ಹಾಸನದ ವಾಕ್ ಶ್ರವಣ ದೋಷದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ವ್ಯವಸ್ಥೆ

  0

  ಹಾಸನ : (ಹಾಸನ್_ನ್ಯೂಸ್) !, ಹಾಸನ ಜಿಲ್ಲೆಯಲ್ಲಿರುವ ವಾಕ್ ಶ್ರವಣ ದೋಷವುಳ್ಳ ಮಕ್ಕಳಿಗೆ ಉಚಿತವಾಗಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ನೀಡಲು ತುಮಕೂರು ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯವರು ತುಮಕೂರು ನಗರ ವ್ಯಾಪ್ತಿಯಲ್ಲಿರುವ ವಸತಿ ಶಾಲೆಯಲ್ಲಿ ನೊಂದಣಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ.

  ಬಹಳ ವರ್ಷಗಳಿಂದ ಈ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ.  ತುಮಕೂರು ಜಿಲ್ಲೆಯ ರೆಡ್ ಕ್ರಾಸ್ ಸಭಾಪತಿಗಳ ಕೋರಿಕೆ ಮೇರೆಗೆ ನಮ್ಮ ಜಿಲ್ಲೆಯ ಶ್ರವಣ ದೋಷವಿರುವ ಮಕ್ಕಳು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಲು ಬಯಸಿದರೆ, ಅಂಥಹ ಮಕ್ಕಳ ಪೋಷಕರು ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಹಾಯವಾಣಿ ಸಂಖ್ಯೆ 9141516430 ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ತಮ್ಮ ಮಕ್ಕಳ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

  ಇತ್ತೀಚೆಗೆ ಇದೇ ಶಾಲೆಗೆ ಪ್ರತಿಷ್ಠಿತ ಸಂಸ್ಥೆಯಾದ ಇನ್ಪೋಸಿಸ್ ಫೌಂಡೇಶನ್‍ರವರು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ನೀಡಲು ಅಗತ್ಯವಿರುವ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು 10 ಕೋಟಿ ರೂಗಳ ದೇಣಿಗೆ ನೀಡಿದ್ದು ಶಾಲೆಗೆ ಸುಸುಜ್ಜಿತ 3 ಅಂತಸ್ತಿನ ಕೌಶಲ್ಯ ತರಬೇತಿಗಾಗಿ ಕಟ್ಟಡವನ್ನು ನಿರ್ಮಿಸಿಕೊಡುತ್ತಿದೆ. ಈ ತರಬೇತಿಯಿಂದ ವಿಶೇಷ ಚೇತನ ವಿದ್ಯಾರ್ಥಿಗಳು ಸ್ವತಂತ್ರ ಜೀವನ ನಡೆಸಲು ಅವಕಾಶವಾಗುತ್ತದೆ.
  ಆಸಕ್ತ ಪೋಷಕರು ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯನ್ನು ಸಂಪರ್ಕಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ !!

  www.hassananews.com

  HASSANNEWS  ಸಖತ್ newzz ಮಗ

  LEAVE A REPLY

  Please enter your comment!
  Please enter your name here