ಹಾಸನ : ಜು.10 ರಿಂದ ಜು.16 ರವರೆಗೆ ವಾಡಿಕೆ ಮಳೆ 56 ಮಿ.ಮಿ ಆಗಬೇಕಿತ್ತು, ತರುವಾಯ 170 ಮಿ.ಮಿ ಮಳೆಯಾಗಿದ್ದು ಶೇ.202 ರಷ್ಟು ಹೆಚ್ಚು ಮಳೆಯಾಗಿದ್ದೆ ಒಂದಷ್ಟು ನಷ್ಟಕ್ಕೆ ದಾರಿಮಾಡಿ ಕೊಟ್ಟಿದೆ ಎನ್ನಬಹುದು .,
ಹಾಸನದ ಯಾವ ತಾಲ್ಲೂಕಿನಲ್ಲಿ ಹೆಚ್ಚು ಹಾನಿ ?
ಹೊಳೆನರಸೀಪುರ, ಆಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಮನೆಗಳಿಗೆ ಹೆಚ್ಚು ಹಾನಿ : ಜೂ.1 ರಿಂದ ಜು.17ರ ವರೆಗೂ 421 ಮನೆಗಳು ಭಾರಿ ಮಳೆಗೆ ಹಾನಿಯಾದರೆ .28 ಮನೆಗಳು ಸಂಪೂರ್ಣ ಕುಸಿದಿದೆ, 218 ಮನೆಗಳಿಗೆ ಭಾಗಶಃ ಮತ್ತು 175 ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ . ಇವರೆಲ್ಲರಿಗೆ NDRF ನಿಯಾಮಾನುಸಾರ ಪರಿಹಾರ ವ್ಯವಸ್ಥೆ ಜಿಲ್ಲಾಡಳಿತ ವತಿಯಿಂದ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಗಂಜಿ ಕೇಂದ್ರ ತೆರೆದಿಲ್ಲ , ಇದು ಸಮಾಧಾನ ಕರ ಅಂಶ. ಏಕೆಂದರೆ ಅಂತಹ ಪ್ರಮೇಯ ಬಂದಿಲ್ಲ., ಆದರೆ…
ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯ ಮಾಡಬೇಕಿದೆ . ನಿಮಗೆ ತಿಳಿದಿರುವಂತೆ NH75 ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಎಲ್ಲಾ ವಾಹನಗಳ ಸಂಚಾರವನ್ನು ಸದ್ಯ ಬಂದ್ ಮಾಡಲಾಗಿದ್ದು, ಲಘು ವಾಹನಗಳನ್ನು ಚಾರ್ಮಾಡಿ ಘಾಟ್, ಸಂಪಾಜೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ ಎಂದು .ಚಾರ್ಮಾಡಿ ಘಾಟ್ ಮತ್ತು ಸಂಪಾಜೆ ರಸ್ತೆ ದೂರವಾಗುತ್ತಿರುವ ಕಾರಣ ನಿನ್ನೆ ಮತ್ತೆರಡು ಬದಲಿ ಮಾರ್ಗಗಳನ್ನು ಗುರುತಿಸಿದ್ದು, ನೀವು ಕ್ಯಾನಹಳ್ಳಿ ಮತ್ತು ಕಾಡುಮನೆ ಮೂಲಕ ಸಂಚಾರಕ್ಕೆ ಪರ್ಯಾಯ ಮಾರ್ಗ ಹೋಗಬಹುದು.
ಶಿರಾಡಿ ಘಾಟಿಯಲ್ಲಿ ಸಂಚಾರ ಮತ್ತೆ ಯಾವಗ??
ಮಳೆ ಕಡಿಮೆಯಾದರೆ ಇನ್ನೊಂದು ವಾರದಲ್ಲಿ ಶಿರಾಡಿ ಘಾಟ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಬೆಳೆ ಹಾನಿ ಎಷ್ಟು ?224 ಹೆಕ್ಟೇರ್ ರಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಕಾಫಿ ಬೆಳೆಯೂ ಹಾನಿಯಾಗುತ್ತಿದ್ದು, ಕಾಫಿ ಮಂಡಳಿ ಅಧಿಕಾರಿಗಳಿಗೆ ವರದಿ ಕೊಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ .
ಈ ವರದಿ ಇಷ್ಟವಾದರೆ ಶೇರ್ ಮಾಡಿ , ನಿಮ್ಮ ಸ್ಥಳೀಯ ಸುದ್ದಿ ನಮಗೆ ಇನ್ಬಾಕ್ಸ್ ಮಾಡಿ.