನಿಮ್ಮ ಈ ಕೆಳಕಂಡ ಏರಿಯಾಗಳಲ್ಲಿ ನಾಳೆ ಕರೆಂಟ್ ಇರಲ್ಲ

0

ನಾಳೆ ವಿದ್ಯುತ್ ವ್ಯತ್ಯಯ

ಅರಸೀಕೆರೆ: ಸೆಸ್ಟ್ ಆರಸೀಕೆರೆ ಉಪವಿಭಾಗ 110/11 ಕೆ.ವಿ. ವಿ.ವಿ. ಕೇಂದ್ರದಿಂದ ಅರಸೀಕೆರೆ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಕಂಬಗಳನ್ನು ಅಳವಡಿಸಲು ಹಾಗೂ ಇತರೆ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಮಾ. 6ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ವಿ.ವಿ. ಕೇಂದ್ರದಿಂದ ವಿತರಣೆಯಾಗುವ ಆರಸೀಕೆರೆ ನಗರ ಪ್ರದೇಶದ ಮಲ್ಲೇಶ್ವರನಗರ, ಕಾಳನಕೊಪ್ಪಲು, ಗೊಲ್ಲರಹಟ್ಟಿ, ಶ್ರೀನಗರ, ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗ, ಲಕ್ಷ್ಮೀಪುರ, ಹೆಂಜಗೊಂಡನಹಳ್ಳಿ, ಎಪಿಎಂಸಿ ಯಾರ್ಡ್, ಶಿವಾನಂದ ಕಾಲೋನಿ, ಜೆ.ಸಿ.ಆಸ್ಪತ್ರೆ, ಬಿ.ಎಚ್.ರಸ್ತೆ, ಜಾಜೂರು ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಪಿ. ಜಯಪ್ಪ ತಿಳಿಸಿದ್ದಾರೆ.

ಹೊಳೆನರಸೀಪುರದಲ್ಲಿ ವಿದ್ಯುತ್ ವ್ಯತ್ಯಯ

ಹಾಸನ : ಹೊಳೆನರಸೀಪುರ ತಾಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ 66/11 ಕೆ.ವಿ ಗಂಗೂರು (ಕಳ್ಳಿಕೊಪ್ಪಲು) ವಿದ್ಯುತ್ ಕೇಂದ್ರದಿಂದ ಹಾಲಿ ಇರುವ 66 ಕೆ.ವಿ. ಹಾಸನ-ಅರಕಲಗೂಡು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ66 ಕೆ.ವಿ ವಿದ್ಯುತ್ ಮಾರ್ಗವನ್ನು ಲಿಲೋ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ 66/11 ಕೆ.ವಿ ಅರಕಲಗೂಡು, ದೊಡ್ಡಮಗ್ಗೆ, ಮಲ್ಲಿಪಟ್ಟಣ, ಶನಿವಾರಸಂತೆ, ಯಸಳೂರು, ಹೆತ್ತೂರು ಮತ್ತು ಅಡಿಕೆಬೊಮ್ಮನಹಲ್ಲಿ ಎಲ್.ಐ.ಎಸ್ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಸುತ್ತಮುತ್ತಲ ಗ್ರಾಮಗಳಿಗೆ ಮಾ.5 ಮತ್ತು 06 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ಹಾಸನ ಕ.ವಿ.ಪ್ರ.ನಿ.ನಿ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here