ವಿಶ್ವ ಶ್ರವಣ ದಿನಾಚರಣೆ 2021 , ಹಾಸನ

0

ಹಾಸನ.ಮಾ.03(ಹಾಸನ್_ನ್ಯೂಸ್ !,  ಪಂಚೇಂದ್ರಿಯಗಳಲ್ಲಿ ಕಿವಿ  ಅತ್ಯಂತ ಪ್ರಮುಖವಾಗಿದ್ದು ಶ್ರವಣ ದೋಷದಿಂದ ಬಳಲುತ್ತಿರುವರು ಸೂಕ್ತ ಚಿಕತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಿದ್ದ  ವಿಶ್ವ ಶ್ರವಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 2016 ರಿಂದ ಪ್ರತಿವರ್ಷವೂ ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತಿದೆ ಶ್ರವಣ ದೋಷದ ಅರಿವು ಹಾಗೂ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಹಾಸನ ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಆರ್. ಡಾ|| ನಾಗೇಶ್ ಮಾತನಾಡಿ ಶ್ರವಣ ದೋಷದಿಂದ ಬಳಲುತ್ತಿರುವವರನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿ ಶ್ರವಣ ದೋಷದಿಂದ ಮುಕ್ತವಾಗಿಸಬೇಕು ಮುಂದೆ ಶ್ರವಣದೋಷ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಶ್ರವಣ ದೋಷದಿಂದ ಹೆಚ್ಚಿನ ಅರಿವನ್ನು ಮೂಡಿಸಿ ಎಂದರು.

ಕಿವಿ-ಗಂಟಲು ವಿಭಾಗದ ಮುಖ್ಯಸ್ಥರಾದ ಡಾ|| ರಾಘವೇಂದ್ರ ಪ್ರಸಾದ್ ಅವರು ಮಾತನಾಡಿ ಜ್ಞಾನೇಂದ್ರಿಯಗಳಲ್ಲಿ ಮುಖ್ಯವಾದದ್ದು ಕಿವಿ ಆದ್ದರಿಂದ ಶ್ರವಣ ದೋಷಕ್ಕೊಳಪಟ್ಟವರು ಹೊರಜಗತ್ತಿನ ನಡುವೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, 2020 ರ ಪ್ರಕಾರ ಪ್ರಪಂಚದಲ್ಲಿ 46 ಕೋಟಿ ಜನರು ಶ್ರವಣ ದೋಷದಿಂದ ಬಳಲುತ್ತಿದ್ದು ಭಾರತದಲ್ಲಿ 2019ರ ಪ್ರಕಾರ 6.3 ಕೋಟಿ ಜನರು ಬಳಲುತ್ತಿದ್ದಾರೆ ಇವರಲ್ಲಿ 3.4 ಕೋಟಿ 10 ವರ್ಷದೊಳಗಿನ ಮಕ್ಕಳು ಬಳಲುತ್ತಿದ್ದಾರೆ 2050ನೇ ವರ್ಷಕ್ಕೆ ಶ್ರವಣದಿಂದ ಬಳಲುವ ಸಂಖ್ಯೆ 90 ಕೋಟಿ ಜನರು ಹೆಚ್ಚಾಗಬಹುದು ಎಂದರು.

ಜಿಲ್ಲೆಯಲ್ಲಿ 22 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 110 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪ್ರತಿವರ್ಷ ನಾಲ್ಕರಿಂದ ಐದು ಮಕ್ಕಳಲ್ಲಿ ಶ್ರವಣದೋಷ ಕಂಡುಬರುತ್ತಿದೆ ಎಂದರಲ್ಲದೆ ಕಾಕ್ಲಿಯರ್ ಇಪ್ಲಾಂಟ್ ವ್ಯವಸ್ಥೆ ಹಿಮ್ಸ್ ಗೆ ಬಂದರೆ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಆರ್.ಸಿ.ಎಚ್ ಅಧಿಕಾರಿ ಡಾ|| ಕಾಂತರಾಜು, ಡಾ|| ಈಶ್ವರ ಪ್ರಸಾದ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ವೇಳೆ ಶ್ರವಣ ದೋಷದಿಂದ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ವಿವಿಧ ಸ್ಪರ್ಧೆಗನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here