ಶ್ರೀಮತಿ ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್, ಯಾಂತ್ರಿಕ (ಎಂ.ಟಿ.ಟಿ.) ಪ್ರವೇಶ ಆರಂಭ

0

ಅರ್ಜಿ ಆಹ್ವಾನ
ಹಾಸನ ಅ. : ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಹಾಸನ ನಗರದ  ಶ್ರೀಮತಿ ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್, ಯಾಂತ್ರಿಕ (ಎಂ.ಟಿ.ಟಿ.) ವಿಭಾಗದಲ್ಲಿ 2021-22 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮ ಪ್ರವೇಶದ ಉಳಿದ ಸೀಟುಗಳಿಗಾಗಿ ಆಫ್‍ಲೈನ್ ಅರ್ಜಿಗಳನ್ನು ಕರೆಯಲಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ನೇರವಾಗಿ ಪ್ರವೇಶ ಪಡೆಯಬಹುದಾಗಿದ್ದು, ಅ.19 ಕೊನೆಯದಿನವಾಗಿರುತ್ತದೆ ಎಂದು ಪ್ರಾಂಶುಪಾಲರಾದ ಮೇಜರ್ ವೆಂಕಟೇಶ್‍ರವರು ತಿಳಿಸಿದ್ದಾರೆ.

ಖೇಲೋ ಇಂಡಿಯಾ ಯೋಜನೆಯಡಿ  ನೇಮಕಾತಿಗಾಗಿ ಅರ್ಜಿ ಆಹ್ವಾನ
ಹಾಸನ ಅ. : ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಇರುವ ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರ, ವಿದ್ಯಾನಗರ ಬೆಂಗಳೂರು ಅನ್ನು ರಾಜ್ಯ ಉತ್ಕøಷ್ಟತಾ ಕೇಂದ್ರ(ಈಜು, ಅಥ್ಲೆಟಿಕ್ಸ್ ಮತ್ತು ಶೂಟಿಂಗ್) ಎಂದು ಘೋಷಿಸಿ ಮಂಜೂರು ಮಾಡಿರುತ್ತಾರೆ. ಈ ಕೇಂದ್ರಕ್ಕೆ ಖೇಲೋ ಇಂಡಿಯಾ ನಿಯಮಗಳನುಸಾರ ಗುತ್ತಿಗೆ ಆಧಾರದ ಮೇಲೆ Young Professional, Sports Masseur and Sports Nutritionist ನೇಮಕಾತಿಗಾಗಿ ಅರ್ಹ ಅಭ್ಯಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತಿ ಹೊಂದಿದ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ದೃಢೀಕೃತ ದಾಖಲೆಗಳೊಂದಿಗೆ ಅ. 10 ಸಂಜೆ 5 ಗಂಟೆಯೊಳಗೆ  ಕಚೇರಿಗೆ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮಾನ್ಯ ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ರವರ ಕಚೇರಿ ದೂ.ಸಂ 080 22215601 ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here