ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕಿ

0

ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕಿ.
ಮನೆಯ ಒಳಗೆ ಸೀರೆಯಲ್ಲಿ ಜೋಕಾಲಿ ಆಡಲು ಸೀರೆ ಕಟ್ಟಿದ್ದ ಸಾನಿತಾ. ಆಯತಪ್ಪಿ ಕುತ್ತಿಗಿಗೆ ಸೀರೆ ಬಿಗಿದು ಸಾವನ್ನಪ್ಪಿದ್ದ ಬಾಲಕಿ. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ.
ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ,‌ ವನಗೂರು ಗ್ರಾಮದಲ್ಲಿ ನಡೆದಿದೆ.‌ ಸಾನಿತಾ (9) ಮೃತಪಟ್ಟ ಬಾಲಕಿ. ಬಸವರಾಜು-ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ ನಾಲ್ಕನೇ ತರಗತಿ ಓದುತ್ತಿದ್ದು ಇಂದು ರಜೆಯಿದ್ದ ಕಾರಣ ಮನೆಯೊಳಗೆ ಸೀರೆ ಕಟ್ಟಿಕೊಂಡು ಜೋಕಾಲಿ ಆಡಲು ಹೋಗಿದ್ದು, ಈ ವೇಳೆ

ಆಯತಪ್ಪಿ ಸಾನಿತಾ ಕುತ್ತಿಗಿಗೆ ಸೀರೆ ಬಿಗಿದು ಸಾವನ್ನಪ್ಪಿದ್ದಾಳೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.‌ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here