ಅಕ್ರಮವಾಗಿ ಮುಳುಗಡೆ ಜಮೀನಿನಿಂದ ಮಣ್ಣು ತೆಗೆಯಲಾಗುತ್ತಿದೆ ಇದರ ವಿರುದ್ಧ ಕ್ರಮಕೈಗೊಳ್ಳಿ

0

ಸಕಲೇಶಪುರ : ಕಿತ್ತಗಳಲೆ ಗ್ರಾಮದಲ್ಲಿ ಅಕ್ರಮವಾಗಿ ಮುಳುಗಡೆ ಜಮೀನಿನಿಂದ ಮಣ್ಣು ತೆಗೆಯಲಾಗುತ್ತಿದೆ ಹಾಗೂ ಹೇಮಾವತಿ ಹೊಳೆಯಿಂದ ಅಕ್ರಮ ಮರಳು ಸಾಗಾಣಿಕೆ ಮಾಡಲಾಗುತ್ತಿದ್ದು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರವೇ ಮುಖಂಡ ವಿವೇಕ್ ವೈದ್ಯನಾಥ್ ಹೇಳಿದರು.

ಪಟ್ಟಣದ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ರವರಿಗೆ ಕರವೇ ವತಿಯಿಂದ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.

ತಾಲೂಕಿನ ಗಡಿಭಾಗದಲ್ಲಿರುವ ಆಲೂರು ತಾಲೂಕು ವ್ಯಾಪ್ತಿಯ ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಯ ಕಿತ್ತಗಳಲೆ ಗ್ರಾಮದಲ್ಲಿ ವ್ಯಾಪಕ ಹೇಮಾವತಿ ನದಿ ಪಾತ್ರದಲ್ಲಿ ಮುಳುಗಡೆ ಜಮೀನಿದ್ದು, ತಮಿಳುನಾಡಿನಿಂದ ಕೂಲಿ ಕಾರ್ಮಿಕರನ್ನು ಇಲ್ಲಿಗೆ ಕರೆ ತಂದು ಅಕ್ರಮವಾಗಿ ಮಣ್ಣನ್ನು ಇಟ್ಟಿಗೆ ಗೂಡುಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here