ಸಕಲೇಶಪುರ ತಾಲ್ಲೂಕಿನ ದೊಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್ ೭೫ ಯಲ್ಲಿ ಆಗಿರುವ ಭೂ ಕುಸಿತ ಸ್ಥಳಕ್ಕೆ ಭೇಟಿ

0

ಕಂದಾಯ ಸಚಿವರಾದ ಆರ್. ಆಶೋಕ್ ಹಾಗೂ ಅಬಕಾರಿ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಮತ್ತು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ಇಂದು ಸಕಲೇಶಪುರ ತಾಲ್ಲೂಕಿಗೆ ಭೇಟಿ ನೀಡಿ ಅತಿವೃಷ್ಠಿ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿ ಸರ‍್ವಜನಿಕರ
ಅಹವಾಲು ಆಲಿಸಿದರು.ಸಕಲೇಶಪುರ ತಾಲ್ಲೂಕಿನ ದೊಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್ ೭೫ ಯಲ್ಲಿ ಆಗಿರುವ ಭೂ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಸಂಸದರು ಆದಷ್ಟು ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸುವಂತೆ ಸೂಚಿಸಿದರು

ಈ ಸಂರ‍್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವರು ಮಂಗಳೂರಿಗೆ ಸಂರ‍್ಕಿಸುವ ಪ್ರಮುಖ ರಸ್ತೆ ಇದ್ದಾಗಿರುವುದರಿಂದ ರಸ್ತೆ ದುರಸ್ತಿ ಕರ‍್ಯ ಮುಗಿಯುವವರೆಗೂ ಬೆಳಗಿನ ವೇಳೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವನ್ನು ನೀಡಲು ಸೂಚಿಸಲಾಗಿದೆ ಇತರೆ ವಾಹನಗಳಿಗೆ ಬದಲಿ ರಸ್ತೆಮರ‍್ಗದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.ರಾಷ್ಟೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ .ಜೊತೆಗೆ ಕಾಂಕ್ರೀಟ್ ತಡೆಗೋಡೆ ನರ‍್ಮಿಸಿ ಶಾಶ್ವತವಾಗಿ ನಾಲ್ಕುಪಥದ ರಸ್ತೆಯನ್ನು ನರ‍್ಮಾಣ ಮಾಡಿಲಾಗುವುದು.ಭೂಕುಸಿತದಿಂದ ಉಂಟಾಗಿರುವ ಜಮೀನು ಹಾನಿ ಮತ್ತು ಬೆಳೆಹಾನಿಗೆ ಕಂದಾಯ ಇಲಾಖೆ ವತಿಯಿಂದ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದು ಸಚಿವರು ಹೇಳಿದರು.

ಇದೇ ರೀತಿ ಇತರೆಡೆ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ಎನ್,ಡಿ,ಆರ್, ಎಫ್ ಹಾಗೂ ಎಸ್,ಡಿ ಆರ್, ಎಫ ಪರಿಹಾರ ನಿಧಿಯಲ್ಲಿ ಪರಿಹಾರವನ್ನು ಶೀಘ್ರವಾಗಿ ನೀಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರ್ ಅಶೋಕ್ ಅವರು ಹೇಳಿದರು. ಮಳೆಯಿಂದ ಮನೆಗಳಿಗೆ ಹಾನಿಯಾಗಿರುವವರಿಗೆ ೨೪ ಗಂಟೆಗಳಲ್ಲಿ ಪರಿಹಾರವನ್ನು ನೀಡಲು ಸೂಚಿಸಲಾಗಿದೆ ಸಂಪರ‍್ಣವಾಗಿ ಹಾನಿಯಾಗಿದ್ದಲ್ಲಿ ಉಚಿತ ಮನೆ ನರ‍್ಮಿಸಿ ಕೊಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಕ್ರಮವಹಿಸಬೇಕು ಯಾವುದೇ ರಜೆಗೆ ಅವಕಾಶ ನೀಡುವಂತಿಲ್ಲ ಎಂದು ಕಂದಾಯ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಠಿ ಯಿಂದ ೭೮ ಮನೆಗಳು ಭಾಶಹ ಹಾಗೂ ೬ ಮನೆಗಳು ಸಂಪರ‍್ಣ ಹಾಯಾಗಿವೆ. ೫೦ ಸೇತುವೆಗಳು ೩೭೪ ವಿದ್ಯುತ್ ಕಂಬಗಳು ಒಂದು ಟ್ರಾನ್ಸ್ಫರ‍್ಮರ‍್ಸ್,ಹಾನಿಯಾಗಿವೆ ಅತಿವೃಷ್ಠಿಯಿಂದ ಮೃತಪಟ್ಟಿರುವ ಐದು ಜಾನುವಾರುಗಳಿಗೆ ತಕ್ಷಣ ಪರಿಹಾರ ನೀಡಲು ತಿಳಿಸಲಾಗಿದೆ ಎಂದು ಹೇಳಿದರು.

ಭೂ ಕುಸಿತ ಮತ್ತಿತರ ಸ್ವರೂಪದ ಹಾನಿಯಾಗುವ ಸಾಧ್ಯತೆ ಇರುವ ೯೫ ಗ್ರಾಮಗಳನ್ನು ಗುರುತಿಸಿ ಮುಂಜಾಗ್ರತೆ ವಹಿಸಲಾಗಿದೆ. ೨೫ ಗ್ರಾಮಗಳನ್ನು ಸ್ಥಳಾಂತರಿಸಲು ಹಾಗೂ ಅಗತ್ಯ ಇರುವ ಕಡೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಪ್ರಾರಂಭಿಸಿ ಆಹಾರ ಹೊದಿಕೆಗಳನ್ನು ನೀಡಲು ವ್ಯವಸ್ಥೆ ಮಾಡಿಕೊಂಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು..

ಮಳೆಯಿಂದ ಹಾನಿಯಾಗಿರುವ ಮನೆಗಳನ್ನು ಗುರುತಿಸಿ ಪರಿಹಾರವನ್ನು ನೀಡುವ ಕರ‍್ಯವನ್ನು ಜಿಲ್ಲಾಧಿಕಾರಿಗಳು ಈಗಾಗಲೇ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಕೆಲವು ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಳೆ ಹಾನಿಯಾಗಿರುವವರಿಗೆ ರಾಜ್ಯ ರ‍್ಕಾರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರು ಸಹ ತರ‍್ತಾಗಿ ದುರಸ್ತಿ ಕಾಮಾಗಾರಿ ನೆಡೆಸಿ ಆದಷ್ಟು ಬೇಗ ಸಂಚಾರಕ್ಕೆ ಮುಕ್ತರನ್ನಾಗಿಸುವಂತೆ ಸೂಚನೆ ನೀಡಿದರು.

ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್, ಪೋಲಿಸ್ ವರಷ್ಠಾಧಿಕಾರಿ ಶ್ರೀನಿವಾಸಗೌಡ ,ಜಿಲ್ಲಾ ಪಂಚಾಯಿತಿ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಬಿ.ಎ ಪರಮೇಶ್, ಉಪವಿಭಾಧಿಕಾರಿ ಪ್ರತೀಕ್ , ತಹಶೀಲ್ದಾರ್ ಜೈಕುಮಾರ್ ಮತ್ತಿತರರು ಹಾಜರಿದ್ದರು.
ಸಚಿವರಿಂದ ಪರಿಹಾರ ಧನದ ಚೆಕ್ ವಿತರಣೆ

ಕಂದಾಯ ಸಚಿವರಾದ ಆರ್.ಆಶೋಕ್ ಹಾಗೂ ಅಬಕಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಇಂದು ಸಕಲೇಶಪುರ ಪಟ್ಟಣದ ಅಜಾದ್ ನಗರದಲ್ಲಿ ಹೇಮಾವತಿ ನದಿ ಪ್ರವಾಹ ಹಾಗೂ ಮಳೆ ನೀರಿನಿಂದ ಹಾನಿಗೊಳಗಾಗುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.ಇದೇ ವೇಳೆ ಸಚಿವರು ಸಕಲೇಶಪುರ ಕುರುಡಹಳ್ಳಿ ಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಪರಿಹಾರ ಧನದ ಚೆಕ್ ವಿತರಿಸಿದರು

LEAVE A REPLY

Please enter your comment!
Please enter your name here