ರಣಘಟ್ಟ ಯೋಜನೆ ಕಾಮಗಾರಿ ಸುರಂಗ ವೀಕ್ಷಿಸಿದ ಶಾಸಕ ಸಿ.ಟಿ.ರವಿ

0

ಹಾಸನ / ಚಿಕ್ಕಮಗಳೂರು : ಬೇಲೂರು ತಾಲ್ಲೂಕಿನ ಹಳೇಬೀಡು, ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಕೆರೆಗಳಿಗೆ ನೀರು ಹರಿಸುವ ರಣಘಟ್ಟ ಯೋಜನೆ :

ತಾಲ್ಲೂಕಿನ ರಣಘಟ್ಟ ಯೋಜನೆ ಕಾಮಗಾರಿ ಸುರಂಗ ವೀಕ್ಷಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಒಂದು ನೀರಾವರಿ ಯೋಜನೆಯಿಂದ ವಿಧಾನಸಭಾ ಚುನಾವಣೆ ಸೋಲು- ಗೆಲುವು ನಿರ್ಧರಿಸಲು ಸಾಧ್ಯವಿಲ್ಲ,  ಉಳಿದ ಬಿಜೆಪಿ ಪಕ್ಷಕ್ಕೆ ಚುನಾವಣೆಗೆ ಹತ್ತಾರು ಪ್ರಮುಖ ಕಾರಣವಿದೆ. ರಣಘಟ್ಟ ಯೋಜನೆಗೆ ಶಾಸಕರಾದ ಕೆ.ಎಸ್‌.ಲಿಂಗೇಶ್ ಶ್ರಮವಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಬಳಿಕ ನಾನು ಮಂತ್ರಿಯಾಗಿ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾದ ಬಿ.ಎಸ್‌.ಯಡಿಯೂರಪ ರವರಿಂದ ಎರಡು ಯೋಜನೆ ಬಗ್ಗೆ ಪ್ರಸ್ತಾಪವಿಟ್ಟೆ, ಭದ್ರನದಿ ಮೂಲಕ ಚಿಕ್ಕಮಗಳೂರು ಭಾಗ ಕೆಲವು ಗ್ರಾಮಗಳಿಗೆ ನೀರಾವರಿ, ಇನ್ನೂ ಪ್ರಮುಖವಾಗಿ ಬಜೆಟ್ ನಲ್ಲಿ ಘೋಷಣೆಯಾಗಿ ಸ್ಥಗಿತವಾಗಿದ್ದ ರಣಘಟ್ಟ ಯೋಜನೆಗೆ ಅನುಮೋದನೆ ಜೊತೆಗೆ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಎರಡು ಕೆಲಸಕ್ಕೆ ಹಸಿರು ನಿಶಾನೆ ದೊರೆತ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಗ್ಗೆ ತಿಳಿಸಿದರು.

ರಣಘಟ್ಟ ಯೋಜನೆ ಕಾಮಗಾರಿ ಒಟ್ಟು ರೂ 127 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸುಮಾರು 5.3 ಕಿ.ಮಿ ದೂರ ಸುರಂಗ,  ಓಪನ್ ಕಾಲುವೆ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಈ ಕಾಮಗಾರಿ ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳುವ ಬಗ್ಗೆ ಇಂಜಿನಿಯರ್ ತಿಳಿಸಿದ್ದಾರೆ. ಕಾಮಗಾರಿಯಿಂದ ಹಳೇಬೀಡು ಕೆರೆ ಭರ್ತಿಯಾಗಿ ಬಳಿಕ ಬೆಳವಾಡಿ ಕೆರೆ ಭರ್ತಿಯಾಗುತ್ತದೆ. ಕರಗಡ ಯೋಜನೆ ಸ್ವಲ್ಪ ಮಟ್ಟಿನ ಎಡವಟ್ಟು  ಆಗಿರುವ ಬಗ್ಗೆ ನಮಗೆ ತಿಳಿದಿದೆ. ನಮಗೆ ತಾಂತ್ರಿಕತೆಯನ್ನು ಇಂಜಿನಿಯರ್ ತಿಳಿಸಿಲ್ಲ. ಇದ್ದರಿಂದ ನಾಲ್ಕು ಕೆರೆಗೆ ಮಾತ್ರ ನೀರು ಹರಿಯುತ್ತಿವೆ. ಉಳಿದಂತೆ ರಣಘಟ್ಟ ಮತ್ತೆ ಬೈರಾಪುರ ಯೋಜನೆಯಿಂದ ಸಂಪೂರ್ಣ ನೀರಾವರಿ ಕಾಣಲಿದೆ ಎಂದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ತಾಲ್ಲೂಕು ಅಧ್ಯಕ್ಷ ಅಡಗೂರು ಆನಂದ್‌, ಪ್ರಾಧಿಕಾರದ ಅಧ್ಯಕ್ಷ ಎ.ಎಸ್‌.ಬಸವರಾಜು, ಗಂಗೂರು ಶಿವಕುಮಾರ್ ಭುಜೇಂದ್ರ, ತಂಡೇಕೆರೆ ಹಾಜರಿದ್ದರು. ರಮೇಶ್‌ ಸೇರಿದಂತೆ ಇನ್ನೂ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here