ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

0

ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪರೀಕ್ಷೆ ಪೋಷಕರು, ಮಕ್ಕಳು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪರೀಕ್ಷೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಮಕ್ಕಳ ಪರೀಕ್ಷೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ಮತ್ತಿ ದ್ವಿತೀಯ ಪಿಯುಸಿ ಮಾಡಬೇಕಾ ಬೇಡವಾ ಅಂತ ಚರ್ಚೆ ಆಗಿತ್ತು. ಬೇಕು ಅನ್ನೋದು, ಬೇಡ ಅನ್ನೋರ ವರ್ಗ ಇದೆ. ಹಿರಿಯ ಮಾಧ್ಯಮ ಮಿತ್ರರ ಸಲಹೆ ಪಡೆದಿದ್ದೇನೆ. ಪೋಷಕರು, ಮಕ್ಕಳು ಅಭಿಪ್ರಾಯ ಸಂಗ್ರಹ ಮಾಡಿ ಪಿಯುಸಿ ಪರೀಕ್ಷೆ ಮಾಡಿದ್ರೆ 12 ದಿನ ಟೈಂ ಬೇಕು. ಹೀಗಾಗಿ ಪರೀಕ್ಷೆ ರದ್ದು ಮಾಡುತ್ತಿದ್ದೇವೆ ಎಂದರು.

ಸಚಿವರು ಹೇಳಿದ್ದೇನು? ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವೀತಿಯ ಪಿಯುಸಿ ಪರೀಕ್ಷೆ ಮಾಡದೇ ಇರಲು ಈಗ ನಿರ್ಧಾರ ಮಾಡಲಾಗಿದೆ. ಈ ವರ್ಷದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ್ದೇ ಗ್ರೇಡ್ ಆಧಾರದಲ್ಲಿ ಪಾಸ್ ಹಾಗೂ ಕಲಿಕಾ ಮಟ್ಟದಲ್ಲಿ ಅಂಕ ನೀಡಿ ಪಾಸ್ ಮಾಡಲು ನಿರ್ಧಾರ ಮಾಡಿದ್ದೇವೆ.

ಕೆಲ ರಾಜ್ಯದಲ್ಲಿ ಎಕ್ಸಾಂ ರದ್ದು ಮಾಡಿದ ಮೇಲೆ ಆ ರಾಜ್ಯದವರ ಜೊತೆ ಮಾತಾಡಿದ್ದೇವೆ. ಯಾವ ಆಧಾರದಲ್ಲಿ ಪಾಸ್ ಮಾಡ್ತೀರಾ ಅಂತ ಕೇಳಿದ್ದೇವೆ. ಯಾವುದೇ ಮಾನದಂಡ ಯಾರು ಕೊಟ್ಟಿಲ್ಲ. ಮುಂದೆ ಯೋಜನೆ ಮಾಡೋದಾಗಿ ಹೇಳಿದ್ದಾರೆ. ದ್ವಿತಿಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದೇವೆ. ಎಲ್ಲಾ ಮಕ್ಕಳಿಗೆ ಯಾವ ಆಧಾರಲ್ಲಿ ಪಾಸ್ ಮಾಡಬಹುದು ಅಂತ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ. 

ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನಾವು ಕೆಲ ಮಾನದಂಡವನ್ನ ರಿಲೀಸ್ ಮಾಡುತ್ತೇವೆ. ಆ ಆಧಾರದಲ್ಲಿ ಎಬಿಸಿ ಮಾದರಿ ಗ್ರೇಡ್ ಕೊಡ್ತೀವಿ. ವಿದ್ಯಾರ್ಥಿಗಳಿಗೆ ಆ ಫಲಿತಾಂಶ ಇಷ್ಟ ಆಗದೇ ಹೋದ್ರೆ ಕೋವಿಡ್ ನಿಯಂತ್ರಣವಾದರೆ ಮಕ್ಕಳಿಗೆ ಪರೀಕ್ಷೆ ಮಾಡೋ ಬಗ್ಗೆ ಚಿಂತನೆ ಮಾಡುತ್ತೇವೆ. ದ್ವಿತಿಯ ಪಿಯುಸಿ ಮಕ್ಕಳು ಗ್ರೇಡ್ ಆಧಾರದಲ್ಲಿ ಪಾಸ್ ಮಾಡುತ್ತೇವೆ.

ವಿದ್ಯಾರ್ಥಿಗಳು ಗೊಂದಲ ಆಗೋದು ಬೇಡ. ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರಲ್ಲಿ ಪಾಸ್ ಮಾಡಲಾಗುತ್ತದೆ. ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಸಿದ್ಧರಾಗಿರಿ. ನಿಮ್ಮ ಜೀವನ ಉಜ್ವಲ ಆಗಲಿ ಎಂದು ದ್ವಿತಿಯ ಪಿಯಸಿ ಮಕ್ಕಳಿಗೆ ಸಚಿವರುಗೆ ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here