ಸರ್ಕಾರಿ/ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ &ಡಿ.ಎಡ್ ಕೋರ್ಸ್‍ಗಳಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವರಿಗೆ 25,000₹ ವರೆಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ ., ಆಸಕ್ತರು ಅವಕಾಶ ಸದುಪಯೋಗ ಪಡೆದುಕೊಳ್ಳಿ !!

0

ಹಾಸನ ನ.23 (ಹಾಸನ್_ನ್ಯೂಸ್): 2020-21ನೇ ಸಾಲಿನಲ್ಲಿ National Council for Teacher Education , Department of State Educational  Research and Training  ನಿಂದ ಮಾನ್ಯತೆ ಪಡೆದಿರುವ ಸರ್ಕಾರಿ/ಅರೆ ಸರ್ಕಾರಿ/ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ ಮತ್ತು ಡಿ.ಎಡ್ ಕೋರ್ಸ್‍ಗಳಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ  (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಬೌದ್ಧ ಮತ್ತು ಪಾರ್ಸಿ) ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ರೂ 25,000/-ಗಳ ವಿಶೇಷ ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಜಿಗಳನ್ನು ಅಹ್ವಾನಿಸಲಾಗಿದ್ದು.
  ಅಭ್ಯರ್ಥಿಗಳು ಅರ್ಜಿಯನ್ನು ನಿರ್ದೇಶನಾಲಯದ ಅಧಿಕೃತ ವೆಬ್‍ಸೈಟ್ https://dom.karnataka.gov.in ಅಥವಾ ಜಿಲ್ಲಾ ಕಚೇರಿಯಿಂದ ಪಡೆದು ಭರ್ತಿಮಾಡಿ ಅರ್ಜಿಯಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಡಿಸೆಂಬರ್ 15ರೊಳಗೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ ಅಜಾóದ್ ಭವನ್, ಆಕಾಶವಾಣಿ ಹಿಂಭಾಗ, ಹಾಸನ. ಅರ್ಜಿ ಸಲ್ಲಿಸಬಹುದಾಗಿದೆ.
ಷರತ್ತುಗಳು:-ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು, ಅಭ್ಯರ್ಥಿಗಳ ಪೋಷಕರ ವಾರ್ಷಿಕ ಆದಾಯವು ಗರಿಷ್ಠ ರೂ 6 ಲಕ್ಷಕ್ಕೆ ಮೀರಿರಬಾರದು, ವಿದ್ಯಾರ್ಥಿಯು ರಾಜ್ಯ/ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಪೂರ್ಣಕಾಲಿಕ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರಬಾರದು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಶ್ರೀ ವಿದ್ಯಾಗಣಪತಿ ದೇವಸ್ಥಾನದ ಅಡ್ಡ ರಸ್ತೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಹಾಸಸ. ದೂರವಾಣಿ ಸಂಖ್ಯೆ:  08172-267373, 08172-268373  ಸಂಪರ್ಕಿಸಬಹುದಾಗಿದೆ –   ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಸನ

ಜಾಹೀರಾತು 👇

ಮಾಂಟೆಸ್ಸರಿ ಶಿಕ್ಷಕರ ತರಬೇತಿ!!
ಅನಾಬೆಲ್, ಸಂಸ್ಕೃತ ಭವನ ಎದುರು , ಪಾರ್ಕ್ ರಸ್ತೆ, ಹಾಸನ -573201
ಫೋನ್  ಸಂಖ್ಯೆ !
9964451828, 8884688113 / 114
•ವಯಸ್ಸಿನ ಮಿತಿ ಇಲ್ಲ
•ಶೇ 100% ಉದ್ಯೋಗ ಸಹಾಯ
•ಉಚಿತ ಮಾತನಾಡುವ ಇಂಗ್ಲಿಷ್ ಮತ್ತು ಕಂಪ್ಯೂಟರ್ ತರಬೇತಿ *
•ಅನುಭವಿ ಬೋಧನಾ ಸಿಬ್ಬಂದಿ ವ್ಯವಸ್ಥೆ
•ಪ್ರಾಯೋಗಿಕ ತರಬೇತಿಗಾಗಿ ಪೂರ್ಣ ಪ್ರಮಾಣದ ಮಾಂಟೆಸ್ಸರಿ ಲ್ಯಾಬ್ ಸೌಲಭ್ಯ
•ಕಂತು ಸೌಲಭ್ಯಗಳೊಂದಿಗೆ ನಾಮಮಾತ್ರ ಶುಲ್ಕ ರಚನೆ ಆದರ್ಶ ವೃತ್ತಿ ಗೃಹಿಣಿಯರಿಗೆ ಅವಕಾಶ
•ಆನ್‌ಲೈನ್ ಬೋಧನೆ ಸಹ ಲಭ್ಯವಿದೆ !
•ತ್ವರೆ ಮಾಡಿ ಸೀಮಿತ ಪ್ರವೇಶಗಳು ಮಾತ್ರ ಉಳಿದಿವೆ!!

LEAVE A REPLY

Please enter your comment!
Please enter your name here