ಗಡಿಪಾರಿಗೆ ಶಿಫಾರಸ್ಸಾಗಿದ್ದ ಸಂತೋಷ ಅಲಿಯಾಸ್ ಪುಲ್ಲಿ ಸ್ನೇಹಿತರಿಂದಲೇ ಹತ್ಯೆ

0

ಹಾಸನ / ಚಿಕ್ಕಮಗಳೂರು : ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲಿ ರೌಡಿಶೀಟರ್ ಸಂತೋಷ್ ತನ್ನ ಸ್ನೇಹಿತರಿಂದಲೇ ಇಹಲೋಕ ತ್ಯಜಿಸುವಂತಾಯಿತು. ಇತ್ತೀಚೆಗಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸುಮಾರು 11ಮಂದಿ ರೌಡಿಗಳನ್ನು ಗಡಿಪಾರು ಮಾಡುವಂತೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಪಟ್ಟಿ ರವಾನಿಸಿದ್ದರು. ಆ ಪಟ್ಟಿಯಲ್ಲಿ ಮೃತಪಟ್ಟ ಸಂತೋಷನ ಹೆಸರಿತ್ತು ಎಂದು ಹೇಳಲಾಗುತ್ತಿದೆ. ಆದರೆ

ದುರ್ದೈವದ ಸಂಗತಿ ಎಂದರೆ ಸ್ನೇಹಿತರ ಜೊತೆಗೂಡಿ ನಗರದಲ್ಲಿ ಒಂದು ಕೊಲೆ ಮಾಡಿ ಜೈಲು ವಾಸ ಅನುಭವಿಸಿ ಬಂದಿದ್ದರು. ಅದೇ ಸ್ನೇಹಿತನಿಂದಲೇ ಕೊಲೆಯಾಗಿರುವುದು ವಿಪರ್ಯಾಸ. , ಪೂರ್ವ ನಿಯೋಜಿತ ಕೃತ್ಯ ಸಂತೋಷನನ್ನು ಕೊಲೆ ಮಾಡಲೇಬೇಕೆಂಬ ಪೂರ್ವ ನಿಯೋಜನೆಯೊಂದಿಗೆ ಪ್ರೀತಂ ತನ್ನ ಸ್ನೇಹಿತ ಕೀರ್ತಿಯೊಂದಿಗೆ ಪ್ರವಾಸ ನೆಪವೊಡ್ಡಿ ಸಂತೋಷ್‌ನನ್ನು ಕರೆದೊಯ್ಯುವ ಸಂಚು ರೂಪಿಸಿದ್ದು, ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಹಾಸನದಿಂದಲೇ ಹಾರೆ, ಗುದ್ದಲಿ, ಪಿಕಾಸಿಗಳನ್ನು ತೆಗೆದುಕೊಂಡು ಹೋಗಿರುವುದು ತಿಳಿದುಬಂದಿದೆ. ವಿಪರೀತವಾಗಿ ಕುಡಿಸಿ ಆತನನ್ನು

ಕೊಲೆ ಮಾಡಿ ಕಾಡಿನಲ್ಲೇ ಹೂತು ಹಾಕಿದ್ದಾರೆ. , ರೌಡಿಶೀಟರ್ ವ್ಯಕ್ತಿಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಹೂತು ಹಾಕಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ತಿಳಿಸಿದರು., ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಫೆ.2ರಂದು ರೌಡಿಶೀಟರ್ ಸಂತೋಷ್‌ ಅಲಿಯಾಸ್ ಮುಲಿ (35) ಎಂಬಾತನನ್ನು ಆತನ ಸ್ನೇಹಿತರಾದ ಪ್ರೀತಂ ಅಲಿಯಾಸ್‌ ಪ್ರೀತಂಗೌಡ (25), ಕೀರ್ತಿ ಬಿ.ಎಸ್. (24) ಅವರು ಮನೆ ಹತ್ತಿರದಿಂದ ಚಿಕ್ಕಮಗಳೂರಿನ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಹೇಳಿದರು. , ನಗರದ ದಾಸರಕೊಪ್ಪಲು ಗ್ರಾಮದ ಸಂತೋಷ್ ಅಲಿಯಾಸ್ ಮಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ ಮನೆಯಿಂದ ಆಗಾಗ್ಗೆ ವಾರಾನುಗಟ್ಟಲೆ ಹೊರಗೆ ಹೋಗುತ್ತಿದ್ದನು. ಅದರಂತೆ ಹೋಗಿದ್ದಾನೆ ಎಂದು ಮನೆಯವರು ಕೂಡ ಭಾವಿಸಿದ್ದಾರೆ. ಆದರೆ

ಕಳೆದ 25 ದಿನಗಳು ಕಳೆದರೂ ಕೂಡ ಬಾರದ ಹಿನ್ನೆಲೆಯಲ್ಲಿ ಅವರ ತಂದೆ ದಾಸೇಗೌಡರು ಮಾ.3ರಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದರು. , ಈ ಪ್ರಕರಣವನ್ನು ಭೇದಿಸಲು ಒಂದು ವಿಶೇಷ ತಂಡವನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಮೃತ ಸಂತೋಷ್ ಮನೆಯಿಂದ ಹೋಗುವ ಸಂದರ್ಭದಲ್ಲಿ ಸ್ನೇಹಿತರಾದ ಪ್ರೀತಂ ಮತ್ತು ಕೀರ್ತಿ ಆತನ ಜಮೀನಿನ ಹತ್ತಿರ ಹೋಗಿ ಕಾರಿನಲ್ಲಿ (ಕೆ.ಎ.02-ಎಂ.ಡಿ.7707) , ಈ ಮೂವರು ಮದ್ಯ ಸೇವನೆ ಮಾಡಿದ್ದಾರೆ. ಸಂತೋಷನನ್ನು ಕೊಲೆ ಮಾಡುವ ಉದ್ದೇಶದಿಂದ ಗಾಂಜಾವನ್ನು ಕೂಡ ನೀಡಿ ಆತನಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಬಳಿಕ ಕೊಲೆ ಮಾಡಿದ್ದಾರೆ. ರಾತ್ರಿ 10ರಿಂದ ಮಧ್ಯರಾತ್ರಿ 2 ಗಂಟೆಯೊಳಗೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ನಂತರ ಆರೋಪಿಗಳು ಅದೇ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿ ಏನೂ ಅರಿಯದಂತೆ ಹಾಸನಕ್ಕೆ ಮರಳಿದ್ದಾರೆ. , ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು ಈ ಇಬ್ಬ ರನ್ನೂ

ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲಾ ಅಂಶಗಳನ್ನು ಬಾಯ್ದಿಟ್ಟಿದ್ದಾರೆ. ಆರೋಪಿಗಳೊಂದಿಗೆ ಘಟನೆ ನಡೆದ ಸ್ಥಳ ಮತ್ತು ಮೃತನನ್ನು ಹೂತು ಹಾಕಿದ ಸ್ಥಳವನ್ನು ಪರಿಶೀಲಿಸಿ ಶವನನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಎಸ್ಪಿ ತಮ್ಮಯ್ಯ ವಿವರಿಸಿದರು. , ಮೃತ ಸಂತೋಷ್ ಅಲಿಯಾಸ್ ಮುಲಿ, ಪ್ರೀತಂ ಅಲಿಯಾಸ್ ಪ್ರೀತಂಗೌಡ ಇಬ್ಬರು ಸ್ನೇಹಿತರು. ಅವರಿಬ್ಬರೂ ಈ ಹಿಂದೆ ಒಂದು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಇವರ ನಡುವೆ ಇತ್ತೀಚೆಗಷ್ಟೇ ಯಾವುದೋ ವಿಚಾರಕ್ಕೆ ವೈಮನಸ್ಸು ಉಂಟಾಗಿ ತನ್ನೆಲ್ಲಾ ಬಂಡವಾಳಗಳು ಬಯಲಾಗುತ್ತವೆ ಎಂಬ ಅಂಜಿಕೆ ಇಬ್ಬರಲ್ಲಿಯೂ ಇದ್ದು, ಸಂತೋಷನನ್ನು ಮುಗಿಸಲೇಬೇಕೆಂಬ ಪೂರ್ವ ನಿಯೋಜಿತಗೊಂಡು ಪ್ರೀತಂ ಮತ್ತು ಕೀರ್ತಿ ಪ್ರವಾಸ ನೆಪವೇಳೆ ಸಂತೋಷ್‌ನನ್ನು ಕಾರಿನಲ್ಲಿ ಚಿಕ್ಕಮಗಳೂರಿಗೆ ಫೆ.9ರಂದು ಕರೆದುಕೊಂಡು ಹೋಗಿದ್ದಾರೆ. , ಮಾರನೆ ದಿನ ಫೆ.10ರಂದು ಚಿಕ್ಕಮಗಳೂರು ತಾಲ್ಲೂಕಿನ ಕಸಬಾ ಹೋಬಳಿಯ ಕುರುವಂಗಿ ಗ್ರಾಮದ

ಸ.ನಂ. 194ರ ಅರಣ್ಯ ಪ್ರದೇಶದಲ್ಲಿ  , ಈ ಮೂವರು ಮದ್ಯ ಸೇವನೆ ಮಾಡಿದ್ದಾರೆ. ಸಂತೋಷನನ್ನು ಕೊಲೆ ಮಾಡುವ ಉದ್ದೇಶದಿಂದ ಗಾಂಜಾವನ್ನು ಕೂಡ ನೀಡಿ ಆತನಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಬಳಿಕ ಕೊಲೆ ಮಾಡಿದ್ದಾರೆ. ರಾತ್ರಿ 10ರಿಂದ ಮಧ್ಯರಾತ್ರಿ 2 ಗಂಟೆಯೊಳಗೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ನಂತರ ಆರೋಪಿಗಳು ಅದೇ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿ ಏನೂ ಅರಿಯದಂತೆ ಹಾಸನಕ್ಕೆ ಮರಳಿದ್ದಾರೆ. , ಎಲ್ಲಾ ಸಾಕ್ಷಾಧಾರಗಳನ್ನು ಸಂಗ್ರಹಿಸಿದ ಪೊಲೀಸರು

ಈ ಇಬ್ಬ ರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲಾ ಅಂಶಗಳನ್ನು ಬಾಯ್ದಿಟ್ಟಿದ್ದಾರೆ. ಆರೋಪಿಗಳೊಂದಿಗೆ ಘಟನೆ ನಡೆದ ಸ್ಥಳ ಮತ್ತು ಮೃತನನ್ನು ಹೂತು ಹಾಕಿದ ಸ್ಥಳವನ್ನು ಪರಿಶೀಲಿಸಿ ಶವನನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಎಸ್ಪಿ ತಮ್ಮಯ್ಯ ವಿವರಿಸಿದರು.

LEAVE A REPLY

Please enter your comment!
Please enter your name here