ಸೌಧಿ ಅರೇಬಿಯಾದಲ್ಲಿ ಒಂಟೆಗೆ ಕಾರು ಗುದ್ದಿ ರಸ್ತೆ ಅಪಘಾತ

0

ಸಕಲೇಶಪುರ / ಸೌದಿ : ಅಪಘಾತದಲ್ಲಿ ಸಕಲೇಶಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ಸೌಧಿ ಅರೇಬಿಯಾದಲ್ಲಿ ನಡೆದಿದೆ. , ಅಕೀಲ್, ನಾಸಿರ್, ರಿಝಾನ್, ಶಿಹಾಬ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. , ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಕಳೆದ ರಾತ್ರಿ ಈ ಅಪಘಾತ ಸಂಭವಿಸಿದೆ. , ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ

ಖುರೈಸ್ ರಸ್ತೆಯ ಬಳಿ ಒಂಟೆ,(ಪ್ರಾಣಿ)ಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರು SAQCO ಎಂಬ ಕಂಪನಿಯಲ್ಲಿ ನೌಕರರಾಗಿದ್ದರು. ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. , ಮೃತದೇಹಗಳನ್ನು

ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. , ಅಕೀಲ್ ಅವರು ಮಂಗಳೂರಿನ ಬೋಳಾರ್ ರಿಝಾನ್ ಹಳೆಯಂಗಡಿ ಕದಿಕೆ ನಿವಾಸಿ ಎಂದು ತುಳಿದು ಬಂದಿದೆ. , ಸಕಲೇಶಪುರ ಪಟ್ಟಣದ ಶೂ ಬಜಾರ್ ಮಾಲೀಕರಾದ

ಅಹಮದ್ ರವರ ತಮ್ಮನ ಮಗ ನಾಸಿರ್( 22) ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದರು. ಇದೀಗ ರಸ್ತೆ ಅಪಘಾತದಲ್ಲಿ  ಮೃತಪಟ್ಟ ನಾಸಿರ್ ಕುಟುಂಬ ದುಃಖದಲ್ಲಿ ಕಣ್ಣೀರಿಡುತಿದೆ.

LEAVE A REPLY

Please enter your comment!
Please enter your name here