Breaking News

ಪ್ರಜಾ ಧ್ವನಿ ಯಾತ್ರೆಯಲ್ಲಿ ಹಾಸನ ಹಲವು ಪ್ರಬಲ ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ

By Hassan News

January 21, 2023

ಹಾಸನ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ವಿವಿಧ ನಾಯಕರ ಬ್ಯಾನರ್, ಬಂಟಿಂಗ್ಸ್ ಮತ್ತು ಫ್ಲೆಕ್ಸ್ಗಳೇ ತುಂಬಿ ಹೋಗಿತ್ತು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ದ್ರುವನಾರಾಯಣ್ ಸೇರಿದಂತೆ ಮಾಜಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಹೆಚ್.ಎಂ.ರೇವಣ್ಣ ಸೇರಿದಂತೆ ಹತ್ತಾರು ಕಾಂಗ್ರೆಸ್ ಮುಖಂಡರು ಹಾಸನ ಜಿಲ್ಲೆಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡರು . ಮುಖಂಡರು ಭಾಷಣ ಮಾಡುವಾಗ ಶಿಸ್ತು ಕಾಯ್ದುಕೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು ಸಿದ್ದು-ಡಿಕೆಶಿ ಪರ ಘೋಷಣೆ ಕೂಗದಂತೆ ವಾರ್ನಿಂಗ್ , ಮುಖಂಡರು ವೇದಿಕೆಗೆ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ತಮ್ಮ ಪರವಾಗಿ ಘೋಷಣೆಗಳನ್ನು ಮಾಡದಂತೆ

ಟಿಕೆಟ್ ಆಕಾಂಕ್ಷಿಗಳಿಗೆ ಸೂಚಿಸಲಾಗಿತ್ತು . ಜಿಲ್ಲಾ ಕಾಂಗ್ರೆಸ್ ಸಮಿತಿ[ಡಿಸಿಸಿ] ನೂತನ ಅಧ್ಯಕ್ಷ ಇ.ಎಚ್.ಲಕ್ಷ್ಮಣ್ ‘ಇತಿಹಾಸ ನಿರ್ಮಿಸುವ ‘ಪ್ರಜಾಧ್ವನಿ ಯಾತ್ರೆ’ಗೆ ಡಿಸಿಸಿ ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು ಎನ್ನಲಾಗಿದೆ ,  ಮುಂಬರುವ ವಿಧಾನಸಭಾ ಚುನಾವಣೆಯ ಮುನ್ನ ಈ ಯಾತ್ರೆ ಮಹತ್ವದ್ದಾಗಿತ್ತು , ಅರಕಲಗೂಡು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ

ಕೃಷ್ಣೇಗೌಡ, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ಬೇಲೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಬಿ.ಶಿವರಾಮು ಅವರ ಅಪಾರ ಬೆಂಬಲಿಗರು ರ್ಯಾಲಿಗೆ ಆಗಮಿಸಿ ತಮ್ಮ‌ಬೆಂಬಲಿಗರಿಂದ ಬಲ ಪ್ರದರ್ಶನ ನಡೆಯಿತು  . ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಬೆಂಗಳೂರು (ಗ್ರಾಮಾಂತರ) ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ್ ಎರಡು ಬಾರಿ ಹಾಸನಕ್ಕೆ ಭೇಟಿ ನೀಡಿ ಹಿರಿಯ ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಹಾಗೂ

ಕಾರ್ಯಕರ್ತರೊಂದಿಗೆ ಸಭೆ ನಡೆಸಿ ‘ಪ್ರಜಾಧ್ವನಿ ಯಾತ್ರೆ’ ಯಶಸ್ವಿಗೆ ಶ್ರಮಿಸುವಂತೆ ಸೂಚಿಸಿದ್ದರು. ಕುತೂಹಲದ ಸಂಗತಿಯೆಂದರೆ, ಯಾತ್ರೆಗೆ ಹೆಚ್ಚಿನ ಕಾರ್ಯಕರ್ತರನ್ನು ಕರೆತರುವ ಮೂಲಕ ಹಿರಿಯ ನಾಯಕರ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಲು ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ ಯಂತಿತ್ತು  , ಪ್ರಜಾಧ್ವನಿ ಯಾತ್ರೆ’ ಮೂಲಕ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತವರು ಜಿಲ್ಲೆ ಹಾಸನ ತಮ್ಮ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ನಾಯಕರು ತುದಿಗಾಲಲ್ಲಿ ನಿಂತಿದ್ದರು. ಆಂತರಿಕ ಸಂಘರ್ಷ ಬಯಲು , ಬಳಿಕ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ

ಕೈ ನಾಯಕರ ಆಂತರಿಕ ಸಂಘರ್ಷ ಬಯಲಾದಂತೆ ಕಾಣುತ್ತಿತ್ತು. ಏಕೆಂದರೆ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಬಗೆಗಿನ ಹಾಡು ಹಾಡದಂತೆ ಡಿ.ಕೆ.ಸುರೇಶ್ ಅವರು ತಡೆದ ಸನ್ನಿವೇಶವೊಂದು ಜರುಗಿತು. , ಸಿದ್ದರಾಮಯ್ಯ ಹಿಡಿದ ಬಡವರ ಕೈಯ್ಯಾ’ ಎನ್ನುವ ಹಾಡು ಹಾಡಲು ಮುಂದಾದರು. ಹಾಡಿನ ಮೊದಲ ಸಾಲು ಹಾಡುತ್ತಲೆ ಹಾಡು ನಿಲ್ಲಿಸುವಂತೆ ಡಿ.ಕೆ.ಸುರೇಶ್ ಸೂಚಿಸಿದರು. ಯಾವುದೇ ಒಬ್ಬ ವ್ಯಕ್ತಿಯ ಹಾಡು ಹಾಡದಂತೆ ತಾಕೀತು ಮಾಡಿದರು. ಡಿ.ಕೆ.ಸುರೇಶ್ ಅವರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ

ಕಲಾವಿದರು ಹಾಡನ್ನು ನಿಲ್ಲಿಸಬೇಕಾಯಿತು. ,ಹಾಸನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ , ಕೈಗೊಂಡಿರುವ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪ್ರಜಾಧ್ವನಿ ಯಾತ್ರೆ ಇಂದು ನಗರಕ್ಕೆ ಆಗ ಮಿಸಿತು. ಇದರ ಅ೦ಗವಾಗಿ ದೊಡ್ಡಮಂಡಿಗನಹಳ್ಳಿ ನಡೆದ ಬೃಹತ್ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಅವರು ಉದ್ಘಾಟಿಸುವ ಮೂಲಕ ಕಾಂಗೆಸ್ ಸಿದ್ದರಾಮಯ್ಯ ಮುಖಂಡರು ಮತ್ತು ಕಾರಕರ್ತರಲ್ಲಿ ಹೊಸ ಉತ್ಸಾಹ ತುಂಬಿದರು. , ಮೊದಲಿಗೆ ಬೆಂಗಳೂರಿನಿಂದ ಹಾಸನಕ್ಕೆ ರಾಜ್ಯದ ನಾಯಕರು ಪ್ರಜಾಧ್ವನಿ ಬಸ್‌ನಲ್ಲಿ ಆಗಮಿಸಿದರು. ಹಾಸನ ನಗರದ ಡೈರಿ ವೃತ್ತದಲ್ಲಿ ಮುಖಂಡರು ಮತ್ತು ಕಾರಕರ್ತರು ಅದ್ದೂರಿ ಸ್ವಾಗತ ಕೋರಿದರು. ಬಳಿಕ

ಡೈರಿ ವೃತ್ತದಿಂದ ತಣ್ಣೀರುಹಳ್ಳದವರೆಗೆ ಬೈಕ್‌ ರಾಲಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರಜಾಧ್ವನಿ ಯಾತ್ರೆಯ ಬಸ್‌ನೊಂದಿಗೆ ಸಾಗಿದರು. , ಈ ಸಂದರ್ಭದಲ್ಲಿ ತಣ್ಣೀರುಹಳ್ಳದಲ್ಲಿ ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಗಾತ್ರದ ಸೇಬಿನ ಹಾರವನ್ನು ರಾಜ್ಯದ ಪ್ರಮುಖ ನಾಯಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಕುವ ಮೂಲಕ ಅಭಿಮಾನ ಮೆರೆದರು. ಇನ್ನೂ ಮಹಿಳೆಯರು ಪೂರ್ಣ ಕುಂಭ ಸ್ವಾಗತವನ್ನು ಕೋರುವ ಮೂಲಕ ಗಮನ ಸೆಳೆದರು. ಇದಲ್ಲದೆ

ಈ ಯಾತ್ರೆಗೆ ಸ್ವಾಗತ ಕೋರಲು ವಿವಿಧ ಕಲಾತಂಡಗಳು, ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗು ನೀಡಿದರು. , ನಂತರ ಬಸ್‌ನಿಂದ ಇಳಿದ ರಾಜ್ಯನಾಯಕರು ವೇದಿಕೆಯತ್ತತೆರಳಿ ಆಸೀನರಾದರು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆದಿರುವ ಜನರತ್ತ ಕೈ ಬೀಸಿ ಕಾಂಗ್ರೆಸ್ ಬಾವುಟ ಹಾರಿಸಿದರು. ಇನ್ನೂ ನಗರದ ಸಮಾವೇಶದಲ್ಲಿ

ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ,ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ‌ ಮಾತನಾಡಿ, ನಲವತ್ತು ವರ್ಷದಿಂದ ರಾಜಕೀಯ ಮಾಡ್ತಿದಿನಿ, ನಾನು ಹಾಸನಕ್ಕೆ ಬಂದಾಗ ತೋರಿಸಿದ ಪ್ರೀತಿ, ಸ್ವಾಗತ ಅವಿಸ್ಮರಣೀಯ. ಇಲ್ಲಿ ಸೇರಿರುವ ಜನ ನೋಡಿದ್ರೆ ಒಂದು ದಿಕ್ಸೂಚಿ ಯಂತೆ ಕಾಣುತ್ತಿದೆ. ಒಬ್ಬ ಎಂಎಲ್‌ಎ ಇಲ್ಲದೆ ಇದ್ರು ಭವ್ಯವಾದ ಜನಸೇರಿ ಬದಲಾವಣೆ ತರುತ್ತೇವೆ ಎಂದು ನಮಗೆ ಶಕ್ತಿ ಕೊಡುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು. , ಬಿಜೆಪಿ ದೂರವಿಡಲು ನಮ್ಮ ಸ್ವಾಭಿಮಾನ ಬದಿಗೊತ್ತಿ,

ಬಿಜೆಪಿ ದೂರ ಇಡಿ, ಜನರನ್ನು ರಕ್ಷಣೆ ಮಾಡಿ ಎಂದು ಐದು ವರ್ಷಗಳ ಕಾಲ ಅಧಿಕಾರ ಮಾಡಿ ಅಂತ ಬೆಂಬಲ ಕೊಟ್ಟರೆ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು. , ಹಾಸನ ಜಿಲ್ಲೆಯ, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಕೈಮುಗಿದು ಕೇಳದಿನಿ ಏಳಕ್ಕೆ ಏಳು ಗೆಲ್ಲಿಸಿಕೊಡಬೇಕು. ನನ್ನ ಸಿದ್ದರಾಮಯ್ಯ ನಾಯಕತ್ವಕ್ಕೆ ನ ಬೆಂಬಲ ಕೊಡಬೇಕು ರಾಷ್ಟ್ರೀಯ ಅಧ್ಯಕ್ಷರಾಗಿ ಖರ್ಗೆ ಅವರು ಬಂದಿದ್ದಾರೆ, ಅವರಿಗೂ ಗೌರವ, ಶಕ್ತಿ ಕೊಡಬೇಕು, ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಮತ್ತು

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೂ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಈ ಬಾರಿ ಹಾಸನದಲ್ಲಿ ಕಾರ್ಯಕರ್ತರು ಹೆಚ್ಚು ಉತ್ಸಾಹ ಹೆಚ್ಚಾಗಿದೆ. ಮೊದಿ ದೇಶದ ಜನರಿಗೆ ಸುಳ್ಳು ಸುಳ್ಳು ಭರವಸೆ ನೀಡಿ ಭೇಮ ಬರುವಂತೆ ಮಾಡಿದ್ದಾರೆ ಆದರೆ 3 ಜನ ವಿರೋಧಿ ಕಾಯಿದೆ ಜಾರಿಗೆ ತಂದರು ನಂತರ ಉಗ್ರ ಹೋರಾಟ ಮಾಡಿದ ನಂತರ ಮತ್ತೆ ವಾಪಸ್ ಪಡೆದರು ಎಂದು ಟೀಕಿಸಿದರು. , ಈ ಸರ್ಕಾರ ರೈತರನ್ನು

ನಾಶಮಾಡುವ ಮಟ್ಟಕ್ಕೆ ಹೋಗಿದ್ದಾರೆ ಎಂದ ಸಿದ್ದರಾಮಯ್ಯ ಅವರು, ನಾವು ಅಧಿಕಾರಕ್ಕೆ ಬಂದರೆ ಒಂದು ಲಕ್ಷ ರೂಪಾಯಿ ಸಾಲ ಮನ್ನ ಮಾಡುತ್ತಾನೆ ಎಂದು ಹೇಳಿದರು ಆದರೆ ಕೇಂದ್ರ ಸರ್ಕಾರ ಮಾಡಲಿಲ್ಲ ಮೊದಿ ಅಧಿಕಾರಕ್ಕೆ ಬಂದು 9ವರ್ಷ ಆಗಿದೆ ಒಂದು ರೂಪಾಯಿ ಮನ್ನ ಮಾಡಲಿಲ್ಲ ಎಂದು ಛೇಡಿಸಿದರು. , ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಬೇಕು. ಜನ ಬದಲಾವಣೆ ಬಯಸಿದ್ದಾರೆ. 6 ಕ್ಷೇತ್ರಗಳನ್ನು ಗೆಲ್ಲುವ ಸೂಚನೆ ಕಾಣುತ್ತಿದೆ. ಅದನ್ನು ಮುಖಂಡರು, ಮತದಾರರು ತೀರ್ಮಾನ ಮಾಡಬೇಕು. ಎಐಸಿಸಿ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಖರ್ಗೆಯವರ ಕೈ ಬಲಪಡಿಸಬೇಕು ಎಂದರು. , 200 ಯೂನಿಟ್ ಉಚಿತ ವಿದ್ಯುತ್‌ ಒಂದು ಜಾತಿಗೆ ಸೀಮಿತವಲ್ಲ

ಎಲ್ಲಾ ವರ್ಗದವರಿಗೆ ಸಿಗಲಿ, ಗ್ಯಾಸ್ ಬೆಲೆ ಏರಿಯಾಗಿದೆ. ಜನರ ಜೇಬಿನಿಂದ ಕಿತ್ತುಕೊಳ್ಳಲಾಗುತ್ತಿದೆ. ಜೆಡಿಎಸ್ ಒಂದು ದಿನವೂ ಹೋರಾಟ ಮಾಡಲಿಲ್ಲ. ಬಿಜೆಪಿಯೊಂದಿಗೆ ಹೊಂದಾಣಿ ಮಾಡೊಕೊಳ್ಳಲಾಗುತ್ತಿದೆ. ಜಿಎಸ್ಟಿ ಬರೆ ಎಳೆಯಲಾಗುತ್ತಿದೆ.ಗೃಹಲಕ್ಷ್ಮಿ ಯೋಜನೆಯನ್ನು ಪ್ರಿಯಾಂಕಾ ಗಾಂಧಿ ಜಾರಿಗೆ ತಂದಿದ್ದಾರೆ. ನೀವೆಲ್ಲರೂ ಮನೆ ಮನೆಗೆ ಹೋಗಿ ಯೋಜನೆಯನ್ನು ತಲುಪಿಸಬೇಕು. ಸಂವಿಧಾನಕ್ಕೆ ತೊಂದರೆಯಾಗಿದೆ ಎಂದರು. , ಮುಂಬರುವ ದಿನಗಳಲ್ಲಿ

ಜಿಲ್ಲಾ ಮಟ್ಟದ ಪ್ರಣಾಳಿಗರ ಘೋಷಣೆ ಮಾಡಿ, 10 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. , ವೇದಿಕೆಯಲ್ಲಿ

ಬಿ.ಕೆ.ಹರಿಪ್ರಸಾದ್, ಎಐಸಿಸಿ ಉಸ್ತಿವಾರಿ ಜಾನ್, ಜಿ.ಸಿ.ಚಂದ್ರಶೇಖರ, ಡಿಕೆ ಸುರೇಶ್‌, ಜೆ.ಡಿ.ಶೀಲಂ, ನಲಪಾಡ್, ಹೆಚ್.ಎಂ.ರೇವಣ್ಣ, ಪುಷ್ಪ ಅಮರನಾಥ್, ಬಿ.ಶಿವರಾಂ, ಎಂ.ಎ.ಗೋಪಾಸ್ವಾಮಿ, ಧರ್ಮಸೇನ, ಡಿ.ಮಲ್ಲೇಶ್, ಗೋವಿಂದಪ್ಪ, ಹೆಚ್.ಕೆ.ಮಹೇಶ್ ಮತ್ತಿತರರು ಹಾಜರಿದ್ದರು.