ಹಾಸನದ ಹೆಮ್ಮೆಯ ಬಾಕ್ಸಿಂಗ್ ಕ್ರೀಡಾಪಟು ಮಧುರಾ ರವರು ಹರ್ಯಾಣದಲ್ಲಿ ನಡೆಯಲಿರುವ 5ನೇ ಎಲೈಟ್ ರಾಷ್ಟ್ರಮಟ್ಟದ ಮಹಿಳಾ ಬಾಕ್ಸಿಂಗ್ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್(ಕರ್ನಾಟಕ ಒಲಿಂಪಿಕ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿದೆ) ವತಿಯಿಂದ ಆಯ್ಕೆಯಾಗಿದ್ದು ಮಧುರ ರವರು ಹಾಸನ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ನ ಕ್ರೀಡಾಪಟುವಾಗಿದ್ದು ಮೇಲ್ಕಂಡ ಪಂದ್ಯಾವಳಿಯು
ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ(ಭಾರತ ಸರ್ಕಾರದ ಕ್ರೀಡಾ ಮಂತ್ರಾಲಯ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆ ಯಿಂದ ಮಾನ್ಯತೆ ಪಡೆದ) ದ ವತಿಯಿಂದ ಆಯೋಜಿಸಲ್ಪಟ್ಟಿದು
ಹಾಸನ ಜಿಲ್ಲೆಯಿಂದ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಮೊದಲ ಸ್ಪರ್ಧಿ ಇವರಾಗಿದ್ದಾರೆ
ಇವರು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ವಿಜೇತರಾದಲ್ಲಿ ಇವರಿಗೆ ಭಾರತ ಸರ್ಕಾರದ ಹಾಗೂ ಕರ್ನಾಟಕ ಸರ್ಕಾರದ ಕೆಲಸಗಳಲ್ಲಿ ಕ್ರೀಡಾ ಕೋಟಾದಡಿ ಮೀಸಲಾತಿ ದೊರೆಯುತ್ತದೆ ಹಾಗೂ ಸರ್ಕಾರದ ಎಲ್ಲಾ ಪ್ರಶಸ್ತಿಗಳಿಗೆ ಅರ್ಹರಾಗುತ್ತಾರೆ ಹಾಗೂ ಮುಂದೆ ಅಂತಾರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗಳು ಹಾಗೂ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಗಳು ಸಹ ದೊರೆಯಲಿವೆ ಎಂದು ತಿಳಿಸುತ್ತಾ ಈ ಸಂದರ್ಭದಲ್ಲಿ ಅವರಿಗೆ ಹಾಸನ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ವತಿಯಿಂದ ಹಾಗೂ
ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ , ಹಾಸನ ಜನತೆಯ ವತಿಯಿಂದ ಇವರಿಗೆ ಶುಭಾಶಯಗಳು ಗೆದ್ದು ಬನ್ನಿ @madhurawrestler #sportsnewshassan