social cause

ಅಸ್ವಸ್ಥ ಸ್ಥಿತಿಯಲ್ಲಿದ್ದ ಯುವತಿಯ ರಕ್ಷಿಸಿದ ಹಾಸನದ ಕಾಳಜಿ ಯುವಪಡೆ

By

April 01, 2021

ಹಾಸನ : ಹಾಸನ ನಗರದದ ,  ಮಹಾರಾಜ ಪಾರ್ಕಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಬಾಲಕಿ ನೋಡಿದ ಕೆಲವರು , ಅಪಹಾಸ್ಯಗೈದು ಹೋದರೆ .,‌ಕೆಲವರು , ಅಯ್ಯೋ ಪಾಪ ಎನ್ನುತ್ತಲೇ ಕಾಲ್ಕಿತ್ತಿದ್ದರು .,

ಹಲವು ಗಂಟೆಗಳಬಳಿಕ .,‌ ಅಲ್ಲೇ ವಾಯುವಿಹಾರಕ್ಕೆ ಬಂದಿದ್ದ ಸಮಾಜ ಸೇವಕ ಅಕ್ಮಲ್ ಜಾವೀದ್ ಮತ್ತು ಸ್ನೇಹಿತರು .,  ವಿಚಾರಣೆ ಮಾಡಿದ ನಂತರ ವಯಕ್ತಿಕ ಕಾರಣಗಳಿಂದ ಮನೆ ಬಿಟ್ಟು ಬಂದು

ಕಳೆದ ಮೂರು ತಿಂಗಳುಗಳಿಂದಲೂ ನಗರದ ಹಲವೆಡೆ ಅಲೆದಾಡುತ್ತಾ ಬಸ್ ನಿಲ್ದಾಣ, ಪಾರ್ಕ್ , ಕ್ರೀಡಾಂಗಣ ., ಅಲ್ಲಿ ಇಲ್ಲಿ ಎಂಬಂತೆ ನಗರದ ಇತರೆ ಜಾಗದಲ್ಲಿ ತಂಗುತ್ತಾ ದಿನ ದೂಡುತ್ತಿರೋದು ವಿಷಯ ಗೊತ್ತಾಗಿದೆ ., .

ಇತ್ತೀಚಿಗೆ ಕೆಲ ಪುಂಡರಿಂದಲೂ ದೌರ್ಜನ್ಯಗಳನ್ನು / ಹಿಯಾಳಿಸೋದನ್ನು ಎದುರಿಸುತ್ತಲೆ ಇದ್ದೇನೆ ಎಂದು ನೊಂದ ಯುವತಿ ಹೇಳಿಕೆಯ ನೀಡಿದಾಗ ,  ಆ ಬಾಲಕಿಯನ್ನು ಜೇನುಗಿರಿ ಪತ್ರಿಕೆಯ ರಮೇಶ ಹಾಸನ್, ಅಕ್ಮಲ್ ಜಾವೀದ್ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಕಾಂತರಾಜು ರವರ ನೇತೃತ್ವದಲ್ಲಿ

ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಮಾಡಿಸುತ್ತಿದ್ದು ಬಾಲಕಿ ಚೇತರಿಸಿಕೊಳ್ಳತ್ತಿದ್ದಾಳೆ , ಎಂದು ತಿಳಿದು ಬಂದಿದೆ .,  ಮುಂದಿನ ದಿನಗಳಲ್ಲಿ ಸಂಪೂರ್ಣ ಚೇತರಿಕೆಯ ನಂತರ “ಉಜ್ವಲ” ಸಾಂತ್ವಾನ ಕೇಂದ್ರಕ್ಕೆ ಕಳಿಸಲಾಗುವುದು. ಎಂದು ಸಾಂತ್ವನ ಕೇಂದ್ರಕ್ಕೆ ಮನವಿ ಮಾಡಲಾಗಿರುತ್ತದೆ .,

ಯುವತಿಗೆ ಯಾವ ಸಂಬಂದಿಗಳು ಇದ್ದರೆ , ಉಜ್ವಲ ಸಾಂತ್ವನ ಕೇಂದ್ರಕ್ಕೆ ವಿಷಯ ತಿಳಿಸಬಹುದು ., 

ಇವರಿಗೆ ವಯಕ್ತಿಕವಾಗಿ ಸಹಾಯ ಮಾಡಲಿಚ್ಚಿಸುವರು.,  ಯುವತಿಗೆ ಒಂದಷ್ಟು ಬಟ್ಟೆ, ದಿನ ನಿತ್ಯದ ವಸ್ತುಗಳ ಅಗತ್ಯವಿದೆ ಹಾಗಾಗಿ ಸಹಾಯ ಮಾಡಲು ಇಚ್ಚಿಸುವವರು ದಯವಿಟ್ಟು  ಈ ಫೋನ್ ಸಂಖ್ಯೆಗೆ ಕರೆ 09632082999 , 8747043485 ಮಾಡಿ ಸಹಾಯ ಮಾಡಬಹುದಾಗಿದೆ  