ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

0

ದಿನಾಂಕ 7/4/2022 ರಂದು ಹಾಸನ ತಾಲೂಕಿನ ಕಂಚನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿ ಡಿ ಚನ್ನಣ್ಣನವರ್ ಐಪಿಎಸ್ ಅಭಿಮಾನಿಗಳ ಬಳಗ ಹಾಸನ ಇವರ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಡುವಲಹಿಪ್ಪೆಯ ಹೆಚ್.ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶ್ರೀನಿವಾಸ ಬಿ ಹೆಚ್ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಬುದ್ಧಿ ಸಾಮರ್ಥ್ಯವನ್ನು ಅಳೆಯುತ್ತದೆ. ಯಾವುದೇ ಉದ್ಯೋಗಕ್ಕೂ ಸಹ ಪರೀಕ್ಷೆ ಎದುರಿಸಲೇಬೇಕು. ಹಾಗಾಗಿ ಈ ಕ್ವಿಜ್ ಕಾರ್ಯಕ್ರಮ ಅನುಕೂಲಕರವಾಗಿದೆ. ತಮ್ಮ ಮಕ್ಕಳನ್ನು ದೊಡ್ಡ ವ್ಯಕ್ತಿಗಳಾಗಿ ಮಾಡಲು ಪೋಷಕರು ಕನಸು ಕಾಣುತ್ತಾರೆ. ಅದರಂತೆ ನೀವು ಉತ್ತಮ ವಿದ್ಯಾಭ್ಯಾಸ ಮಾಡಿ ಅವರ ಆಸೆಯನ್ನು ಪೂರೈಸಬೇಕು. ಯು.ಪಿ.ಎಸ್ .ಇ ಪರೀಕ್ಷೆಗಳಲ್ಲೂ ಕೂಡಾ ಶಾಲಾ ಪಠ್ಯಪುಸ್ತಕದ ಪ್ರಶ್ನೆಗಳನ್ನು ಕೇಳಲಾಗುವುದು ಹಾಗಾಗಿ ಅಂಕಗಳಿಗಾಗಿ ಓದಬೇಡಿ,ಬದುಕು ನಿರ್ಮಿಸಿಕೊಳ್ಳಲು ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ನುಡಿಯನ್ನು ಮುಖ್ಯ ಶಿಕ್ಷಕಿಯಾದ ಸುಂದರಮ್ಮ ನವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಸರ್ಕಾರಿ ಶಾಲೆಯಲ್ಲಿ ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು ಇದರ ಸದುಪಯೋಗವನ್ನು ವಿಧ್ಯಾರ್ಥಿಗಳು ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ತಮನ್ನ, ಅಂಚೆ ಇಲಾಖೆಯ ನಿವೃತ್ತ ನೌಕರರಾದ ಪುಟ್ಟರಾಜು ಎಂ ಕೆ, ಪೊಲೀಸ್ ಇಲಾಖೆಯ ನಿಸ್ತಂತು ವಿಭಾಗದ ಅರುಣ್ ಕುಮಾರ್ ಎಂ.ಪಿ ಮತ್ತು ಗಾಣಿಗರ ಹೊಸಹಳ್ಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಯೋಗೇಶ್, ಉಪನ್ಯಾಸಕರಾದ ತೀರ್ಥೇಶ್,ಹೇಮಂತ್ ಮತ್ತು ಹಾಸನದ ಕಾರ್ತಿಕ್ ಸುನಿಲ್, ಗ್ರಾಮದ ಚಂದ್ರಣ್ಣ,ನವೀನ್ ಮತ್ತು ಚನ್ನಣ್ಣನವರ್ ಅಭಿಮಾನಿಗಳ ಬಳಗ ಹಾಜರಿದ್ದರು.

ಚನ್ನಣ್ಣನವರ್ ಅಭಿಮಾನಿಗಳ ಬಳಗ ಕಾರ್ಯಕ್ರಮದ ಆಯೋಜನೆ ಮಾಡಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಿದರು.

LEAVE A REPLY

Please enter your comment!
Please enter your name here