Sakleshpur

ಮಂಗಳೂರು – ಬೆಂಗಳೂರು ಬದಲಿ ರಸ್ತೆ ಮಾರ್ಗದ ಸಮಯ ಹಾಗೂ ಹೆಚ್ಚಿನ ಮಾಹಿತಿ

By

August 21, 2022

ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು- ಬೆಂಗಳೂರು ರಸ್ತೆಯ ಮಾರನ ಹಳ್ಳಿಯಿಂದ ದೋಣಿಗಾಲ್ ವರೆಗಿನ ರಸ್ತೆಯಲ್ಲಿ ರಸ್ತೆ ಕುಸಿತವಾದುದರಿಂದ ಲೋಕೋಪಯೋಗಿ ಇಲಾಖೆಯು ಬದಲಿ ರಸ್ತೆಯನ್ನು ಭಾರಿ ವಾಹನಗಳಿಗಾಗಿ ನಿರ್ಮಿಸಲಾಗಿದೆ.

ಈ ರಸ್ತೆಯಲ್ಲಿ 20 ಟನ್ ಗಿಂತ ಅಧಿಕ ಭಾರ ಹೊಂದಿದ ಸರಕು ಸಾಗಾಣೆ ವಾಹನ ಗಳಿಗಾಗಿ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಏಕ ಮುಖ ಸಂಚಾರವನ್ನು ಜಿಲ್ಲಾಧಿಕಾರಿ ಗಿರೀಶ್ ಆದೇಶಿಸಿದ್ದಾರೆ.

ಘನ ವಾಹನ ಸಂಚಾರ ಈ ರೀತಿ ಇದೆ.

ಬೆಳಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ

ಬೆಳಗ್ಗೆ ಗಂಟೆ 9ರಿಂದ ಬೆಳಗ್ಗೆ 12 ಗಂಟೆವರೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ

ಮಧ್ಯಾಹ್ನ ಗಂಟೆ 12 ರಿಂದ ಮಧ್ಯಾಹ್ನ ಗಂಟೆ 3ರ ವರೆಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ

ಮಧ್ಯಾಹ್ನ ಗಂಟೆ 3 ರಿಂದ ಸಂಜೆ 6 ಗಂಟೆವರೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ

ಮಧ್ಯಾಹ್ನ ಗಂಟೆ 3 ರಿಂದ ಸಂಜೆ 6 ಗಂಟೆವರೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ

ವಾಹನ ಸಂಚಾರ ಹಾದಿಯಲ್ಲಿ ಚೆಕ್ ಪೋಸ್ಟ್ ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬದಲಿ ಮಾರ್ಗ : ಚಾರ್ಮಾಡಿ ಘಾಟಿ

ಹಾಸನ: ದೋಣಿಗಲ್ ಬಳಿ ಭೂಕುಸಿತದಿಂದ ಸಂಚಾರ ಸ್ಥಗಿತಗೊಳಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈಗ ಬದಲಿ ರಸ್ತೆ ಅಭಿವೃದ್ಧಿಪಡಿಸಲಾಗಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬದಲಿ ಮಾರ್ಗದಲ್ಲಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಬೆಳಿಗ್ಗೆ 6ರಿಂದ ಬೆಳಿಗ್ಗೆ 8 ಹಾಗೂ ಮಧ್ಯಾಹ್ನ 12ರಿಂದ ಮಧ್ಯಾಹ್ನ 3ರವರೆಗೆ ಸಂಚರಿಸಬಹುದು. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳು ಬೆಳಿಗ್ಗೆ 9ರಿಂದ 11 ಹಾಗೂ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ